Mahant Bhagwatigiri ji Visited Sanatan Sanastha Exhibition : ಸನಾತನ ಸಂಸ್ಥೆಯ ಪ್ರದರ್ಶನದಿಂದ ಪ್ರಭಾವಿತನಾದೆ ! – ಮಹಂತ್ ಭಗವತಿಗಿರಿಜಿ, ಗುಜರಾತ್

ಮಹಾಕುಂಭ ಮೇಳ 2025

ಮಹಂತ್ ಭಗವತಿಗಿರಿಜಿ ಮಹಾರಾಜ್

ಪ್ರಯಾಗರಾಜ್, ಜನವರಿ 8 (ಸುದ್ದಿ) – ಸನಾತನ ಸಂಸ್ಥೆಯ ಪ್ರದರ್ಶನ ಕಕ್ಷೆಯ ಹೊರಗಿರುವ ಗುರು-ಶಿಷ್ಯ ಫಲಕವನ್ನು ನೋಡಿ ನಾನು ಆಕರ್ಷಿತನಾದೆ. ನಾನು ಪ್ರದರ್ಶನವನ್ನು ನೋಡಿದಾಗ ತುಂಬಾ ಪ್ರಭಾವಿತನಾದೆ. ನೀವು ಮಾಡುತ್ತಿರುವ ಸನಾತನ ಧರ್ಮದ ಕಾರ್ಯವು ತುಂಬಾ ಆವಶ್ಯಕವಾಗಿದ್ದೂ ಅದು ನಮ್ಮ ಸಂಸ್ಕೃತಿಯಾಗಿದೆ. ಸನಾತನ ಧರ್ಮದ ರಕ್ಷಣೆಯಾಗಬೇಕು. ನಿಮ್ಮ ಕಾರ್ಯದ ಬಗ್ಗೆ ಮಾತನಾಡಲು ನನ್ನ ಬಳಿ ಶಬ್ದಗಳೇ ಇಲ್ಲಾ, ಎಂದು ಕುಂಭನಗರಿ ಪ್ರಯಾಗ್‌ರಾಜ್‌ನಲ್ಲಿ ಸನಾತನ ಸಂಸ್ಥೆಯ ‘ಮೋರಿ ಮುಕ್ತಿ ಮಾರ್ಗ’ದಲ್ಲಿ ನಡೆದ ಪ್ರದರ್ಶನಕ್ಕೆ ಭೇಟಿ ನೀಡಿದ ಗುಜರಾತ್‌ನ ಮಹಂತ್ ಭಗವತಿಗಿರಿಜಿ ಮಹಾರಾಜ್ ಅವರು ಹೇಳಿದರು.

ನಿಮ್ಮ ಗೌರವಾನ್ವಿತ ಗುರೂಜಿ (ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ) ಅವರಿಗೆ ನನ್ನ ಗೌರವವನ್ನು ವ್ಯಕ್ತಪಡಿಸುತ್ತೇನೆ ಎಂದು ಮಹಂತ ಭಗವತಿಗಿರಿಜಿ ಹೇಳಿದರು. ಸನಾತನ ಧರ್ಮದ ಈ ಕಾರ್ಯಕ್ಕೆ ಸಹಕರಿಸುವಂತೆ ನಾನು ಹಿಂದೂಗಳಲ್ಲಿ ಮನವಿ ಮಾಡುತ್ತೇನೆ. ಸಂಸ್ಥೆಯ ಮೂಲಕ ನಡೆಯುತ್ತಿರುವ ಕಾರ್ಯಕ್ಕೆ ಕೊಡುಗೆ ನೀಡಿ. ನಮ್ಮ ಸಂಸ್ಥೆಗಳು ಬೇರೆ ಬೇರೆಯಾದರೂ ಹಿಂದೂ ಧರ್ಮದ ಕಾರ್ಯ ಇದೊಂದೇ ಗುರಿ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕು. ಪ್ರಸ್ತುತ ಜನರು ಪಾಶ್ಚಿಮಾತ್ಯ ಸಂಸ್ಕೃತಿಯತ್ತ ಮುಖ ಮಾಡುತ್ತಿರುವಾಗ ಜನರಿಗೆ ಧರ್ಮ ಶಿಕ್ಷಣ ನೀಡುವ ನಿಮ್ಮ ಕಾರ್ಯ ಶ್ಲಾಘನೀಯವಾಗಿದೆ ಎಂದು ಹೇಳಿದರು.