ಮಹಾಕುಂಭಮೇಳದ ಭದ್ರತಾ ವ್ಯವಸ್ಥೆಗಾಗಿ ಎರಡೂವರೆ ಕೋಟಿ ರೂಪಾಯಿ ಮೌಲ್ಯದ ವರೆಗಿನ ‘ಅಶ್ವಶಕ್ತಿ’ ಕುದುರೆಗಳ ನಿಯೋಜನೆ!

ಪ್ರಯಾಗರಾಜ್ – ಮಹಾಕುಂಭ-2025 ರ ಭದ್ರತಾ ವ್ಯವಸ್ಥೆಯಲ್ಲಿ ‘ಅಶ್ವಶಕ್ತಿ’ ಹೆಸರಿನ ಕುದುರೆಗಳನ್ನು ನಿಯೋಜಿಸಲಾಗಿದೆ. ಈ ಕುದುರೆಗಳು ಸಾಮಾನ್ಯವಲ್ಲ. ಅವುಗಳಿಗೆ ಉತ್ತಮ ರೀತಿಯ ತರಬೇತಿ ನೀಡಲಾಗಿದೆ. ಸುಳಿವುಗಳನ್ನು ಅನುಸರಿಸುವ ಮೂಲಕ ಮಾರ್ಗ ತೆಗೆಯುತ್ತವೆ. ಈ ಕುದುರೆಗಳು ನೆಲದ ಮೇಲೆ ಮತ್ತು ನೀರಿನಲ್ಲಿಯೂ ಓಡಬಲ್ಲವು. ಜಾತ್ರೆಯಲ್ಲಿ ಜನಸಂದಣಿಯನ್ನು ನಿಯಂತ್ರಿಸಲು ಈ ಕುದುರೆಗಳೊಂದಿಗೆ ಉತ್ತರ ಪ್ರದೇಶದ ‘ಟ್ರೈನ್ ಮೌಂಟೆಡ್’ ಪೊಲೀಸರನ್ನು ನಿಯೋಜಿಸಲಾಗಿದೆ. 130 ಕುದುರೆಗಳೊಂದಿಗೆ ಸೈನಿಕರು ವಿವಿಧ ಗುಂಪುಗಳಲ್ಲಿ ಗಸ್ತು ತಿರುಗಲು ಹೊರಡುತ್ತಾರೆ. ಕುದುರೆ ಸವಾರಿ ತಂಡವು ಭಾರತೀಯ ತಳಿಯ ಹೊರತಾಗಿ, ಅಮೇರಿಕನ್ ಮತ್ತು ಇಂಗ್ಲಿಷ್ ತಳಿಯ ಕುದುರೆಗಳನ್ನು ಸಹ ಒಳಗೊಂಡಿದೆ. ಅವುಗಳ ಮೌಲ್ಯ 50 ಲಕ್ಷದಿಂದ 2.5 ಕೋಟಿ ರೂಪಾಯಿಗಳ ತನಕ ಇದೆ.

ಎಲ್ಲಾ ಕುದುರೆಗಳ ಕುತ್ತಿಗೆಗಳಲ್ಲಿ ವಿಶೇಷ ಉಪಕರಣವನ್ನು ಅಳವಡಿಸಲಾಗಿದೆ. ಸದ್ಯ ಮೌಂಟೆಡ್ ಪೊಲೀಸರು ಬೆಳಗ್ಗೆ ಮತ್ತು ಸಂಜೆ ಕುದುರೆಗಳೊಂದಿಗೆ ಗಸ್ತು ತಿರುಗುತ್ತಿದ್ದಾರೆ. ಮಹಾಕುಂಭ ಮೇಳ ಪ್ರಾರಂಭವಾದ ತಕ್ಷಣ 24 ಗಂಟೆಗಳ ಕಾಲ ಪಾಳಿಯಲ್ಲಿ ಗಸ್ತು ತಿರುಗಲಿದ್ದಾರೆ.