ಪ್ರಧಾನಿ ನರೇಂದ್ರ ಮೋದಿಯವರು ಅಯೋಧ್ಯೆಯಲ್ಲಿ ಮಸಿದಿಗೆ ಅಡಿಪಾಯ ಹಾಕಬೇಕು ! – ಇಂಡಿಯನ್ ಮುಸ್ಲಿಂ ಲೀಗ್ ವಿನಂತಿ
ಶ್ರೀರಾಮ ಜನ್ಮಭೂಮಿ ಪ್ರಕರಣದಲ್ಲಿ ಅಯೋಧ್ಯೆಯಲ್ಲಿ ಮಸೀದಿ ನಿರ್ಮಿಸಲು 5 ಎಕರೆ ಭೂಮಿ ನೀಡುವಂತೆ ಮುಸ್ಲಿಂ ಪಕ್ಷಕ್ಕೆ ಸುಪ್ರೀಂ ಕೋರ್ಟ್ ಆದೇಶ ನೀಡಿತ್ತು. ಈ ಸ್ಥಳದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಮಸಿದಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಶಂಕುಸ್ಥಾಪನೆ ಮಾಡಬೇಕೆಂದು ಇಂಡಿಯನ್ ಮುಸ್ಲಿಂ ಲೀಗ್ ಮನವಿ ಮಾಡಿದೆ.