ಅಲಿಗಡ (ಉತ್ತರಪ್ರದೇಶ) – ಇಲ್ಲಿ ‘ರಾಮ ಬಾರಾತ’ ನಡೆಸುವ ಹಿಂದುಗಳ ಮೆರವಣಿಗೆ ಮಸೀದಿಯ ಹತ್ತಿರ ಬಂದಾಗ ಸುಮಾರು ೧೫೦ ಮತಾಂಧ ಮುಸಲ್ಮಾನರು ಅವರ ಮೇಲೆ ದಾಳಿ ಮಾಡಿದ್ದರಿಂದ ೨೫ ಜನರು ಗಾಯಗೊಂಡರು. ‘ರಾಮ ಬಾರಾತ’ ಇದು ಉತ್ತರ ಭಾರತದಲ್ಲಿ ಆಚರಿಸಲಾಗುವ ಮಹೋತ್ಸವದ ಭಾಗವಾಗಿದೆ. ಇದರಲ್ಲಿ ಸೀತೆಯ ವಿವಾಹ ಶ್ರೀರಾಮನೊಂದಿಗೆ ಆಗಾದ ಮೆರವಣಿಗೆ ನಡೆಸಲಾಗುತ್ತದೆ. ಇದಕ್ಕೆ ‘ರಾಮ ಬಾರಾತ’ ಎಂದು ಹೇಳುತ್ತಾರೆ. ಈ ಮೆರವಣಿಗೆಯ ಮೇಲೆ ದಾಳಿ ಮಾಡುವಾಗ ಮತಾಂಧ ಮುಸಲ್ಮಾನರು ಖಡ್ಗ, ಕಬ್ಬಿಣದ ಸರಪಳಿ, ನಾಡ ಪಿಸ್ತುಲ್, ಕೊಡಲಿ ಮುಂತಾದ ಶಸ್ತ್ರಾಸ್ತ್ರಗಳನ್ನು ಬಳಸಿದರು. ಅವರು ಮೆರವಣಿಗೆ ತಡೆಯಲು ಇಚ್ಚಿಸಿದ್ದರು. ಈ ದಾಳಿ ನಿಯೋಜಿತ ರೀತಿಯಲ್ಲಿ ಮಾಡಲಾಗಿತ್ತು. ಈ ಘಟನೆಯ ವಿರುದ್ಧ ಹಿಂದುತ್ವನಿಷ್ಠ ಸಂಘಟನೆಗಳಿಂದ ಪೋಲಿಸ ಠಾಣೆಯ ಹೊರಗೆ ಪ್ರತಿಭಟನೆ ನಡೆಸಿದರು. ಅವರು ಆರೋಪಿಗಳನ್ನು ಬಂಧಿಸಲು ಆಗ್ರಹಿಸಿದ್ದಾರೆ.
ರಾಮ ಬಾರಾತ ಮೆರವಣಿಗೆ ಮಸೀದಿಯ ಹತ್ತಿರ ಹೋಗುತ್ತಿರುವಾಗ ಮೊದಲು ಅದರ ಮೇಲೆ ಕಲ್ಲು ತೂರಾಟ ನಡೆಸಿದರು. ಇದರಿಂದ ಮೇರವಣಿಗೆಯಲ್ಲಿ ಸಹಭಾಗಿ ಆಗಿರುವ ಹಿಂದೂಗಳಲ್ಲಿ ಗೊಂದಲ ನಿರ್ಮಾಣವಾಯಿತು. ಅದರ ನಂತರ ಮತಾಂಧರು ಅವರ ಮೇಲೆ ದಾಳಿ ಮಾಡಿದರು.
ಸಂಪಾದಕೀಯ ನಿಲುವುಉತ್ತರಪ್ರದೇಶದಲ್ಲಿ ಭಾಜಪದ ಸರಕಾರ ಇರುವಾಗ ಈ ರೀತಿಯ ಘಟನೆ ಘಟಿಸಬಾರದೆಂದು ಹಿಂದುಗಳಿಗೆ ಅನಿಸುತ್ತದೆ ! ಮಸೀದಿಯ ಹತ್ತಿರದ ಮತಾಂಧ ಮುಸಲ್ಮಾನರ ಬಳಿಗೆ ಶಸ್ತ್ರಾಸ್ತ್ರಗಳು ಎಲ್ಲಿಂದ ಬರುತ್ತದೆ, ಇದನ್ನು ಪೊಲೀಸರು ತನಿಖೆ ನಡೆಸಬೇಕು ! |