ರಷ್ಯಾದಿಂದ ತೈಲ ಖರೀದಿಸುವ ಭಾರತ ಸೇರಿದಂತೆ ೫ ದೇಶಗಳ ಮೇಲೆ ಶೇ. ೧೦೦ ರಷ್ಟು ಸುಂಕ ವಿಧಿಸಲಿರುವ ಅಮೆರಿಕಾ ! : Oil purchase from Russia

ಸಂಸತ್ತಿನಲ್ಲಿ ಮಸೂದೆ ಮಂಡನೆ

ವಾಷಿಂಗ್ಟನ (ಅಮೆರಿಕಾ) – ಅಮೆರಿಕಾದ ಆಡಳಿತಾರೂಢ ರಿಪಬ್ಲಿಕನ್ ಮತ್ತು ವಿರೋಧ ಪಕ್ಷವಾದ ಡೆಮೋಕ್ರಟಿಕ್ ಪಕ್ಷಗಳ ಸಂಸದರು ರಷ್ಯಾದಿಂದ ತೈಲ ಖರೀದಿಸುವ ಭಾರತ, ಚೀನಾ, ಸ್ಲೋವಾಕಿಯಾ, ಹಂಗೇರಿ ಮತ್ತು ಅಜೆರಬೈಜಾನ ದೇಶಗಳ ಮೇಲೆ ಶೇ. ೧೦೦ ರಷ್ಟು ಸುಂಕವನ್ನು ವಿಧಿಸುವ ಕುರಿತಾದ ತಿದ್ದುಪಡಿ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಿದ್ದಾರೆ. ಇದು ಅಂಗೀಕೃತವಾದರೆ, ಒಂದು ದೇಶವು ರಷ್ಯಾದಿಂದ ತೈಲವನ್ನು ಖರೀದಿಸಿ ಅದರ ಆದಾಯವನ್ನು ಹೆಚ್ಚಿಸುತ್ತಿದೆ ಎಂಬ ಒಂದೇ ಕಾರಣಕ್ಕಾಗಿ ಅಮೆರಿಕಾವು ಆ ದೇಶದ ಮೇಲೆ ಇಷ್ಟು ದೊಡ್ಡ ಪ್ರಮಾಣದಲ್ಲಿ ಸುಂಕ ವಿಧಿಸುತ್ತಿರುವುದು ಇದೇ ಮೊದಲ ಬಾರಿಯಾಗಲಿದೆ. ವಿಶೇಷವೆಂದರೆ, ಈ ಮಸೂದೆಯ ಕರಡಿನಲ್ಲಿ ಮೊದಲು ಶೇ. ೫೦೦ ರಷ್ಟು ಸುಂಕ ವಿಧಿಸುವ ಪ್ರಸ್ತಾಪವಿತ್ತು, ಅದನ್ನು ಈಗ ಶೇ. ೧೦೦ ಕ್ಕೆ ಇಳಿಸಲಾಗಿದೆ.

ಅಧ್ಯಕ್ಷ ಟ್ರಂಪ್ ರವರು ಮುಂದುವರಿದು, ಫ್ರಾನ್ಸ, ಜರ್ಮನಿ, ಬ್ರಿಟನ, ಬೆಲ್ಜಿಯಮ್ ಸೇರಿದಂತೆ ೧೫ ಯುರೋಪಿಯನ್ ದೇಶಗಳನ್ನು ಈ ಮಸೂದೆಯ ವ್ಯಾಪ್ತಿಯಿಂದ ಹೊರಗಿಡಲಾಗಿದೆ ಎಂದು ತಿಳಿಸಿದ್ದಾರೆ. ಭಾರತದ ಮೇಲಿರುವ ಸದ್ಯದ ಶೇ. ೧೫ ರಷ್ಟು ಸುಂಕದ ಕಾಲಾವಧಿಯು ಜುಲೈ ೨೪ ರಂದು ಕೊನೆಗೊಳ್ಳಲಿದೆ; ಆದ್ದರಿಂದ ಟ್ರಂಪ್ ಈ ಮಸೂದೆಯನ್ನು ತರುವ ಮೂಲಕ ಭಾರತದ ಮೇಲೆ ವ್ಯಾಪಾರ ಒಪ್ಪಂದಕ್ಕಾಗಿ ಒತ್ತಡ ಹೇರುತ್ತಿದ್ದಾರೆ.

ಭಾರತವು ರಷ್ಯಾದಿಂದ ಕಚ್ಚಾ ತೈಲವನ್ನು ಖರೀದಿಸುವ ಮೂಲಕ ವಾರ್ಷಿಕವಾಗಿ ೬೦ ಸಾವಿರ ಕೋಟಿ ರೂಪಾಯಿಗಳನ್ನು ಉಳಿಸುತ್ತಿದೆ. ಒಂದು ವೇಳೆ ಶೇ. ೧೦೦ ರಷ್ಟು ಸುಂಕ ಜಾರಿಗೆ ಬಂದರೆ, ಅಮೆರಿಕಾಗೆ ರಫ್ತಾಗುವ ವಾರ್ಷಿಕ ೬ ಲಕ್ಷ ೫೦ ಸಾವಿರ ಕೋಟಿ ರೂಪಾಯಿಗಳ ವ್ಯಾಪಾರದ ಮೇಲೆ ಪರಿಣಾಮ ಬೀರಲಿದೆ, ಇದು ಭಾರತವು ಮಾಡುತ್ತಿರುವ ಉಳಿತಾಯದ ೧೦ ಪಟ್ಟು ಹೆಚ್ಚಾಗಿದೆ. ಅಲ್ಲದೆ, ಭಾರತದ ೨ ಲಕ್ಷ ೧೦ ಸಾವಿರ ಕೋಟಿ ರೂಪಾಯಿಗಳ ರಫ್ತಿನ ಮೇಲೂ ಇದರ ನೇರ ಪರಿಣಾಮ ಬೀರಲಿದೆ.

ಸಂಪಾದಕೀಯ ನಿಲುವು

ಅಮೆರಿಕಾದ ದಬ್ಬಾಳಿಕೆ !