ಪಾಟಲಿಪುತ್ರ (ಬಿಹಾರ) – ರಾಜ್ಯದ ಪಶ್ಚಿಮ ಚಂಪಾರಣ ಜಿಲ್ಲೆಯ ಮಜೌಲಿಯಾ ಪ್ರದೇಶದ ‘ಸೀತಾರಾಮ ಶಾಲೆಯಲ್ಲಿ’ ಭಾರತದ ರಾಷ್ಟ್ರಧ್ವಜವನ್ನು ಹಾರಿಸಿದ ನಂತರ ಕೆಲವು ಮುಸ್ಲಿಂ ಯುವಕರು ಇಸ್ಲಾಂ ಧ್ವಜವನ್ನು ಕೂಡ ಹಾರಿಸಿದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಓರ್ವನನ್ನು ಬಂಧಿಸಿದ್ದಾರೆ.
ಆಗಸ್ಟ 15 ರಂದು ಬೆಳಗ್ಗೆ ಶಾಲೆಯಲ್ಲಿ ಧ್ವಜಾರೋಹಣ ನಡೆಯುತ್ತಿದ್ದಾಗ ಕೆಲವು ಮುಸ್ಲಿಂ ಯುವಕರು ಶಾಲಾ ಆವರಣಕ್ಕೆ ನುಗ್ಗಿ ಇಸ್ಲಾಮಿಕ್ ಧ್ವಜವನ್ನು ಹಾರಿಸಿದರು. ಅಲ್ಲದೇ ಮುಸ್ಲಿಂ ಯುವಕರು ಕೆಲವು ಆಕ್ಷೇಪಾರ್ಹ ಘೋಷಣೆಗಳು ಕೂಗಿದರು. ಈ ವೇಳೆ ಶಿಕ್ಷಕರು ಹಾಗೂ ಸ್ಥಳೀಯರು ವಿರೋಧಿಸಿದರು. ಪೊಲೀಸರಿಗೆ ಮಾಹಿತಿ ಸಿಗುತ್ತಲೇ ಅವರು ಸ್ಥಳಕ್ಕೆ ತಲುಪಿದರು; ಆದರೆ ಅದಕ್ಕೂ ಮುನ್ನ ಮುಸ್ಲಿಂ ಯುವಕರು ಅಲ್ಲಿಂದ ಓಡಿ ಹೋಗಿದ್ದರು. (ಅಂತಹ ಸಂದರ್ಭದಲ್ಲಿ ಶಿಕ್ಷಕರು, ಸ್ಥಳೀಯರು ಮತ್ತು ವಿದ್ಯಾರ್ಥಿಗಳು ವೀಕ್ಷಕರ ಪಾತ್ರವನ್ನು ವಹಿಸಿದ್ದರೇ? ಹಿಂದೂಗಳ ಇಂತಹ ಹತಾಶ ಮನಃಸ್ಥಿತಿಯಿಂದಲೇ ಇಂದು ಮತಾಂಧರು ಉದ್ಧಟತನದಿಂದ ನಡೆದುಕೊಳ್ಳುತ್ತಿದ್ದಾರೆ ಎನ್ನುವುದನ್ನು ತಿಳಿಯಿರಿ ! – ಸಂಪಾದಕರು) ಈ ಸಮಯದಲ್ಲಿ, ಆ ಯುವಕರಲ್ಲಿ ಹನ್ನೊಂದನೇ ತರಗತಿಯಲ್ಲಿ ಓದುತ್ತಿರುವ ಶಾಹಿದ್ ಹಸನ್ ಎಂಬ ಯುವಕನನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಶಾಲೆಯ ಪ್ರಾಂಶುಪಾಲ ಅಶೋಕ ಕುಮಾರ ಅವರು ಮುಸ್ಲಿಂ ಯುವಕರ ಈ ಕೃತ್ಯವನ್ನು ನಿರ್ಲಕ್ಷಿಸಿ ವಿದ್ಯಾರ್ಥಿಗಳಿಗೆ ತಿನಿಸು ನೀಡುವುದರಲ್ಲಿ ಮಗ್ನರಾಗಿದ್ದರು ಎಂಬ ಆರೋಪ ಕೇಳಿ ಬರುತ್ತಿದೆ.
Bihar: Muslim youths raise Islamic flags at a school in West Champaran on 15th August, one Shahid Hasan arrestedhttps://t.co/9RHwWuBg2Q
— OpIndia.com (@OpIndia_com) August 16, 2023
ಕೇರಳದಲ್ಲಿ ರಾಷ್ಟ್ರಧ್ವಜ ಹಾರಿಸುವಾಗ ಮಸೀದಿಯ ಧರ್ಮಗುರುಗಳ ನಡುವೆ ವಾಗ್ವಾದ !
ಇನ್ನೊಂದು ಪ್ರಕರಣದಲ್ಲಿ, ಕೇರಳದ ಕಾಸರಗೋಡು ಜಿಲ್ಲೆಯ ‘ಜಮಾತ್ ಮಸೀದಿ ಸಮಿತಿ’ ಪ್ರದೇಶದಲ್ಲಿ ಧ್ವಜಾರೋಹಣ ಮಾಡುವಾಗ ಅಲ್ಲಿದ್ದ ಮುಸ್ಲಿಂ ಮುಖಂಡರ ನಡುವೆ ವಾಗ್ವಾದ ನಡೆದಿದೆ. ಆದ್ದರಿಂದ ರಾಷ್ಟ್ರಧ್ವಜದ ಅವಮಾನವಾಯಿತು. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗುತ್ತಿದೆ. ಈ ಸಂಬಂಧದಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ಸ್ಥಳೀಯ ಪತ್ರಕರ್ತರು ಮಾಹಿತಿ ನೀಡಿದ್ದಾರೆ.
ಸಂಪಾದಕೀಯ ನಿಲುವು
|