೩೮ ಗೋಶಾಲೆಗಳಿಗೆ ೫೭ ಕೋಟಿ ರೂಪಾಯಿಗಳ ವಸೂಲಾತಿ ನೋಟಿಸ್
ಸರಕಾರವು ಇಂತಹ ಗೋಶಾಲೆಗಳ ಮಾನ್ಯತೆಯನ್ನೇ ರದ್ದುಗೊಳಿಸಬೇಕು !

ಜೈಪುರ (ರಾಜಸ್ಥಾನ) – ಇಲ್ಲಿನ ೩೮ ಗೋಶಾಲೆಗಳು ತಮ್ಮ ಬಳಿ ವಾಸ್ತವಕ್ಕಿಂತ ಹೆಚ್ಚು ಗೋವುಗಳಿವೆ ಎಂದು ಹೇಳಿ ಕೋಟ್ಯಂತರ ರೂಪಾಯಿಗಳ ಸರಕಾರಿ ಅನುದಾನವನ್ನು ದುರುಪಯೋಗಪಡಿಸಿಕೊಂಡ ಆಘಾತಕಾರಿ ಘಟನೆಯು ರಾಜ್ಯದ ಮಹಾಲೇಖಪಾಲರ ವರದಿಯಲ್ಲಿ ಬಹಿರಂಗಗೊಂಡಿದೆ.
ಈ ವರದಿಯ ಪ್ರಕಾರ :
೧. ಕೆಲವು ಗೋಶಾಲೆಗಳಿಗೆ ಮೃತಪಟ್ಟ ಅಥವಾ ಅನುದಾನದ ಕಾಲಾವಧಿಯಲ್ಲಿ ಅಸ್ತಿತ್ವದಲ್ಲೇ ಇಲ್ಲದ ಗೋವುಗಳ ಹೆಸರಿನಲ್ಲಿಯೂ ಕೂಡ ಅನುದಾನ ನೀಡಲಾಗಿದೆ.
೨. ದೈನಂದಿನ ಗೋವಂಶ ದಾಖಲಾತಿ ಪುಸ್ತಕ ಮತ್ತು ‘ಭಾರತ ಪಶುಧನ’ ಜಾಲತಾಣದಲ್ಲಿನ ಮಾಹಿತಿಯ ನಡುವೆ ದೊಡ್ಡ ವ್ಯತ್ಯಾಸ ಕಂಡುಬಂದಿದೆ. ಅಧಿಕಾರಿಗಳು ಯೋಗ್ಯ ಪರಿಶೀಲನೆ ನಡೆಸದೆ ಅನುದಾನ ಮಂಜೂರು ಮಾಡಿರುವುದು ವರದಿಯಲ್ಲಿ ದಾಖಲಾಗಿದೆ.
೩. ಈ ೩೮ ಗೋಶಾಲೆಗಳು ತಮ್ಮ ಅರ್ಜಿಯಲ್ಲಿ ವಾಸ್ತವಿಕ ಸಂಖ್ಯೆಗಿಂತ ೧ ಲಕ್ಷ ೩೧,೦೦೦ ಅಧಿಕ ಗೋವುಗಳಿವೆ ಎಂದು ಹೇಳಿದ್ದವು. ದೊಡ್ಡ ಗೋವುಗಳಿಗೆ ಪ್ರತಿದಿನ ೪೦ ರೂಪಾಯಿ ಮತ್ತು ಸಣ್ಣ ಕರುಗಳಿಗೆ ೨೦ ರೂಪಾಯಿಗಳ ಲೆಕ್ಕದಲ್ಲಿ ಹೆಚ್ಚುವರಿ ಹಣ ವಿತರಿಸಲಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.
ದೊಡ್ಡ ಗೋಶಾಲೆಗಳ ಮೇಲಿರುವ ಆರೋಪಗಳು
ವರದಿಯಲ್ಲಿ ಜೈಪುರದ ‘ಪಿಂಜರಾಪೋಲ್ ಗೋಶಾಲೆ’ಗೆ ೧ ಕೋಟಿ ೮೧ ಲಕ್ಷ ರೂಪಾಯಿ, ಹಾಗೆಯೇ ‘ಹಿಂಗೋನಿಯಾ ಗೋಶಾಲೆ’ಗೆ ೧ ಕೋಟಿ ೪೧ ಲಕ್ಷ ರೂಪಾಯಿ ಹೆಚ್ಚುವರಿ ಅನುದಾನ ದೊರೆತಿರುವುದು ಉಲ್ಲೇಖವಾಗಿದೆ. ಇದರೊಂದಿಗೆ ಡಿಗ್ ಜಿಲ್ಲೆಯ ‘ಶ್ರೀ ಬ್ರಜ ಕಾಮದ ಸುರಭಿ ವನ ಶೋಧ ಸಂಸ್ಥಾನ ಗೋಶಾಲೆ’ಗೆ ೧೬ ಕೋಟಿ ೩೬ ಲಕ್ಷ ರೂಪಾಯಿ ಮತ್ತು ಜಾಲೋರ್ ನ ಪಥಮೇಡಾ ದ ‘ಶ್ರೀ ಗೋಪಾಲ ಗೋವರ್ಧನ ಗೋಶಾಲೆ’ಗೆ ೧೦ ಕೋಟಿ ೯೫ ಲಕ್ಷ ರೂಪಾಯಿ ಹೆಚ್ಚುವರಿ ಹಣ ನೀಡಿರುವುದಾಗಿ ವರದಿಯಲ್ಲಿ ತಿಳಿಸಲಾಗಿದೆ.
ವಸೂಲಿ ಮಾಡಲು ಆದೇಶ
ಮಹಾಲೇಖಪಾಲರ ಈ ವರದಿಯ ನಂತರ ಗೋಪಾಲನ ಇಲಾಖೆಯು ಸಂಬಂಧಪಟ್ಟ ೩೮ ಗೋಶಾಲೆಗಳಿಂದ ೫೭ ಕೋಟಿ.೩೬ ಲಕ್ಷ್ಮ ರೂಪಾಯಿಗಳನ್ನು ವಸೂಲಿ ಮಾಡಲು ಆದೇಶಿಸಿದೆ. ಆದಾಗ್ಯೂ, ಈಗಾಗಲೇ ಮೂರು ಬಾರಿ ನೋಟಿಸ್ ನೀಡಿದ್ದರೂ ಕೂಡ ಇನ್ನು ದೊಡ್ಡ ಮೊತ್ತದ ಹಣ ಮರಳಿ ಬಂದಿಲ್ಲ ಎಂದು ಹೇಳಲಾಗಿದೆ.
ಗೋಶಾಲೆಯ ಸಂಚಾಲಕರಿಂದ ಆರೋಪ ನಿರಾಕರಣೆಗೋಶಾಲೆಗಳ ಸಂಚಾಲಕರು ಮೇಲಿನ ಆರೋಪಗಳನ್ನು ಸಂಪೂರ್ಣವಾಗಿ ನಿರಾಕರಿಸಿದ್ದಾರೆ. “ಇದು ನಕಲಿ ಅನುದಾನ ಪಡೆದ ಪ್ರಕರಣವಲ್ಲ, ಕೇವಲ ಕಾಗದಪತ್ರಗಳು ಮತ್ತು ದಾಖಲೆಗಳಲ್ಲಿನ ತಾಂತ್ರಿಕ ದೋಷವಾಗಿದೆ. ಇದಕ್ಕೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ತನಿಖಾ ಸಮಿತಿಗೆ ಸಲ್ಲಿಸಲಾಗಿದ್ದು, ವಿಚಾರಣೆಯ ನಂತರ ಸತ್ಯಾಂಶ ಹೊರಬರಲಿದೆ” ಎಂದು ಹೇಳಿದ್ದಾರೆ. |
‘ಶ್ರೀಕೃಷ್ಣ ಮುಸಲ್ಮಾನರಾಗಿದ್ದರು ಮತ್ತು ದಿನಕ್ಕೆ ೫ ಬಾರಿ ನಮಾಜ್ ಮಾಡುತ್ತಿದ್ದರಂತೆ!’– Maulana Jarjis Ansari
ವಂಚನೆ ಅಥವಾ ಬ್ಲ್ಯಾಕ್ ಮೇಲ್ ಮೂಲಕ ದೈಹಿಕ ಸಂಬಂಧವಾದರೆ, ಅದನ್ನು ‘ಬಲಾತ್ಕಾರ’ ಎಂದು ಪರಿಗಣಿಸಲಾಗುವುದು! – ಮದ್ರಾಸ್ ಉಚ್ಚ ನ್ಯಾಯಾಲಯ
‘ಐ.ಆರ್.ಸಿ.ಟಿ.ಸಿ.’ಯ ಹೊಸ ಜಾಲತಾಣ ಕಾರ್ಯಾರಂಭ : ಟಿಕೆಟ್ ಕಾಯ್ದಿರಿಸುವಿಕೆ ಮತ್ತಷ್ಟು ಸುಲಭ
ಪುರಿಯಿಂದ ಜಗತ್ಪ್ರಸಿದ್ಧ ಜಗನ್ನಾಥ ರಥಯಾತ್ರೆಗೆ ಚಾಲನೆ!
ಭಾಗ್ಯನಗರ (ತೆಲಂಗಾಣ): ಹಿಂದೂ ವಿದ್ಯಾರ್ಥಿಗೆ ಮನೆ ಪಾಠದಲ್ಲಿ ‘ಕಲ್ಮಾ’ ಕಂಠಪಾಠ ಮಾಡಲು ಹೇಳಿದ ಶಿಕ್ಷಕಿ; ನೌಕರಿಯಿಂದ ವಜಾ!
ರಾಜಸ್ಥಾನದ ಜೈಲಿನಲ್ಲಿ ಜುಲೈ ೨೨ ರಂದು ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಕೈದಿಗಳ ವಿವಾಹವಾಗಲಿದೆ ! : Rajasthan Jail Marriage