|
ಮಥುರಾ (ಉತ್ತರಪ್ರದೇಶ) – ಪ್ರಸ್ತುತ ವಾರಣಾಸಿಯಲ್ಲಿನ ಜ್ಞಾನವಾಪಿಯ ಪರಿಸರದಲ್ಲಿ ವೈಜ್ಞಾನಿಕ ಸಮೀಕ್ಷೆ ನಡೆಯುತ್ತಿದೆ. ಇಂತಹದರಲ್ಲೇ ಮಥುರಾದಲ್ಲಿನ ಶ್ರೀ ಕೃಷ್ಣ ಜನ್ಮ ಭೂಮಿಯ ಕುರಿತು ಇದೇ ರೀತಿಯ ಸಮೀಕ್ಷೆ ನಡೆಯಬೇಕೆಂದು ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ. ‘ಶ್ರೀ ಕೃಷ್ಣ ಜನ್ಮಭೂಮಿ ಮುಕ್ತಿ ನಿರ್ಮಾಣ ನ್ಯಾಸ’ದಿಂದ ಈ ಅರ್ಜಿ ದಾಖಲಿಸಲಾಗಿದೆ. ಅರ್ಜಿಯ ಮೂಲಕ ನ್ಯಾಸವು, ಕಥಿತ ಶಾಹಿ ಈದ್ಗಾ ಮಸೀದಿಯ ಮೇಲೆ ಹಿಂದುಗಳ ಅಧಿಕಾರವಿದೆ. ಹಿಂದುಗಳ ದೇವಸ್ಥಾನ ಕೆಡವಿ ಈ ಮಸೀದಿ ಕಟ್ಟಲಾಗಿದೆ. ‘ಶ್ರೀಕೃಷ್ಣ ಜನ್ಮಭೂಮಿ ಮುಕ್ತಿ ನಿರ್ಮಾಣ ನ್ಯಾಸದ ಅಧ್ಯಕ್ಷ ಆಶುತೋಷ ಪಾಂಡೆಯ ಇವರು, ಶಾಹಿ ಈದ್ಗಾಹ ವ್ಯವಸ್ಥಾಪಕ ಸಮಿತಿಯಂತಹ ಸಂಸ್ಥೆಗಳು ಈ ಆಸ್ತಿಗೆ ಹಾನಿ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಶಾಹಿ ಈದ್ಗಾಹ ಮಸೀದಿಗೆ ‘ಮಸೀದಿ’ ಎಂದು ಒಪ್ಪಲು ಸಾಧ್ಯವಿಲ್ಲ. ಯಾರ ದಾವೆ ಶೇಕಡ 100 ರಷ್ಟು ಯೋಗ್ಯವಾಗಿದೆ ಎಂಬುದು ಈ ಪರಿಸರದ ಸಮೀಕ್ಷೆ ಆದನಂತರ ಖಚಿತವಾಗಿ ಹೇಳಬಹುದು. ಈ ರೀತಿಯ ಸಮೀಕ್ಷೆಯಿಂದ ವಿವಾದಿತ ಭೂಮಿಯ ಇತಿಹಾಸ ತಿಳಿಯಲು ಮತ್ತು ಧಾರ್ಮಿಕ ದೃಷ್ಟಿಯಿಂದ ಅದರ ಮಹತ್ವ ಅರಿಯಲು ಸಹಾಯವಾಗಬಹುದು. ಆಶುತೋಷ ಪಾಂಡೆಯ ಇವರು ‘ಸಿದ್ಧಪೀಠ ಮಾತಾ ಶಾಕುಂಬರಿ ಪೀಠಾಧೀಶ್ವರ ಭೃಗುವಂಶಿ’ ಈ ಸಂಸ್ಥೆಯ ಅಧ್ಯಕ್ಷರು ಕೂಡ ಆಗಿದ್ದಾರೆ. ಈಗ ಮಥೂರಾದ ಶ್ರೀ ಕೃಷ್ಣನ ದೇವಸ್ಥಾನ ಮತ್ತು ಈದ್ಗಾ ಮಸೀದಿ ಅಕ್ಕ-ಪಕ್ಕದಲ್ಲಿದ್ದು ಉಪಾಸನೆಗಾಗಿ ಎರಡೂ ತೆರೆದಿರುತ್ತವೆ; ಆದರೆ ಈದ್ಗಾ ಮಸೀದಿ ಇದೇ ಶ್ರೀ ಕೃಷ್ಣನ ಜನ್ಮಸ್ಥಾನವಿದೆ, ಎಂದು ಹಿಂದುಗಳ ಶ್ರದ್ಧೆಯಾಗಿದೆ. ಅದರ ಪ್ರಕಾರ ಈ ಅರ್ಜಿ ಹಿಂದುಗಳ ಪರವಾಗಿ ಮಾಡಲಾಗಿದೆ.
Krishna Janmabhoomi case: Plea filed in SC seeking Gyanvapi-like scientific survey of disputed Shahi Idgah site in Mathurahttps://t.co/9dD5jJNvR2
— OpIndia.com (@OpIndia_com) August 14, 2023
ಸಂಪಾದಕೀಯ ನಿಲುವುಹಿಂದುಗಳ ಐತಿಹಾಸಿಕ ದೇವಸ್ಥಾನಗಳ ಮೇಲೆ ಅಧಿಕಾರ ಪಡೆಯುವುದಕ್ಕಾಗಿ ಹಿಂದುಗಳಿಗೆ ನೂರಾರು ವರ್ಷಗಳಿಂದ ಹೋರಾಡಬೇಕಾಗಿದೆ, ಇದು ಹಿಂದುಗಳಿಗೆ ಲಜ್ಜಾಸ್ಪದ ! ಭವಿಷ್ಯದಲ್ಲಿ ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಈ ಎಲ್ಲಾ ದೇವಸ್ಥಾನಗಳನ್ನು ಪಡೆದ ನಂತರ ಕೂಡ ಅದರ ರಕ್ಷಣೆಗಾಗಿ ಹಿಂದುಗಳ ಹತ್ತಿರ ಭವಿಷ್ಯದಲ್ಲಿ ಯಾವುದಾದರೂ ಯೋಜನೆ ಇದೆಯೇ ? ಸರಕಾರವನ್ನು ಅವಲಂಬಿಸದೆ ದೇವಸ್ಥಾನಗಳ ರಕ್ಷಣೆ ಮಾಡುವುದಕ್ಕಾಗಿ ಹಿಂದುಗಳು ಸ್ವತಂತ್ರ ಮತ್ತು ಸಕ್ಷಮ ಯೋಜನೆ ರೂಪಿಸುವುದು ಕೂಡ ಅಷ್ಟೇ ಅವಶ್ಯಕವಾಗಿದೆ ! |