ಹಿಂದೂಗಳ ತೀವ್ರ ವಿರೋಧದ ನಂತರ ಕಲಾವಿದೆಯಿಂದ ಕ್ಷಮೆಯಾಚನೆ!

ಆದಿ ಶಂಕರಾಚಾರ್ಯರ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ ಪ್ರಕರಣ

ಉಡುಪಿ – ಉಡುಪಿಯ ಶ್ರೀಕೃಷ್ಣ ಮಠದ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಹರಿಕಥಾ ಕಾರ್ಯಕ್ರಮದಲ್ಲಿ ಆದಿ ಶಂಕರಾಚಾರ್ಯರ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ ಕಲಾವಿದೆಯು ಸಾರ್ವಜನಿಕವಾಗಿ ಕ್ಷಮೆಯಾಚಿಸಿದ್ದಾರೆ. ಹಿಂದೂಗಳಿಂದ ತೀವ್ರ ಪ್ರತಿಕ್ರಿಯೆ ವ್ಯಕ್ತವಾದ ನಂತರ, ಸಂಬಂಧಪಟ್ಟ ಕಲಾವಿದೆಯು ವಿಡಿಯೋ ಒಂದನ್ನು ಮಾಡುವ ಮೂಲಕ ತಮ್ಮ ತಪ್ಪಿಗೆ ವಿಷಾದ ವ್ಯಕ್ತಪಡಿಸಿದ್ದಾಳೆ.

1. ಈ ಕಲಾವಿದೆಯು ಆದಿ ಶಂಕರಾಚಾರ್ಯರ ಹಿನ್ನೆಲೆಯನ್ನು ಉಲ್ಲೇಖಿಸಿ, ಹಿಂದೆ ಭೀಮಸೇನನ ಕೃಪೆಯನ್ನು ಪಡೆದಿದ್ದ ರಾಕ್ಷಸರು ಕಲಿಯುಗದಲ್ಲಿ ಜನ್ಮ ತಾಳಿ ತಮ್ಮ ಸ್ವಭಾವದಂತೆ ನಿರ್ಗುಣ ತತ್ತ್ವಜ್ಞಾನವನ್ನು ಪ್ರಸಾರ ಮಾಡಿದರು ಎಂದು ಹೇಳಿದರು. ಆ ಕಲಾವಿದೆಯು, ಭಗವಾನ್ ರುದ್ರನಿಂದ ವರ ಪಡೆದ ನಂತರ ಮಣಿಮಂತ ಎಂಬ ರಾಕ್ಷಸನು ಕಾಲಡಿಯಲ್ಲಿ (ಕೇರಳ) ಶಂಕರ ಎಂಬ ಹೆಸರಿನಲ್ಲಿ ಜನಿಸಿದನು ಎಂದು ಹೇಳಿದ್ದಳು.

2. ಜುಲೈ 11 ರಂದು ಅಂಕಿತಾ ನಾಯಕ್ ಮತ್ತು ಗೌರಿ ಪಾಂಡುರಂಗಿ ಅವರಿಗೆ ಒಂದು ಗಂಟೆಯ ಭರತನಾಟ್ಯ ಕಾರ್ಯಕ್ರಮ ಮತ್ತು ಒಂದು ಗಂಟೆಯ ಹರಿವಾಣ ನೃತ್ಯ ಸೇವೆಯನ್ನು ಪ್ರಸ್ತುತಪಡಿಸಲು ಅನುಮತಿ ನೀಡಲಾಗಿತ್ತು; ಆದರೆ ಆಯೋಜಕರಿಗೆ ಯಾವುದೇ ಮುನ್ಸೂಚನೆ ನೀಡದೆ ಕಲಾವಿದೆಯು ದಿಢೀರನೆ ಭಕ್ತ ಪ್ರಹ್ಲಾದ ಹರಿಕಥಾ ಪ್ರಸಂಗವನ್ನು ಪ್ರಸ್ತುತಪಡಿಸಿದರು. ಈ ವೇಳೆ ಕಲಾವಿದರೊಬ್ಬರು ಆದಿ ಶಂಕರಾಚಾರ್ಯರ ಬಗ್ಗೆ ಆಕ್ಷೇಪಾರ್ಹ ಪದಗಳನ್ನು ಬಳಸಿದರು.

3. ಈ ಅಹಿತಕರ ಘಟನೆಯ ಬಗ್ಗೆ ಮಠವು ತೀವ್ರ ವಿಷಾದ ವ್ಯಕ್ತಪಡಿಸಿ, ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಕ್ಕಾಗಿ ಕಲಾವಿದರಿಗೆ ಸಾರ್ವಜನಿಕವಾಗಿ ಕ್ಷಮೆ ಕೇಳಲು ಸೂಚಿಸಲಾಗಿತ್ತು. ಅದರಂತೆ ಅವರು ವಿಡಿಯೋ ಮೂಲಕ ಕ್ಷಮೆಯಾಚಿಸಿದ್ದಾರೆ ಎಂದು ಮಠದ ದಿವಾನರಾದ ಶ್ರೀ. ಉದಯಕುಮಾರ್ ಸರಳತ್ತಾಯ ಅವರು ತಿಳಿಸಿದ್ದಾರೆ.

ಸಂಪಾದಕೀಯ ನಿಲುವು

ಹಿಂದೂಗಳೇ ಹಿಂದೂಗಳ ನಿಜವಾದ ಶತ್ರುಗಳು! ಇಂತಹ ಆಕ್ಷೇಪಾರ್ಹ ಹೇಳಿಕೆಯನ್ನು ಇತರ ಪಂಥದವರು ತಮ್ಮ ಶ್ರದ್ಧಾ ಕೇಂದ್ರಗಳ ಬಗ್ಗೆ ಎಂದಾದರೂ ನೀಡುತ್ತಾರೆಯೇ?