ವೆಸ್ಟ ಬ್ಯಾಂಕ್ ನಲ್ಲಿರುವ ಅಲ್-ಅನ್ಸಾರ್ ಮಸೀದಿ ಮೇಲೆ ಇಸ್ರೇಲ್ ನಿಂದ ದಾಳಿ !

  • ಹಮಾಸ್ ಮಸೀದಿಯನ್ನು ಕೇಂದ್ರವನ್ನಾಗಿ ಮಾಡಿಕೊಂಡಿತ್ತು !

  • ಮಸೀದಿಯನ್ನು ಯಾವ ಉದ್ದೇಶಕ್ಕಾಗಿ ಬಳಸಲಾಗುತ್ತಿದೆಯೆನ್ನುವುದು ಮತ್ತೊಮ್ಮೆ ಸ್ಪಷ್ಟವಾಗಿದೆ !

ತೆಲ್ ಅವಿವ್ (ಇಸ್ರೇಲ್) – ಇಸ್ರೇಲ್ ವೆಸ್ಟ ಬ್ಯಾಂಕ್ ನ ಜೆನಿನ್ ಪ್ರದೇಶದ ಅಲ್-ಅನ್ಸಾರ್ ಮಸೀದಿಯ ಮೇಲೆ ವೈಮಾನಿಕ ದಾಳಿ ನಡೆಸಿದೆಯೆಂದು ಇಸ್ರೇಲ್ ರಕ್ಷಣಾ ಪಡೆ ಈ ಮಾಹಿತಿಯನ್ನು ಟ್ವೀಟ್ ಮಾಡಿದೆ. ಇದರಲ್ಲಿ  ಅವರು, ಅವರ ಗುಪ್ತಚರ ಇಲಾಖೆಯು, ಹಮಾಸ್ ಸೈನಿಕರು ಮಸೀದಿಯನ್ನು ಕಮಾಂಡ್ ಸೆಂಟರ್ ಆಗಿ ಪರಿವರ್ತಿಸಿದ್ದಾರೆ ಎಂದು ತಿಳಿಸಿತ್ತು. ಇಲ್ಲಿಂದಲೇ ಅವರು ದಾಳಿಗೆ ಯೋಜನೆ ರೂಪಿಸುತ್ತಿದ್ದರು.

ಇಸ್ರೇಲ್ ಕೂಡ ಒಂದು ದಿನ ಮುಂಚಿತವಾಗಿ ವೆಸ್ಟ ಬಂಕ್ ನಲ್ಲಿರುವ ನಿರಾಶ್ರಿತರ ಶಿಬಿರದ ಮೇಲೆ ವೈಮಾನಿಕ ದಾಳಿ ನಡೆಸಿತು. ಇಸ್ರೇಲಿ ಪಡೆಗಳು ಅಕ್ಟೋಬರ್ 21 ರ ತಡರಾತ್ರಿ ವೆಸ್ಟ ಬ್ಯಾಂಕ್ ಮೇಲೆ ದಾಳಿ ನಡೆಸಿತು. ಯುದ್ಧ ಪ್ರಾರಂಭವಾದಾಗಿನಿಂದ, ಇಲ್ಲಿಯವರೆಗೆ 670 ಪ್ಯಾಲೆಸ್ಟೀನಿಯನ್ನರನ್ನು ವಿವಿಧ ಪ್ರದೇಶಗಳಲ್ಲಿ ಬಂಧಿಸಲಾಗಿದೆ. ಇವರಲ್ಲಿ 450 ಪ್ಯಾಲೆಸ್ತೀನಿಯನ್ನರು ಹಮಾಸ್ ಜೊತೆ ಸಂಬಂಧ ಹೊಂದಿದ್ದಾರೆ ಎಂದು ಹೇಳಲಾಗಿದೆ.

ಭಾರತ ಗಾಝಾಕ್ಕೆ ಸಹಾಯ ಸಾಮಗ್ರಿಗಳನ್ನು ಕಳುಹಿಸಿದೆ !

ನವ ದೆಹಲಿ – ಭಾರತವು ಪ್ಯಾಲೆಸ್ತೀನ್‌ಗೆ ಸುಮಾರು 6 ಸಾವಿರ 500 ಕೆ.ಜಿ. ವೈದ್ಯಕೀಯ ನೆರವು ಮತ್ತು 32 ಸಾವಿರ ಕೆಜಿ ಅಗತ್ಯ ಸಾಮಗ್ರಿಗಳನ್ನು ಕಳುಹಿಸಿದೆ. ಈ ಸಾಮಗ್ರಿಗಳ ಪೆಟ್ಟಿಗೆಗಳ ಮೇಲೆ ’ಇದು ಭಾರತದ ಜನರು ಪ್ಯಾಲೆಸ್ತೀನ್‌ಗಳಿಗೆ ನೀಡಿದ ಉಡುಗೊರೆ’ ಎಂದು ಬರೆಯಲಾಗಿದೆ. ಈ ಸಾಮಗ್ರಿಗಳನ್ನು ಈಜಿಪ್ಟ್‌ನ ರಫಾ ಗಡಿಯ ಮೂಲಕ ಗಾಝಾಕ್ಕೆ ಸಾಗಿಸಲಾಗುವುದು. ಇದರಲ್ಲಿ ಅನೇಕ ಅಗತ್ಯ ಔಷಧಗಳು, ಶಸ್ತ್ರಚಿಕಿತ್ಸಾ ಉಪಕರಣಗಳು, ಟೆಂಟ್‌ಗಳು, ಮಲಗುವ ಚೀಲಗಳು, ನೀರು ಶುದ್ಧೀಕರಣ ಮಾತ್ರೆಗಳು ಮತ್ತು ಇತರ ಅಗತ್ಯ ವಸ್ತುಗಳನ್ನು ಒಳಗೊಂಡಿದೆ.

ಸಂಪಾದಕೀಯ ನಿಲುವು

ಇಸ್ರೇಲ್ ನೇರವಾಗಿ ಭಯೋತ್ಪಾದಕರನ್ನು ಕೊಲ್ಲಲು ಮಸೀದಿಯ ಮೇಲೆ ದಾಳಿ ನಡೆಸಿತು. ಭಾರತವು ಮಸೀದಿಗಳಲ್ಲಿ ವಾಸಿಸುವ, ಭಯೋತ್ಪಾದಕ ಕೃತ್ಯಗಳನ್ನು ನಡೆಸುವವರ ವಿರುದ್ಧ ಇಂತಹ ಕ್ರಮವನ್ನು ತೆಗೆದುಕೊಂಡರೆ, ಭಾರತದ ತಥಾಕಥಿತ ಜಾತ್ಯತೀತವಾದಿಗಳು ಮತ್ತು ಪ್ರಗತಿ(ಅಧೋ)ಪರರು ಅದನ್ನು ಒಪ್ಪಿಕೊಳ್ಳುವರೇ ?