ರಷ್ಯಾ ಡಾನ್-ಅಝೋವ್ಹ ಕಾಲುವೆ ಮತ್ತು ಕೆಚ ಜಲಸಂಧಿಯಲ್ಲಿನ ನೌಕೆಗಳ ಸಂಚಾರ ಸ್ಥಗಿತಗೊಳಿಸಿದೆ
(ಜಲಸಂಧಿ ಎಂದರೆ ಎರಡು ಜಲಾಶಯಗಳನ್ನು ಸಂಪರ್ಕಿಸುವ ಜಲಮಾರ್ಗ)

ಕೀವ್ಹ/ಮಾಸ್ಕೋ (ರಷ್ಯಾ) – ರಷ್ಯಾ ಮತ್ತು ಉಕ್ರೇನ ನಡುವಿನ ಸಮುದ್ರ ಸಂಘರ್ಷ ಮತ್ತಷ್ಟು ತೀವ್ರಗೊಂಡಿದೆ. ಜುಲೈ ೧೫ ರ ರಾತ್ರಿ ಉಕ್ರೇನ ಕ್ರಿಮಿಯಾ ಸಮೀಪವಿರುವ ರಷ್ಯಾದ ‘ಶ್ಯಾಡೋ ಫ್ಲೀಟ್’ನ ೨೦ ನೌಕೆಗಳ ಮೇಲೆ ಡ್ರೋನ್ ಮೂಲಕ ದಾಳಿ ನಡೆಸಿದೆ. ಇದರಲ್ಲಿ ೧೭ ತೈಲ ಸಾಗಣೆ ನೌಕೆಗಳು, ೨ ಗ್ಯಾಸ್ ನೌಕೆಗಳು ಮತ್ತು ಒಂದು ‘ಟಗ್‌ಬೋಟ್’ ಸೇರಿವೆ. ಈ ದಾಳಿಯ ನಂತರ ರಷ್ಯಾ ಅಜೋವ್ಹ ಸಮುದ್ರದಲ್ಲಿನ ನೌಕೆಗಳ ಸಂಚಾರದ ಮೇಲೆ ನಿರ್ಬಂಧಗಳನ್ನು ಹೇರಿದೆ.
ರಷ್ಯಾವು ಈ ಕ್ರಮವನ್ನು ‘ಭಯೋತ್ಪಾದಕ ದಾಳಿ’ ಎಂದು ಕರೆದಿದೆ. ಹಾಗೆಯೇ ಅಜೋವ್ಹ ಸಮುದ್ರದಲ್ಲಿನ ನೌಕೆಗಳ ಸಂಚಾರದ ಮೇಲೆ ನಿರ್ಬಂಧ ಹೇರಿದೆ.
ರಷ್ಯಾದಿಂದ ಉಕ್ರೇನ ಮೇಲೆ ಸತತ ೫ ನೇ ದಿನವೂ ದಾಳಿ ಮುಂದುವರಿದಿದೆ
ಮತ್ತೊಂದೆಡೆ, ಉಕ್ರೇನ ಮೇಲಿನ ರಷ್ಯಾದ ದಾಳಿಗಳು ಸತತ ಐದನೇ ದಿನವೂ ಮುಂದುವರಿದಿವೆ. ಒಡೆಸಾ ಮತ್ತು ಸುತ್ತಮುತ್ತಲಿನ ಪ್ರದೇಶಗಳ ಮೇಲೆ ರಷ್ಯಾವು ಡ್ರೋನ್ ಹಾಗೂ ಕ್ಷಿಪಣಿಗಳ ಮೂಲಕ ದಾಳಿ ಮಾಡಿದೆ. ಒಡೆಸಾದ ೭ ಅಂತಸ್ತಿನ ವಸತಿ ಕಟ್ಟಡದ ಮೇಲೆ ಕ್ಷಿಪಣಿ ಬಿದ್ದಿದ್ದರಿಂದ ೩ ಜನರು ಸಾವನ್ನಪ್ಪಿದ್ದಾರೆ.
ಸಮುದ್ರ ಮಾರ್ಗಗಳ ಮೇಲಿನ ಪ್ರಭುತ್ವಕ್ಕಾಗಿ ಸಂಘರ್ಷ
ಭೂಮಿಯ ಮೇಲಿನ ಯುದ್ಧವು ಸ್ವಲ್ಪ ಮಟ್ಟಿಗೆ ಮಂದವಾದ ನಂತರ, ಎರಡೂ ದೇಶಗಳು ಸಮುದ್ರವನ್ನೇ ಹೊಸ ರಣರಂಗವನ್ನಾಗಿ ಮಾಡಿಕೊಂಡಿವೆ. ರಷ್ಯಾವು ಉಕ್ರೇನಿನ ಬಂದರುಗಳ ಮೇಲೆ ದಾಳಿ ಮಾಡುವ ಮೂಲಕ ಧಾನ್ಯ ಮತ್ತು ಸೈನ್ಯ ಪೂರೈಕೆಯನ್ನು ತಡೆಯಲು ಪ್ರಯತ್ನಿಸುತ್ತಿದ್ದರೆ, ಉಕ್ರೇನ ರಷ್ಯಾದ ತೈಲ, ಅನಿಲ ಮತ್ತು ಸರಕು ಸಾಗಣೆ ನೌಕೆಗಳನ್ನು ಗುರಿಯಾಗಿಸಿಕೊಂಡಿದೆ. ಉಕ್ರೇನಿನ ಡ್ರೋನ್ ಕಮಾಂಡರ್ ರವರ ಹೇಳಿಕೆಯಂತೆ ಕಳೆದ ೯ ದಿನಗಳಲ್ಲಿ ಅಜೋವ್ಹ ಸಮುದ್ರದಲ್ಲಿನ ೧೧೬ ರಷ್ಯನ್ ನೌಕೆಗಳನ್ನು ಗುರಿಯಾಗಿಸಲಾಗಿದೆ. ನಿರಂತರ ದಾಳಿಗಳ ನಂತರ, ರಷ್ಯಾವು ಡಾನ್-ಅಜೋವ್ಹ ಕಾಲುವೆ ಮತ್ತು ಕೆಚ ಜಲಸಂಧಿಯಲ್ಲಿನ (ಎರಡು ಜಲರಾಶಿಗಳನ್ನು ಸಂಪರ್ಕಿಸುವ ಜಲಮಾರ್ಗದಲ್ಲಿನ) ನೌಕೆಗಳ ಸಂಚಾರವನ್ನು ನಿಲ್ಲಿಸಿದೆ ಎಂದು ಹೇಳಲಾಗುತ್ತಿದೆ. ಈ ಕಡಲ ಉದ್ವಿಗ್ನತೆಯ ಪರಿಣಾಮವು ರಷ್ಯಾದ ತೈಲ, ಗೋಧಿ ಮತ್ತು ಕೃಷಿ ಉತ್ಪನ್ನಗಳ ರಫ್ತಿನ ಮೇಲೆ ಬೀರುವ ಸಾಧ್ಯತೆಯನ್ನು ವ್ಯಕ್ತಪಡಿಸಲಾಗುತ್ತಿದೆ. ಅಜೋವ್ಹ ಸಮುದ್ರದ ಮೂಲಕ ರಷ್ಯಾದ ಸುಮಾರು ೨೫ ರಷ್ಟು ಗೋಧಿ ರಫ್ತಾಗುತ್ತದೆ.
ಚೌಕಟ್ಟು (ವಿಶೇಷ ಸುದ್ದಿ): ಹಾರ್ಮುಝನಲ್ಲೂ ಹೆಚ್ಚಿದ ಉದ್ವಿಗ್ನತೆಪಶ್ಚಿಮ ಏಷ್ಯಾದಲ್ಲೂ ಉದ್ವಿಗ್ನತೆ ಹೆಚ್ಚಾಗಿದೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಒಪ್ಪಂದ ಮಾಡಿಕೊಳ್ಳದಿದ್ದರೆ ಇರಾನಿನ ವಿದ್ಯುತ್ ಯೋಜನೆಗಳನ್ನು ಧ್ವಂಸಗೊಳಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಅಮೆರಿಕವು ಹಾರ್ಮುಝ ಜಲಸಂಧಿಯ (ಎರಡು ಜಲಾಶಯಗಳನ್ನು ಸಂಪರ್ಕಿಸುವ ಜಲಮಾರ್ಗದ) ಪ್ರದೇಶದಲ್ಲಿ ಇರಾನಿನ ದಿಗ್ಬಂಧನವನ್ನು ಮಾಡುತ್ತಾ ಜುಲೈ ೧೫ ರಂದು ೭ ಗಂಟೆಗಳಲ್ಲಿ ಹಲವು ಸ್ಥಳಗಳ ಮೇಲೆ ದಾಳಿ ಮಾಡಿದೆ. ಅಮೆರಿಕದ ಈ ದಾಳಿಗಳಲ್ಲಿ ಇರಾನಿನ ೭ ಸೈನಿಕರು ಸಾವನ್ನಪ್ಪಿದ್ದು, ೨೬೦ ಜನರು ಗಾಯಗೊಂಡಿದ್ದಾರೆ. ಈ ದಾಳಿಗೆ ಪ್ರತಿಕಾರವಾಗಿ ಇರಾನ ತೈಲ ಮತ್ತು ಗ್ಯಾಸ್ ರಫ್ತು ತಡೆಯುವುದಾಗಿ ಬೆದರಿಕೆ ಹಾಕಿದೆ, ಹಾಗೆಯೇ ಬಹರೀನ, ಕುವೈತ ಮತ್ತು ಜೋರ್ಡಾನ ದೇಶಗಳ ದಿಕ್ಕಿನಲ್ಲಿ ಹಲವು ಕ್ಷಿಪಣಿಗಳು ಮತ್ತು ಡ್ರೋನ್‌ಗಳನ್ನು ಉಡಾಯಿಸಿದೆ. ಇದರ ಪರಿಣಾಮವಾಗಿ ಹಾರ್ಮುಝ ಜಲಸಂಧಿಯಲ್ಲೂ ಉದ್ವಿಗ್ನತೆ ಮತ್ತಷ್ಟು ಹೆಚ್ಚಾಗಿದೆ. |
ರಷ್ಯಾದಿಂದ ತೈಲ ಖರೀದಿಸುವ ಭಾರತ ಸೇರಿದಂತೆ ೫ ದೇಶಗಳ ಮೇಲೆ ಶೇ. ೧೦೦ ರಷ್ಟು ಸುಂಕ ವಿಧಿಸಲಿರುವ ಅಮೆರಿಕಾ ! : Oil purchase from Russia
ಬಲೂಚಿಸ್ತಾನದ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವವರಿಗೆ ಇಸ್ರೇಲ್ ಸಂಸ್ಥೆಗಳು ಸಹಾಯ ಮಾಡುತ್ತಿವೆ
ಟ್ರಂಪ್ ಅವರಿಂದ ಹಾರ್ಮುಜ್ ಜಲಸಂಧಿಯ ಮೇಲಿನ ಶೇಕಡಾ ೨೦ ರಷ್ಟು ಸುಂಕ ಹಿಂಪಡೆ : Donald Trump
ಹಾರ್ಮುಜ್: ತೈಲ ನೌಕೆಯ ಮೇಲೆ ಇರಾನ್ ದಾಳಿ: ಓರ್ವ ಭಾರತೀಯ ಸಾವು
ಬ್ರಿಟನ್: ದೇವಸ್ಥಾನದ ಜಾಗ ಮುಸಲ್ಮಾನರಿಗೆ ಹರಾಜು !
ಭಯೋತ್ಪಾದನಾ ನಿಗ್ರಹ ದಳದಿಂದ ಪುಣೆ-ಪಿಂಪ್ರಿ ಚಿಂಚವಾಡನಲ್ಲಿ ೨೩ ಕ್ಕೂ ಹೆಚ್ಚು ಸ್ಥಳಗಳ ಮೇಲೆ ದಾಳಿ ! : Maharashtra ATS Raid