ಸಿಂಧೂ ಸಾಮ್ರಾಜ್ಯದ ಕೊನೆಯ ಹಿಂದೂ ಚಕ್ರವರ್ತಿ ಮಹಾರಾಜ ದಾಹೀರ್ ಅವರ ಬಲಿದಾನ ದಿನ ಆಚರಣೆ!
ಮಹಾರಾಜ ದಾಹೀರ್ ಇವರು ಸಿಂಧ್ ಪ್ರಾಂತ್ಯದ ಕೊನೆಯ ಹಿಂದೂ ಆಡಳಿತಗಾರರಾಗಿದ್ದರು. ಅವರ ಸಾಮ್ರಾಜ್ಯವು ಇಂದಿನ ಪಾಕಿಸ್ತಾನದ ಕರಾಚಿ, ಹೈದರಾಬಾದ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಿಗೆ ವಿಸ್ತರಿಸಿತ್ತು. ಅವರು ಅತ್ಯಂತ ನ್ಯಾಯಪ್ರಿಯ, ಶೂರ ಮತ್ತು ಧರ್ಮನಿಷ್ಠ ರಾಜನೆಂದು ಗುರುತಿಸಲ್ಪಟ್ಟಿದ್ದರು.