
ಮುಜಫ್ಫರಾಬಾದ್ (ಪಾಕಿಸ್ತಾನ ಆಕ್ರಮಿತ ಕಾಶ್ಮೀರ) – ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಕಳೆದ ೨೦ ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದ ಸ್ಥಳೀಯ ನಾಗರಿಕರ ಮೇಲೆ ಪಾಕಿಸ್ತಾನದ ಭದ್ರತಾ ಪಡೆಗಳು ಗುಂಡಿನ ದಾಳಿ ನಡೆಸಿರುವ ವರದಿಯಾಗಿದೆ. ಈ ಘಟನೆಯಲ್ಲಿ ೧೨ ಜನರು ಮೃತಪಟ್ಟಿದ್ದು, ೩೮ ಜನರು ಗಾಯಗೊಂಡಿದ್ದಾರೆಂದು ಹೇಳಲಾಗುತ್ತಿದೆ. ಅಮೆರಿಕಾದಲ್ಲಿ ವಾಸಿಸುತ್ತಿರುವ ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ೧೦೦ ಕ್ಕೂ ಹೆಚ್ಚು ನಾಗರಿಕರು ಪಾಕಿಸ್ತಾನ ಸೈನ್ಯದ ಈ ದೌರ್ಜನ್ಯದ ವಿರುದ್ಧ ಶ್ವೇತ ಭವನದ ಹೊರಗಡೆ ಪ್ರತಿಭಟನೆ ನಡೆಸಿದರು. ಪಾಕಿಸ್ತಾನಿ ಸೈನ್ಯವನ್ನು ಅಲ್ಲಿಂದ ಹಿಂತೆಗೆದುಕೊಳ್ಳಬೇಕು ಮತ್ತು ಈ ಗುಂಡಿನ ದಾಳಿಯ ಬಗ್ಗೆ ಅಂತರರಾಷ್ಟ್ರೀಯ ತನಿಖೆಯಾಗಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಪ್ರತಿಭಟನೆಯ ನೇತೃತ್ವ ವಹಿಸಿರುವ ‘ಜಾಯಿಂಟ್ ಅವಾಮಿ ಆಕ್ಷನ್ ಕಮಿಟಿ’ಯು, ಭದ್ರತಾ ಪಡೆಗಳು ಸಾಮಾನ್ಯ ಜನರ ಉಡುಪಿನಲ್ಲಿ ಬಂದು ಗುಂಡಿನ ದಾಳಿ ನಡೆಸಿವೆ ಎಂದು ಆರೋಪಿಸಿದೆ. ಪ್ರತಿಭಟನಾ ಮೆರವಣಿಗೆಯನ್ನು ತಡೆಯಲು ಪಾಕಿಸ್ತಾನಿ ಸೈನ್ಯ ಮತ್ತು ಪೊಲೀಸರು ರಾವಲಕೋಟ್, ಮುಜಫ್ಫರಾಬಾದ್ ಮತ್ತು ಸುತ್ತಮುತ್ತಲಿನ ನಗರಗಳನ್ನು ಸಂಪೂರ್ಣ ಸೀಲ್ ಮಾಡಿದ್ದಾರೆ. ಎಲ್ಲಾ ಪ್ರಮುಖ ಮಾರ್ಗಗಳಲ್ಲಿ ತಡೆಗೋಡೆಗಳನ್ನು ನಿರ್ಮಿಸಲಾಗಿದ್ದು, ೪,೦೦೦ ಸೈನಿಕರು, ಪೊಲೀಸರು ಮತ್ತು ‘ಫ್ರಂಟಿಯರ್ ಕೋರ್’ ಸೈನಿಕರನ್ನು ನಿಯೋಜಿಸಲಾಗಿದೆ. ಸರಕಾರದ ದಬ್ಬಾಳಿಕೆಯ ನಡುವೆಯೂ ೪೦,೦೦೦ ಕ್ಕೂ ಹೆಚ್ಚು ನಾಗರಿಕರು ಮುಜಫ್ಫರಾಬಾದ್ ಕಡೆಗೆ ಹೊರಟಿರುವ ಈ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದಾರೆ ಎಂದು ಸಮಿತಿ ಹೇಳಿಕೆ ನೀಡಿದೆ.
ಸಮಿತಿಯ ಈ ಪ್ರತಿಭಟನೆಯು ೩೮ ಅಂಶಗಳ ಬೇಡಿಕೆಗಳನ್ನು ಆಧರಿಸಿದೆ. ವಿಧಾನಸಭೆಯಲ್ಲಿನ ೧೨ ಮೀಸಲು ಸ್ಥಾನಗಳನ್ನು ರದ್ದುಪಡಿಸುವುದು, ಸ್ಥಳೀಯ ಸ್ವರಾಜ್ಯ ಸಂಸ್ಥೆಗಳಿಗೆ ಹೆಚ್ಚಿನ ಅಧಿಕಾರ ನೀಡುವುದು, ವಿದ್ಯುತ್, ಹಿಟ್ಟು ಮತ್ತು ರಸಗೊಬ್ಬರಗಳ ಮೇಲೆ ಸಹಾಯಧನ ನೀಡುವುದು, ಅಲ್ಲದೇ ಬಂಧನದಲ್ಲಿರುವ ನಾಯಕರನ್ನು ಬಿಡುಗಡೆ ಮಾಡುವುದು ಪ್ರತಿಭಟನಾಕಾರರ ಪ್ರಮುಖ ಬೇಡಿಕೆಗಳಾಗಿವೆ.
ನಿರುದ್ಯೋಗ ವಿರೋಧಿಸಿ ಮತ್ತೆ ನೇಪಾಳದಲ್ಲಿ ಪ್ರತಿಭಟನೆ : Nepal Youth Protest
‘ಸಿಂಧೂ ಜಲ ಒಪ್ಪಂದಕ್ಕಾಗಿ ಪಾಕಿಸ್ತಾನ ಪ್ರತಿಯೊಂದು ಹಂತದಲ್ಲೂ ಪ್ರಯತ್ನಿಸಲಿದೆ!’
ಪಾಕಿಸ್ತಾನ ಆಕ್ರಮಿತ ಕಾಶ್ಮೀರ (PoK): ಪ್ರತಿಭಟನೆ ಮೇಲೆ ಪಾಕ್ ಸೇನೆಯಿಂದ ಗುಂಡಿನ ದಾಳಿ – ಒಬ್ಬನ ಸಾವು
ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿನ ಆಂದೋಲನಕ್ಕೆ ಕಾಶ್ಮೀರದ ನಾಗರಿಕರು ಬೆಂಬಲ ನೀಡಬೇಕು!
10 ಜನ ಅಕ್ರಮ ವಲಸಿಗರನ್ನು ಗಡಿಯೊಳಗೆ ಸೇರಿಸಿಕೊಳ್ಳಲು ಬಾಂಗ್ಲಾದೇಶದ ವಿರೋಧ
ಕಾಶ್ಮೀರಿಗಳಿಗೆ ಶಸ್ತ್ರಾಸ್ತ್ರ ನೀಡಿದ ಪಾಕ್ ಸೇನೆ !