‘ಶ್ರೀಕೃಷ್ಣ ಮುಸಲ್ಮಾನರಾಗಿದ್ದರು ಮತ್ತು ದಿನಕ್ಕೆ ೫ ಬಾರಿ ನಮಾಜ್ ಮಾಡುತ್ತಿದ್ದರಂತೆ!’– Maulana Jarjis Ansari

ಮೌಲಾನಾ ಜರ್ಜಿಸ್ ಅನ್ಸಾರಿ ಅವರ ಆಕ್ರೋಶ ಭರಿತ ಹೇಳಿಕೆ

ರಾಂಚಿ (ಜಾರ್ಖಂಡ್) – ಭಗವಾನ್ ಶ್ರೀಕೃಷ್ಣನು ವಾಸ್ತವದಲ್ಲಿ ಮುಸಲ್ಮಾನನಾಗಿದ್ದನು ಮತ್ತು ಅವನು ದಿನಕ್ಕೆ ೫ ಬಾರಿ ನಮಾಜ್ ಮಾಡುತ್ತಿದ್ದನು ಎಂದು ಮೌಲಾನಾ (ಇಸ್ಲಾಂ ನ ಧರ್ಮಶಾಸ್ತ್ರಜ್ಞ) ಜರ್ಜಿಸ್ ಅನ್ಸಾರಿ ಹೇಳಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗಿದೆ. ವಿಡಿಯೋ ಪ್ರಸಾರವಾದ ನಂತರ ಹಿಂದೂ ಸಂಘಟನೆಗಳಿಂದ ಆತನ ವಿರುದ್ಧ ತೀವ್ರ ಟೀಕೆಗಳು ವ್ಯಕ್ತವಾಗುತ್ತಿದ್ದು, ಆತನನ್ನು ಬಂಧಿಸಬೇಕೆಂದು ಒತ್ತಾಯಿಸಲಾಗುತ್ತಿದೆ. ಈ ವಿಡಿಯೋ ಜಾರ್ಖಂಡ್‌ನ ಧಾರ್ಮಿಕ ಸಭೆಯೊಂದರದ್ದಾಗಿದ್ದು, ಇದು ೨೦೦೬ ರ ಜೂನ್ ೨೩ ರದ್ದು ಎಂದು ಹೇಳಲಾಗುತ್ತಿದೆ. ಮೌಲಾನಾ ಜರ್ಜಿಸ್ ಉತ್ತರ ಪ್ರದೇಶದ ಇಟಾವಾ ಜಿಲ್ಲೆಯ ನಿವಾಸಿಯಾಗಿದ್ದು, ಈ ಹಿಂದೆಯೂ ಆತ ಹಲವು ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದನು. (ಮೊದಲ ಬಾರಿ ವಿವಾದಾತ್ಮಕ ಹೇಳಿಕೆ ನೀಡಿದಾಗಲೇ ಕಠಿಣ ಕ್ರಮ ಯಾಕೆ ಕೈಗೊಳ್ಳಲಿಲ್ಲ? ಅಂದೇ ಕ್ರಮ ಕೈಗೊಂಡಿದ್ದರೆ ಇಂದು ಇಷ್ಟು ಧೈರ್ಯದಿಂದ ಮಾತನಾಡುವ ಸಾಹಸ ಆತ ಮಾಡುತ್ತಿರಲಿಲ್ಲ! ಈಗಲಾದರೂ ಆತನ ವಿರುದ್ಧ ಕ್ರಮ ಕೈಗೊಳ್ಳಲಾಗುವುದೇ? – ಸಂಪಾದಕ)

​ಶ್ರೀಮದ್ಭಗವದ್ಗೀತೆಯ ಶ್ಲೋಕದ ತಪ್ಪು ವ್ಯಾಖ್ಯಾನ

ಭಾಷಣದ ವೇಳೆ ಮೌಲಾನಾ ಅನ್ಸಾರಿ, ಶ್ರೀಮದ್ಭಗವದ್ಗೀತೆಯ ಶ್ಲೋಕವೊಂದನ್ನು ಉಲ್ಲೇಖಿಸಿ ತನ್ನ ವಾದವನ್ನು ಸಮರ್ಥಿಸಿಕೊಳ್ಳಲು ಪ್ರಯತ್ನಿಸಿದನು. ಭಗವದ್ಗೀತೆಯ ಅಧ್ಯಾಯ ೬ ರ ೧೦ ನೇ ಶ್ಲೋಕ “ಯೋಗೀ ಯುಞ್ಜೀತ ಸತತಮಾತ್ಮಾನಂ ರಹಸಿ ಸ್ಥಿತಃ । ಏಕಾಕೀ ಯತಚಿತ್ತಾತ್ಮಾ ನಿರಾಶೀರಪರಿಗ್ರಹಃ ॥” ಉಲ್ಲೇಖಿಸಿ ಈ ಹೇಳಿಕೆ ನೀಡಿದನು. ಮೌಲಾನಾ ವಾದದ ಪ್ರಕಾರ, ‘ಈ ಶ್ಲೋಕದಲ್ಲಿ ಭಕ್ತರು ತಮ್ಮ ಇಡೀ ದೇಹದಿಂದ ಪ್ರಾರ್ಥನೆ (ನಮಾಜ್ ರೀತಿಯಲ್ಲಿ) ಮಾಡಲು ಸೂಚಿಸಲಾಗಿದೆ. ಹಿಂದೂಗಳು ತಮ್ಮ ಗ್ರಂಥಗಳನ್ನು ಸರಿಯಾಗಿ ಓದಿದರೆ, ಇಸ್ಲಾಂ ಧರ್ಮವೇ ಜಾಗತಿಕ ಧರ್ಮ ಎಂಬುದನ್ನು ಅವರು ಒಪ್ಪಿಕೊಳ್ಳುತ್ತಾರೆ. ಭಗವಾನ್ ರಾಮ ಮತ್ತು ಕೃಷ್ಣನಿಗೆ ಸಂಬಂಧಿಸಿದ ಗ್ರಂಥಗಳಲ್ಲೂ ಇದನ್ನೇ ಬರೆಯಲಾಗಿದೆ’ ಎಂದು ಆತ ಹೇಳಿದ್ದಾನೆ.​

ಶ್ಲೋಕದ ನಿಜವಾದ ಅರ್ಥ

​‘ಯೋಗಿಯಾದವನು ತನ್ನ ಮನಸ್ಸು, ದೇಹ ಮತ್ತು ಆತ್ಮವನ್ನು ಸದಾ ಕಾಲ ಪರಮಾತ್ಮನ ಚರಣಗಳಲ್ಲಿ ಲೀನಗೊಳಿಸಬೇಕು. ಏಕಾಂತದಲ್ಲಿ ವಾಸಿಸುತ್ತಾ, ಮನಸ್ಸು ಮತ್ತು ಇಂದ್ರಿಯಗಳನ್ನು ನಿಯಂತ್ರಣದಲ್ಲಿಟ್ಟುಕೊಂಡು, ಎಲ್ಲಾ ರೀತಿಯ ಭೌತಿಕ ಆಸೆ ಹಾಗೂ ವ್ಯಾಮೋಹಗಳಿಂದ ಮುಕ್ತನಾಗಬೇಕು’ ಎಂಬುದು ಈ ಶ್ಲೋಕದ ನಿಜವಾದ ಅರ್ಥವಾಗಿದೆ. ಈ ಶ್ಲೋಕದಲ್ಲಿ ಎಲ್ಲಿಯೂ ‘ನಮಾಜ್’ ಅಥವಾ ‘ಇಸ್ಲಾಂ’ ಎಂಬ ಪದಗಳ ಉಲ್ಲೇಖವಿಲ್ಲ. ಇಲ್ಲಿ ಕೇವಲ ಧ್ಯಾನ ಮತ್ತು ಯೋಗದ ಮೂಲಕ ಈಶ್ವರ ಪ್ರಾಪ್ತಿಯ ಮಾರ್ಗ ಎಂಬುದನ್ನು ಹೇಳಲಾಗಿದೆ.

ಇಡೀ ಹಿಂದೂ ಸಮಾಜದ ಬೇಷರತ್ ಕ್ಷಮೆಯಾಚಿಸಬೇಕು! – ಶ್ರೀಕೃಷ್ಣ ಜನ್ಮಭೂಮಿ ಮೊಕದ್ದಮೆಯ ಕಕ್ಷಿದಾರ ಮಹೇಂದ್ರ ಪ್ರತಾಪ್ ಸಿಂಗ್

​ಶ್ರೀಕೃಷ್ಣ ಜನ್ಮಭೂಮಿ ಮೊಕದ್ದಮೆಯ ಕಕ್ಷಿದಾರರಾದ ಮಹೇಂದ್ರ ಪ್ರತಾಪ್ ಸಿಂಗ್ ಅವರು ಮೌಲಾನಾ ಜರ್ಜಿಸ್ ಹೇಳಿಕೆಯನ್ನು ತೀವ್ರ ಪದಗಳಲ್ಲಿ ಖಂಡಿಸಿದ್ದಾರೆ. ಅವರು ಮಾತನಾಡಿ, ‘ಈ ಹೇಳಿಕೆಯು ಹಿಂದೂ ಸಮಾಜದ ನಂಬಿಕೆಯ ಮೇಲಿನ ನೇರ ದಾಳಿಯಾಗಿದೆ. ಇಸ್ಲಾಂ ಧರ್ಮದ ಇತಿಹಾಸವು ಸುಮಾರು ೧,೪೦೦ ವರ್ಷಗಳಷ್ಟು ಹಳೆಯದಾಗಿದ್ದರೆ, ಭಗವಾನ್ ಶ್ರೀಕೃಷ್ಣನ ಅವತಾರವು ೫,೦೦೦ ವರ್ಷಗಳ ಹಿಂದೆ ನಡೆದಿತ್ತು. ಮೌಲಾನಾಗೆ ಭಗವದ್ಗೀತೆ ಅಥವಾ ಅದರಲ್ಲಿನ ಶ್ಲೋಕಗಳ ಬಗ್ಗೆ ಯಾವುದೇ ಜ್ಞಾನವಿಲ್ಲ. ಈ ತಪ್ಪು ಮತ್ತು ವಿವಾದಾತ್ಮಕ ಹೇಳಿಕೆಗಾಗಿ ಮೌಲಾನಾ ಜರ್ಜಿಸ್ ಇಡೀ ಹಿಂದೂ ಸಮಾಜದ ಬಳಿ ಬೇಷರತ್ ಕ್ಷಮೆ ಕೇಳಬೇಕು’ ಎಂದು ಆಗ್ರಹಿಸಿದ್ದಾರೆ.

​ಮೌಲಾನಾನನ್ನು ಪಾಕಿಸ್ತಾನಕ್ಕೆ ಕಳುಹಿಸಿ! – ‘ಶ್ರೀಕೃಷ್ಣ ಜನ್ಮ ಸಂಘರ್ಷ ನ್ಯಾಸ್’ ಅಧ್ಯಕ್ಷ ದಿನೇಶ್ ಫಲಾಹಾರಿ

​‘ಶ್ರೀಕೃಷ್ಣ ಜನ್ಮ ಸಂಘರ್ಷ ನ್ಯಾಸ್’ ನ ಅಧ್ಯಕ್ಷರಾದ ದಿನೇಶ್ ಫಲಾಹಾರಿ ಅವರು ಮೌಲಾನಾನನ್ನು ಟೇಕೆ ಮಾಡುತ್ತಾ , ಭಗವಾನ್ ಶ್ರೀಕೃಷ್ಣನು ೫,೦೦೦ ವರ್ಷಗಳ ಹಿಂದೆ ಅವತರಿಸಿದ್ದನು ಮತ್ತು ಮೌಲಾನಾನ ಪೂರ್ವಜರು ಕೂಡ ಸನಾತನಿಗಳೇ ಆಗಿದ್ದರು. ದೇವರ ಬಗ್ಗೆ ಇಂತಹ ತಪ್ಪು ಹೇಳಿಕೆ ನೀಡುವವರನ್ನು ತಕ್ಷಣವೇ ಪಾಕಿಸ್ತಾನಕ್ಕೆ ಕಳುಹಿಸಬೇಕು’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

​ಈ ವಿಡಿಯೋ ದೊಡ್ಡ ಪಿತೂರಿಯ ಭಾಗವಾಗಿರುವ ಸಾಧ್ಯತೆಯಿದೆ! – ಬಿಜೆಪಿ

​ಬಿಜೆಪಿಯ ನಾಯಕ ಮನೀಶ್ ಶುಕ್ಲಾ ಅವರು ಅನುಮಾನ ವ್ಯಕ್ತಪಡಿಸುತ್ತಾ, ಈ ವಿವಾದಾತ್ಮಕ ಹೇಳಿಕೆಯು ಯಾವುದೋ ಒಂದು ದೊಡ್ಡ ಮತ್ತು ಆಳವಾದ ಪಿತೂರಿಯ ಭಾಗವಾಗಿರಬಹುದು. ಈ ಬಗ್ಗೆ ಸಮಗ್ರ ತನಿಖೆಯಾಗಬೇಕು’ ಎಂದು ಆಗ್ರಹಿಸಿದ್ದಾರೆ. ಈ ಬಗ್ಗೆ ಜಾರ್ಖಂಡ್‌ನಲ್ಲಿ ಪ್ರಕರಣ ದಾಖಲಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಸಂಪಾದಕೀಯ ನಿಲುವು

  • ಭಾರತದಲ್ಲಿ ಮತಾಂಧ ಮುಸಲ್ಮಾನರು ಇಂತಹ ಹೇಳಿಕೆ ನೀಡುವ ಧೈರ್ಯ ಮಾಡುವುದು ಹಿಂದೂಗಳಿಗೆ ಅತ್ಯಂತ ಲಜ್ಜಾಸ್ಪದ ವಿಷಯ!
  • ಮುಸಲ್ಮಾನರ ಶ್ರದ್ಧಾಕೇಂದ್ರಗಳ ಸಂದರ್ಭದಲ್ಲಿ ಯಾರಾದರೂ ಸತ್ಯ ಹೇಳಿದರೂ ಕೂಡ, ಅವರಿಗೆ ‘ಸರ್ ತನ್ ಸೆ ಜುದಾ’ (ಶಿರಚ್ಛೇದ) ಮಾಡುವ ಬೆದರಿಕೆ ಹಾಕಲಾಗುತ್ತದೆ ಮತ್ತು ಅವರು ತಮ್ಮ ಇಡೀ ಜೀವನವನ್ನು ಪೊಲೀಸರ ಭದ್ರತೆಯ ಅಜ್ಞಾತವಾಸದಲ್ಲಿ ಕಳೆಯಬೇಕಾಗುತ್ತದೆ; ಆದರೆ ಮತಾಂಧ ಮುಸಲ್ಮಾನರು ರಾಜಾರೋಷವಾಗಿ ತಿರುಗಾಡುತ್ತಾರೆ ಮತ್ತು ಪೊಲೀಸರೂ ಅವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ!