ಪ್ರಧಾನಿ ನರೇಂದ್ರ ಮೋದಿಯವರು ಅಯೋಧ್ಯೆಯಲ್ಲಿ ಮಸಿದಿಗೆ ಅಡಿಪಾಯ ಹಾಕಬೇಕು !  – ಇಂಡಿಯನ್ ಮುಸ್ಲಿಂ ಲೀಗ್ ವಿನಂತಿ

ನವದೆಹಲಿ – ಶ್ರೀರಾಮ ಜನ್ಮಭೂಮಿ ಪ್ರಕರಣದಲ್ಲಿ ಅಯೋಧ್ಯೆಯಲ್ಲಿ ಮಸೀದಿ ನಿರ್ಮಿಸಲು 5 ಎಕರೆ ಭೂಮಿ ನೀಡುವಂತೆ ಮುಸ್ಲಿಂ ಪಕ್ಷಕ್ಕೆ ಸುಪ್ರೀಂ ಕೋರ್ಟ್ ಆದೇಶ ನೀಡಿತ್ತು. ಈ ಸ್ಥಳದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಮಸಿದಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಶಂಕುಸ್ಥಾಪನೆ ಮಾಡಬೇಕೆಂದು ಇಂಡಿಯನ್ ಮುಸ್ಲಿಂ ಲೀಗ್ ಮನವಿ ಮಾಡಿದೆ. ಇಲ್ಲಿನ ಶ್ರೀರಾಮ ಮಂದಿರದಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಟಾಪನೆ ಜನವರಿಯಲ್ಲಿ ನಡೆಯಲಿದ್ದು, ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ಉಪಸ್ಥಿತರಿರುವರು. ಅದೇ ವೇಳೆಗೆ ಮೋದಿಯವರು ಮಸಿದಿಯ ಶಂಕುಸ್ಥಾಪನೆ ಮಾಡಬೇಕು ಎಂದು ಮನವಿ ಮಾಡಲಾಗಿದೆ.

ಶ್ರೀರಾಮ ಜನ್ಮಭೂಮಿ ಪ್ರಕರಣದಲ್ಲಿ ಮುಸ್ಲಿಂ ಪಕ್ಷದ ಅರ್ಜಿದಾರ ಇಕ್ಬಾಲ್ ಅನ್ಸಾರಿ ಅವರು ಮಸೀದಿ ನಿರ್ಮಾಣದ ವಿಳಂಬಕ್ಕೆ ‘ಇಂಡೋ-ಇಸ್ಲಾಮಿಕ್ ಕಲ್ಚರಲ್ ಫೌಂಡೇಶನ್’ ಸದಸ್ಯರನ್ನು ಹೊಣೆಗಾರರನ್ನಾಗಿ ಮಾಡಿದ್ದಾರೆ.  ‘ಟ್ರಸ್ಟೀಗಳು ಚೆನ್ನಾಗಿದ್ದರೆ, ಇಷ್ಟೊತ್ತಿಗೆ ಒಂದಿಷ್ಟು ಕೆಲಸ ಆಗುತ್ತಿತ್ತು. ಮಸಿದಿ ನಿರ್ಮಾಣಕ್ಕೆ ಸರಕಾರ ಸಹಕಾರ ನೀಡಬೇಕು ಹಾಗೂ ಟ್ರಸ್ಟಿಗಳನ್ನು ಬದಲಾಯಿಸಬೇಕು” ಎಂದಿದ್ದಾರೆ.

ಸಂಪಾದಕೀಯ ನಿಲುವು

ಹಿಂದೂಗಳಿಂದ ಮಸಿದಿಗೆ ಅಡಿಪಾಯ ಹಾಕುವುದು ಇತರ ಮುಸ್ಲಿಂ ಸಂಘಟನೆಗಳಿಗೆ ಸ್ವೀಕಾರಾರ್ಹವೇ ?