ಜ್ಞಾನವಾಪಿ ಸಮೀಕ್ಷೆ – ನೆಲಮಾಳಿಗೆಯಲ್ಲಿ ಭಗ್ನಗೊಂಡ ದೇವರ ವಿಗ್ರಹ ಪತ್ತೆ!

  • ಜ್ಞಾನವಾಪಿ ಸಮೀಕ್ಷೆಯ ಎರಡನೇ ದಿನ

  • 5 ಕಲಶ ಮತ್ತು ಕಮಲದ ಆಕೃತಿ ಪತ್ತೆ!

  • 2 ಅಡಿ ತ್ರಿಶೂಲ ಪತ್ತೆ!

ವಾರಣಾಸಿ (ಉತ್ತರ ಪ್ರದೇಶ) – ವಾರಣಾಸಿ ಜಿಲ್ಲಾ ನ್ಯಾಯಾಲಯ, ಅಲಹಾಬಾದ್ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‌ನ ಅನುಮತಿಯ ನಂತರ ಆಗಸ್ಟ್ 4 ರಿಂದ ಪ್ರಾರಂಭವಾದ ಇಲ್ಲಿನ ಜ್ಞಾನವಾಪಿ ಪ್ರದೇಶದ ಸಮೀಕ್ಷೆಯ ಎರಡನೇ ದಿನ ಪ್ರಮುಖ ಮಾಹಿತಿಯೊಂದು ಬೆಳಕಿಗೆ ಬಂದಿದೆ. ಈ ಪ್ರಕರಣದಲ್ಲಿ ಮಹಿಳಾ ಅರ್ಜಿದಾರರ ಪರ ವಕೀಲ ಸುಧೀರ್ ತ್ರಿಪಾಠಿ ಇವರು, ‘ಇಲ್ಲಿಯ ನಂದಿಯ ಹತ್ತಿರ ವ್ಯಾಸಜಿ ನೆಲಮಾಳಿಗೆಯಿದೆ. ಇಂದು ಅದನ್ನು ತೆರೆದಾಗ ಅಲ್ಲಿ ವಿಗ್ರಹವೊಂದು ಪತ್ತೆಯಾಗಿದೆ’, ಎಂದು ಹೇಳಿದರು. ಇಲ್ಲಿ 5 ಕಲಶ ಹಾಗೂ ಕಮಲದ ಆಕೃತಿಗಳೂ ಪತ್ತೆಯಾಗಿವೆ ಎಂದು ಹೇಳಲಾಗುತ್ತಿದೆ.

(ಸೌಜನ್ಯ – Republic Bharat)

1. ಮಹಿಳಾ ಅರ್ಜಿದಾರರ ಸಿತಾ ಸಾಹು ಇವರು, ಇಲ್ಲಿ 4 ಅಡಿ ಎತ್ತರದ ಭಗ್ನಗೊಂಡ ವಿಗ್ರಹ ಪತ್ತೆಯಾಗಿದೆ. ಈ ವಿಗ್ರಹದಲ್ಲಿ ಅರ್ಧ ಶರೀರ ಮನುಷ್ಯ ಮತ್ತು ಅರ್ಧ ಪ್ರಾಣಿಯ ಶರೀರವಿದೆ. ಇದನ್ನು ನರಸಿಂಹನ ವಿಗ್ರಹ ಎಂದು ಹೇಳಲಾಗುತ್ತಿದೆ. ಇಲ್ಲಿ ಮುರಿದ ಕಂಬಗಳ ಅವಶೇಷಗಳೂ ಪತ್ತೆಯಾಗಿವೆ. ಅಲ್ಲದೇ 2 ಅಡಿ ತ್ರಿಶೂಲ ಹಾಗೂ 5 ಕಲಶಗಳು ಪತ್ತೆಯಾಗಿವೆ. ಇಲ್ಲಿಯ ಪ್ರದೇಶವನ್ನು ಚಿತ್ರೀಕರಿಸಲಾಗಿದೆ. ಎಂದು ತಿಳಿಸಿದ್ದಾರೆ.

2. ಇನ್ನೋರ್ವ ಅರ್ಜಿದಾರರಾದ ರಾಖಿ ಸಿಂಗ್ ಪರ ವಕೀಲರಾದ ಅನುಪಮ್ ದ್ವಿವೇದಿ ಇವರು, ಇಂದಿನ ಸಮೀಕ್ಷೆಗೆ ಮುಸ್ಲಿಂ ಪಕ್ಷದಿಂದ ಸಹಕಾರ ಸಿಗುತ್ತಿದೆ. ಪುರಾತತ್ವ ಇಲಾಖೆ ಸಮಗ್ರ ಸಮೀಕ್ಷೆ ನಡೆಸಿ ದಾಖಲೆಗಳನ್ನು ನೊಂದಾಯಿಸಿಕೊಳ್ಳುತ್ತಿದೆ. ನಂದಿಯ ಮುಂಭಾಗದ ನೆಲಮಾಳಿಗೆಯು ಶುಚಿತ್ವ ಇರಲಿಲ್ಲ. ಅಲ್ಲಿ ಸ್ವಚ್ಛಗೊಳಿಸಲಾಯಿತು. ಯಂತ್ರಗಳ ಮೂಲಕ ಜ್ಞಾನವಾಪಿ ಪ್ರದೇಶದ ಮೂರು ಆಯಾಮದ ಚಿತ್ರವನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಹೇಳಿದರು.

3. ಜ್ಞಾನವಾಪಿ ಸಮೀಕ್ಷೆಯನ್ನು ಬೆಳಿಗ್ಗೆ 7 ರಿಂದ ಮಧ್ಯಾಹ್ನ 12:30 ರವರೆಗೆ ನಂತರ ಮಧ್ಯಾಹ್ನ 2:30 ರಿಂದ ಸಂಜೆ 5 ರವರೆಗೆ ನಡೆಸಲಾಯಿತು. ಈ ಸಮೀಕ್ಷೆಯಲ್ಲಿ ಪುರಾತತ್ವ ಇಲಾಖೆಯ 61 ಮಂದಿ ಭಾಗವಹಿಸಿದ್ದಾರೆ. ಸಮೀಕ್ಷೆ ಸಮಯದಲ್ಲಿ ಜ್ಞಾನವಾಪಿಯ ಹೊರಭಾಗದಲ್ಲಿ ಬಿಗಿ ಪೊಲೀಸ್ ಬಂದೋಬಸ್ತು ಮಾಡಲಾಗಿದೆ.

4. ಮೊದಲಿಗೆ ಮುಸ್ಲಿಂ ಪಕ್ಷವು ನೆಲಮಾಳಿಗೆಯ ಕೀಲಿಕೈಯನ್ನು ನೀಡಲು ನಿರಾಕರಿಸಿತು; ಆದರೆ ಸರಕಾರ ಮಧ್ಯಪ್ರವೇಶಿಸಿದ ಬಳಿಕ ಕೀಲಿಕೈಯನ್ನು ನೀಡಿದರು. ತದನಂತರ ನೆಲಮಾಳಿಗೆಯನ್ನು ತೆರೆಯಲಾಯಿತು.