ಸಪ್ಟೆಂಬರ್ ನಲ್ಲಿ ಧಾರ್ಮಿಕ ಮತ್ತು ಜನಾಂಗೀಯ ಘರ್ಷಣೆ ಹೆಚ್ಚಾಗುವ ಸಾಧ್ಯತೆ ! – ಜ್ಯೋತಿಷಿ ಸಿದ್ದೇಶ್ವರ ಮಾರಾಟಕರ

ನಾಶಿಕ – ಸಪ್ಟೆಂಬರ್ ೨೦೨೩ ರಲ್ಲಿ ಧಾರ್ಮಿಕ ಮತ್ತು ಜನಾಂಗೀಯ ಘರ್ಷಣೆ ಹೆಚ್ಚಾಗುವ ಸಾಧ್ಯತೆಯಿದ್ದು ದೇವಸ್ಥಾನ ಮತ್ತು ಮಸೀದಿ ಅಥವಾ ಹಿಂದೂ ಮುಸ್ಲಿಮ ಇವರ ವಿವಾದದಿಂದ ಹಿಂಸಾಚಾರ, ಅಗ್ನಿ ಅವಘಡ ನಡೆಸುವ ಪ್ರಯತ್ನಗಳು ಈ ಸಮಯದಲ್ಲಿ ಸಂಭವಿಸಬಹುದು ಹಾಗೂ ದಕ್ಷಿಣ ಪೂರ್ವ ಭಾರತದಲ್ಲಿ ಹೆಚ್ಚಿನ ಮಳೆ ಕೂಡ ಬರಬಹುದು, ಸಾಂಗ್ಲಿ, ಕೊಲ್ಲಾಪುರ ಸಹಿತ ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ನೈಸರ್ಗಿಕ ವಿಪತ್ತು, ನೆರೆ, ಭೂಕಂಪ, ಸ್ಪೋಟದ ಘಟನೆಗಳು ಕೂಡ ಈ ಕಾಲದಲ್ಲಿ ಘಟಿಸಬಹುದು. ರಾಜಕೀಯ ಮತ್ತು ಸಾಮಾಜಿಕ ದೃಷ್ಟಿಯಿಂದ ಈ ಸಮಯ ಸಂಘರ್ಷಮಯವಾಗಿರುವುದು, ಎಂದು ಇಲ್ಲಿಯ ಪ್ರಸಿದ್ಧ ಜ್ಯೋತಿಷಿ ಶ್ರೀ. ಸಿದ್ದೇಶ್ವರ ಮರಟಕರ ಇವರು ಸಪ್ಟೆಂಬರ್ ತಿಂಗಳದ ರಾಜಕೀಯ ಮತ್ತು ಸಾಮಾಜಿಕ ಬೆಳವಣಿಗೆಗಳ ಬಗ್ಗೆ ತಿಳಿಸಿದರು.