ಪೊಲೀಸ್ ಠಾಣೆಯಲ್ಲಿ ಚಿನ್ನ ಮತ್ತು ಬೆಳ್ಳಿಯನ್ನು ಜಮಾ ಮಾಡಲಾಗುತ್ತಿದೆ ಎಂದು ಟ್ರಸ್ಟ್ ನ ದಾವೆ
ಪೊಲೀಸರಿಂದ ದಾವೆ ನಿರಾಕರಣೆ

ಶಹಡೋಲ (ಮಧ್ಯಪ್ರದೇಶ) – ಅಮರಕಂಟಕದಲ್ಲಿರುವ ನರ್ಮದಾ ನದಿಯ ಉಗಮ ದೇವಸ್ಥಾನಕ್ಕೆ ದಾನ ರೂಪದಲ್ಲಿ ಬಂದಿರುವ ಚಿನ್ನ ಮತ್ತು ಬೆಳ್ಳಿಯ ಯಾವುದೇ ದಾಖಲೆಗಳು ಲಭ್ಯವಿಲ್ಲ ಎಂದು ಆರೋಪಿಸಲಾಗಿದೆ. ನರ್ಮದಾ ಉಗಮ ದೇವಸ್ಥಾನದ ವ್ಯವಸ್ಥಾಪನೆಯನ್ನು ಸ್ಥಳೀಯ ನಗರ ಪರಿಷತ್ತಿನಿಂದ ಮಾಡಲಾಗುತ್ತದೆ; ಆದರೆ ಪರಿಷತ್ತಿನ ಬಳಿ ಟ್ರಸ್ಟ್ ನ ನಿಯಮಗಳು ಲಭ್ಯವಿಲ್ಲ. ದೇವಸ್ಥಾನದ ಟ್ರಸ್ಟ್ ದಾನದಲ್ಲಿ ಬಂದಿರುವ ಚಿನ್ನ ಮತ್ತು ಬೆಳ್ಳಿಯ ಒಡವೆಗಳನ್ನು ಅಮರಕಂಟಕ ಪೊಲೀಸ್ ಠಾಣೆಯಲ್ಲಿ ಜಮಾ ಮಾಡಲಾಗುತ್ತದೆ ಮತ್ತು ಅದರ ರಶೀದಿ ಟ್ರಸ್ಟ್ ಬಳಿ ಇದೆ ಎಂದು ದಾವೆ ಮಾಡಲಾಗುತ್ತಿದೆ. ಆದರೆ, ತಮ್ಮ ಬಳಿ ದೇವಸ್ಥಾನದ ಯಾವುದೇ ರೀತಿಯ ದಾನ ಅಥವಾ ಒಡವೆಗಳು ಬರುತ್ತಿಲ್ಲ ಎಂದು ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
೧. ‘ಶ್ರೀ ನರ್ಮದಾ ಮಂದಿರ ಉಗಮ ಟ್ರಸ್ಟ್’ ಸ್ಥಾಪನೆಯು ೨೦೦೧ ರಲ್ಲಿ ಆಗಿತ್ತು. ದೇವಸ್ಥಾನದ ವ್ಯವಸ್ಥಾಪನೆ, ನಿರ್ಮಾಣ ಕಾರ್ಯ, ಕಾಣಿಕೆ ಡಬ್ಬಿಗಳಲ್ಲಿನ ಹಣ ಮತ್ತು ಚಿನ್ನ-ಬೆಳ್ಳಿಯ ಒಡವೆಗಳ ಉಸ್ತುವಾರಿ ನೋಡಿಕೊಳ್ಳುವ ಜವಾಬ್ದಾರಿ ಈ ಟ್ರಸ್ಟ್ ಮೇಲಿದೆ. ಟ್ರಸ್ಟ್ ಅಡಿಯಲ್ಲಿ ಒಟ್ಟು ೧೦ ಕಾಣಿಕೆ ಡಬ್ಬಿಗಳಿವೆ. ಇದರಲ್ಲಿ ಮುಖ್ಯ ದೇವಸ್ಥಾನ, ಕಾರ್ತಿಕ ಸ್ವಾಮಿ, ಶ್ರೀರಾಮ ಮಂದಿರ, ಏಕಾದಶ ರುದ್ರ ಮಂದಿರ, ಉಗಮ ಸ್ಥಾನ, ಶ್ರೀವಿಷ್ಣು ಮಂದಿರ ಮತ್ತು ‘ಮಾಯಿ ಕಿ ಬಗಿಯಾ’ದಲ್ಲಿನ ಕಾಣಿಕೆ ಡಬ್ಬಿಗಳು ಸೇರಿವೆ. ದೇವಸ್ಥಾನದ ವ್ಯವಸ್ಥಾಪಕ ಮಂಡಳಿ ನೀಡಿರುವ ಮಾಹಿತಿಯ ಪ್ರಕಾರ, ಟ್ರಸ್ಟ್ ನ ಖಾತೆಯಲ್ಲಿ ಸದ್ಯ ೧ ಕೋಟಿ ೪೧ ಲಕ್ಷ ರೂಪಾಯಿಗಳು ಜಮಾ ಇವೆ. ಆದರೆ, ೨೦೦೧ ರಿಂದ ಇದುವರೆಗೆ ದಾನದಲ್ಲಿ ಬಂದಿರುವ ಚಿನ್ನ-ಬೆಳ್ಳಿಯ ಸಂಪೂರ್ಣ ದಾಖಲೆಗಳು ಮಾತ್ರ ಲಭ್ಯವಿಲ್ಲ.
೨. ೨೦೨೧ ರಿಂದ ವ್ಯವಸ್ಥೆಯನ್ನು ನೋಡಿಕೊಳ್ಳುತ್ತಿರುವ ಸಿಬ್ಬಂದಿ ಗಣೇಶ ಪಾಠಕ ಅವರ ಪ್ರಕಾರ, ತಾವು ಅಧಿಕಾರ ವಹಿಸಿಕೊಂಡ ನಂತರ ಹೊಸ ಪಟ್ಟಿಯೊಂದನ್ನು ಸಿದ್ಧಪಡಿಸಿದರು; ಆದರೆ ಹಳೆಯ ದಾಖಲಾತಿ ಪುಸ್ತಕದಲ್ಲಿನ ವಿವರಗಳು ಸ್ಪಷ್ಟವಾಗಿಲ್ಲ. ಆದ್ದರಿಂದ ದೇವಸ್ಥಾನದಲ್ಲಿರುವ ಒಟ್ಟು ಒಡವೆಗಳ ನಿಖರ ಸಂಖ್ಯೆ ಮತ್ತು ವಿವರಗಳು ತಿಳಿದಿಲ್ಲ. ಅಯೋಧ್ಯೆಯ ಶ್ರೀರಾಮ ಮಂದಿರದ ಕಳ್ಳತನದ ಪ್ರಕರಣದ ನಂತರ ಸಮಿತಿಯು ಹೊಸ ಒಡವೆಗಳ ಛಾಯಾಚಿತ್ರಗಳೊಂದಿಗೆ ನೊಂದಣಿ ಕಾರ್ಯವನ್ನು ಪ್ರಾರಂಭಿಸಿತು; ಆದರೆ ಹಳೆಯ ದಾಖಲೆಗಳು ಇಂದಿಗೂ ಅಪೂರ್ಣವಾಗಿಯೇ ಇವೆ.
೩. ಈ ದೇವಸ್ಥಾನದ ಒಡವೆಗಳನ್ನು ಪೊಲೀಸ ಠಾಣೆಯಲ್ಲಿ ಇಡಲಾಗುತ್ತದೆ. ಆದರೆ, ಈ ವ್ಯವಸ್ಥೆಯು ಯಾವಾಗ ಮತ್ತು ಯಾವ ಆಧಾರದ ಮೇಲೆ ಪ್ರಾರಂಭವಾಯಿತು ಎಂಬ ಮಾಹಿತಿ ಟ್ರಸ್ಟ್ ನ ಖಜಾಂಚಿ ಚೈನ ಸಿಂಗ್ ಪರಸ್ತೆ ಅವರಿಗೆ ಇಲ್ಲ. ಅವರು ಚಿನ್ನ-ಬೆಳ್ಳಿಯ ಒಟ್ಟು ದಾಖಲೆಗಳ ನಿಖರ ಮಾಹಿತಿ ತಮ್ಮಲ್ಲಿಲ್ಲ ಎಂಬುದನ್ನು ಒಪ್ಪಿಕೊಂಡಿದ್ದಾರೆ. ಒಡವೆಗಳನ್ನು ಯಾವಾಗ ಮತ್ತು ಯಾರ ಸಮ್ಮುಖದಲ್ಲಿ ಪೊಲೀಸ್ ಠಾಣೆಗೆ ಕಳುಹಿಸಲಾಗುತ್ತದೆ? ಎಂಬ ಪ್ರಕ್ರಿಯೆಯೂ ಕೂಡ ದಾಖಲೆಗಳ ಪುಸ್ತಕದಲ್ಲಿ ನಮೂದಾಗಿಲ್ಲ.
ಕಾಣಿಕೆಡಬ್ಬಿ ತೆರೆಯುವವರು ಮತ್ತು ಸಹಿ ಮಾಡುವವರ ನಡುವೆ ವ್ಯತ್ಯಾಸ!
ಕಾಣಿಕೆ ಡಬ್ಬಿ ತೆರೆಯಲು ಕರೆಯಲಾದ ಕೆಲವು ಸದಸ್ಯರು ಹಣ ಎಣಿಕೆಯ ಸಮಯದಲ್ಲಿ ಹಾಜರಿರುವುದಿಲ್ಲ, ಆದರೆ ನಂತರ ದಾಖಲಾತಿ ಪುಸ್ತಕದಲ್ಲಿ ಇತರ ಜನರ ಸಹಿಗಳನ್ನು ಪಡೆಯಲಾಗುತ್ತದೆ ಎಂದು ಅರ್ಚಕ ದುರ್ಗೇಶ ದ್ವಿವೇದಿ ಆರೋಪಿಸಿದ್ದಾರೆ. ಅನೇಕ ಪ್ರಕರಣಗಳಲ್ಲಿ ನಕಲಿ ಸಹಿಗಳನ್ನು ಅಥವಾ ನಂತರದ ದಿನಗಳಲ್ಲಿ ಸಹಿಗಳನ್ನು ಪಡೆಯಲಾಗುತ್ತದೆ. ಇದರಿಂದಾಗಿ ಕಾಣಿಕೆ ಹಣದ ಎಣಿಕೆಯ ಪಾರದರ್ಶಕತೆಯ ಬಗ್ಗೆ ದೊಡ್ಡ ಪ್ರಶ್ನೆಗಳು ಮೂಡುತ್ತಿವೆ. ಕಾಣಿಕೆ ಹಣ ಮತ್ತು ಒಡವೆಗಳ ವಿವರಗಳಿರುವ ದಾಖಲಾತಿ ಪುಸ್ತಕದಲ್ಲಿ ಅನೇಕ ಕಡೆಗಳಲ್ಲಿ ಕಡಿತಗೊಳಿಸಿರುವುದು ಮತ್ತು ‘ವೈಟ್ನರ್’ (ಬರಹವನ್ನು ಅಳಿಸಲು ಬಳಸುವ ಬಿಳಿ ಬಣ್ಣ) ಬಳಸಿರುವುದು ಕಂಡುಬಂದಿದೆ. ಕೆಲವು ದಾಖಲೆಗಳಲ್ಲಿ ಈ ಹಿಂದೆ ಬರೆದಿದ್ದ ಅಂಕಿ-ಅಂಶಗಳನ್ನು ಅಳಿಸಿ ಹೊಸ ಅಂಕಿ-ಅಂಶಗಳನ್ನು ಬರೆಯಲಾಗಿದೆ. ಇದರಿಂದಾಗಿ ದಾಖಲೆಗಳ ವಿಶ್ವಾಸಾರ್ಹತೆಯ ಮೇಲೆ ಸಂಶಯ ಮೂಡುತ್ತಿದ್ದು, ದಸ್ತಾವೇಜುಗಳ ಪ್ರಕಾರ ಒಡವೆಗಳ ತೂಕದಲ್ಲಿ ಮತ್ತು ದಾಖಲೆಗಳಲ್ಲಿಯೂ ಸಹ ಭಾರಿ ವ್ಯತ್ಯಾಸಗಳು ಕಂಡುಬಂದಿವೆ.
ರಾಜಸ್ಥಾನದ ಜೈಲಿನಲ್ಲಿ ಜುಲೈ ೨೨ ರಂದು ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಕೈದಿಗಳ ವಿವಾಹವಾಗಲಿದೆ ! : Rajasthan Jail Marriage
‘ಡಾಬರ್’ ಕಂಪನಿಯ ಮೋಸಂಬಿ ಜ್ಯೂಸ್ ಪ್ಯಾಕ್ ನಲ್ಲಿ ಕಪ್ಪು ಪಾಚಿ !
ರೈಲ್ವೆಯ ವಾತಾನುಕೂಲಿತ ಬೋಗಿಗಳಿಂದ ಚಾದರ, ಹೊದಿಕೆ ಮತ್ತು ಟವೆಲ್ ಕಳ್ಳತನದ ಘಟನೆಗಳಲ್ಲಿ ಏರಿಕೆ!
ಇಂಗ್ಲಿಷ್ ಭಾಷೆಯನ್ನು ಭಾರತದ ಸ್ಥಳೀಯ ಭಾಷೆ ಎಂದು ಪರಿಗಣಿಸಬಹುದೇ? – ಸುಪ್ರೀಂ ಕೋರ್ಟ್ ಪ್ರಶ್ನೆ
ನಮ್ಮ ಮತ್ತು ಭಾರತದ ಡಿ.ಎನ್.ಎ. ಒಂದೇ! – Afghanistan Minister
ಹಿಂದೂಗಳ ತೀವ್ರ ವಿರೋಧದ ನಂತರ ಕಲಾವಿದೆಯಿಂದ ಕ್ಷಮೆಯಾಚನೆ!