ಮೆರವಣಿಗೆ ಮಾರ್ಗದಲ್ಲಿ ಮಸೀದಿ ಮತ್ತು ಚರ್ಚ್  ಇರುವುದರಿಂದ ರಾಷ್ಟ್ರೀಯ ಸ್ವಯಂ ಸಂಘಕ್ಕೆ ಅನುಮತಿ ನಿರಾಕರಿಸುವುದು ಜಾತ್ಯತೀತದ ವಿರುದ್ಧ !

ತಮಿಳುನಾಡಿನ ದ್ರಮುಕ ಸರಕಾರಕ್ಕೆ ಛೀಮಾರಿ ಹಾಕಿದ ಮದ್ರಾಸ ಉಚ್ಚನ್ಯಾಯಾಲಯ

ಚೆನ್ನೈ (ತಮಿಳುನಾಡು) – ರಸ್ತೆಯ ಮಧ್ಯದಲ್ಲಿ ಮಸೀದಿ, ಚರ್ಚ್ ಇದ್ದರೆ ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ ಮೆರವಣಿಗೆ ನಡೆಸಲು ಅಥವಾ ಸಭೆ ನಡೆಸಲು ಏಕೆ ಅವಕಾಶ ಕೊಡುವುದಿಲ್ಲ ? ಒಂದು ವೇಳೆ ಇಂತಹ ಕಾರಣಗಳಿಂದ ಅನುಮತಿ ನೀಡದಿದ್ದರೆ, ಅದು ನಮ್ಮ ಜಾತ್ಯತೀತತೆಯ ಮೌಲ್ಯಗಳಿಗೆ ವಿರುದ್ಧವಾಗಿದೆ. ಇತರ ಧರ್ಮಗಳ ಧಾರ್ಮಿಕ ಸ್ಥಳ ಇರುವುದರಿಂದ ಅಥವಾ ರಾಜಕೀಯ ಪಕ್ಷದ ಕಚೇರಿ ಇದೆ ಎಂಬ ಕಾರಣಕ್ಕೆ ಅನುಮತಿ ನಿರಾಕರಿಸುವಂತಿಲ್ಲ. ಇಂತಹ ಆದೇಶ ಜಾತ್ಯತೀತ ಸಿದ್ಧಾಂತಕ್ಕೆ ವಿರುದ್ಧವಾಗಿದೆ. ಇದು ಭಾರತೀಯ ಸಂವಿಧಾನದ ಮೂಲ ಆಶಯದ ಉಲ್ಲಂಘನೆಯಾಗಿದೆಯೆಂದು ಮದ್ರಾಸ್ ನ್ಯಾಯಾಲಯವು ತಮಿಳುನಾಡು ಸರಕಾರಕ್ಕೆ ಛೀಮಾರಿ ಹಾಕಿದೆ. ಹಾಗೆಯೇ ಸಂಘಕ್ಕೆ ಮೆರವಣಿಗೆ ಅನುಮತಿ ನೀಡುವಂತೆ ಸರ್ಕಾರಕ್ಕೆ ಆದೇಶಿಸಿದೆ. ಹಾಗೆಯೇ ನ್ಯಾಯಾಲಯವು ಮೆರವಣಿಗೆಯ ಸಮಯದಲ್ಲಿ ಶಾಂತಿಯನ್ನು  ಕಾಪಾಡಲು ಪ್ರಯತ್ನಿಸುವಂತೆಯೂ ತಿಳಿಸಿದೆ. ಅಕ್ಟೋಬರ್ 22 ಮತ್ತು 29 ರಂದು ಮೆರವಣಿಗೆ ನಡೆಸಲಾಗುತ್ತಿದೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮೆರವಣಿಗೆಗೆ ಅನಮತಿ ನಿರಾಕರಿಸಿದ ಹಿನ್ನೆಲೆಯಲ್ಲಿ ಸಂಘ ಉಚ್ಚನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿತ್ತು.

ನ್ಯಾಯಾಲಯವು ಮುಂದುವರಿದು, ತಮಿಳುನಾಡು ಪೊಲೀಸರು ರಾಷ್ಟ್ರೀಯ ಸ್ವಯಂ ಸೇವಕ ಸಂಘ ಕೋರಿರುವ ಅನುಮತಿಯ ಕುರಿತು ಅನೇಕ ದಿನಗಳ ವರೆಗೆ ನಿರ್ಣಯವನ್ನು ತೆಗೆದುಕೊಳ್ಳುವುದಿಲ್ಲ. ಯಾವಾಗ ಈ ಪ್ರಕರಣ ಉಚ್ಚ ನ್ಯಾಯಾಲಯವನ್ನು ತಲುಪುವುದೋ, ಅದರ ಕೆಲವೇ ಸಮಯದ ಮೊದಲು ಅನುಮತಿಯನ್ನು ನಿರಾಕರಿಸಲಾಗುತ್ತದೆ. ಅನುಮತಿ ನಿರಾಕರಿಸುವಾಗ ಪೊಲೀಸರು ಮೆರವಣಿಗೆ ಮಾರ್ಗದಲ್ಲಿ ಮಸೀದಿ ಮತ್ತು ಚರ್ಚ ಇರುವ ಕಾರಣವನ್ನು ನೀಡುತ್ತಾರೆ. ಹಾಗೆಯೇ `ಈ ಮಾರ್ಗದಲ್ಲಿ ವಾಹನ ಸಂಚಾರ ವ್ಯತ್ಯಯವುಂಟಾಗುತ್ತದೆ’ ಎಂದೂ ಹೇಳುತ್ತದೆ’. ಮೆರವಣಿಗೆಗೆ ಅನುಮತಿ ನಿರಾಕರಿಸಲು ಇಂತಹ ಕಾರಣಗಳು ಸೂಕ್ತವಲ್ಲ ಮತ್ತು ಅವುಗಳನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದೆ.

ಸಂಪಾದಕೀಯ ನಿಲುವು

‘ಹಿಂದೂದ್ವೇಷ ಮತ್ತು ಹಿಂದುತ್ವನಿಷ್ಠ ಸಂಘಟನೆಗಳ ದಮನ ಎಂದರೆ ಜಾತ್ಯತೀತತೆ’ ಎಂದು ದೇಶದ ತಥಾಕಥಿತ ಜಾತ್ಯತೀತವಾದಿಗಳು ಮತ್ತು ಪ್ರಗತಿ(ಅಧೋ)ಪರರು ವ್ಯಾಖ್ಯಾನಿಸಿದ್ದಾರೆ. ಇದಕ್ಕೆ ನ್ಯಾಯಾಲಯವು ಛೀಮಾರಿ ಹಾಕಿದ್ದರೂ, ಇಂತಹ ಎಮ್ಮೆ ಚರ್ಮದ ಜನರಲ್ಲಿ ಬದಲಾವಣೆಯಾಗುವ ಸಾಧ್ಯತೆಯಿಲ್ಲ ಎಂಬುದು ಅಷ್ಟೇ ಸತ್ಯ !