ರಾಜಸ್ಥಾನದ ಜೈಲಿನಲ್ಲಿ ಜುಲೈ ೨೨ ರಂದು ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಕೈದಿಗಳ ವಿವಾಹವಾಗಲಿದೆ ! : Rajasthan Jail Marriage

ಜೋಧಪುರ (ರಾಜಸ್ಥಾನ) – ಇಲ್ಲಿನ ಮಂಡೋರ ತೆರೆದ ಜೈಲಿನಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಪುರುಷ ಮತ್ತು ಮಹಿಳಾ ಕೈದಿಗಳು ಪರಸ್ಪರ ವಿವಾಹವಾಗಲು ರಾಜಸ್ಥಾನ ಉಚ್ಚ ನ್ಯಾಯಾಲಯವು ಅನುಮತಿ ನೀಡಿದೆ. ರಾಜ್ಯ ಸರಕಾರವೂ ಸಹ ಈ ವಿವಾಹಕ್ಕೆ ಯಾವುದೇ ಆಕ್ಷೇಪ ವ್ಯಕ್ತಪಡಿಸಿಲ್ಲ. ಅದರಂತೆ ಜುಲೈ ೨೨ ರಂದು ಇವರ ವಿವಾಹವು ನೆರವೇರಲಿದೆ.

ಮೂಲಾರಾಮ ಮತ್ತು ಸೀಮಾ ಹೆಸರಿನ ಈ ಕೈದಿಗಳು ತೆರೆದ ಕಾರಾಗೃಹದಲ್ಲಿ ಕೃಷಿ ಕೆಲಸ ಮಾಡುತ್ತಿದ್ದರು. ಕೆಲಸದ ಸಮಯದಲ್ಲಿ ಇಬ್ಬರ ನಡುವೆ ಆತ್ಮೀಯತೆ ನಿರ್ಮಾಣವಾಗಿತ್ತು. ಮೂಲಾರಾಮ ತನ್ನ ನೆರೆಯವನನ್ನು ಹಾಗೂ ಇತ್ತ ಸೀಮಾ ತನ್ನ ಪತಿಯನ್ನು ಹತ್ಯೆ ಮಾಡಿದ್ದರು. ಈ ಅಪರಾಧಗಳಿಗಾಗಿ ನ್ಯಾಯಾಲಯವು ಇವರಿಬ್ಬರಿಗೂ ಜೀವಾವಧಿ ಶಿಕ್ಷೆಯನ್ನು ವಿಧಿಸಿತ್ತು.

ಜೈಲಿನ ಉದ್ದೇಶವು ಅಪರಾಧಿಗಳನ್ನು ಸಮಾಜದ ಮುಖ್ಯ ವಾಹಿನಿಗೆ ತರುವುದಾಗಿದೆ ! – ನ್ಯಾಯಾಲಯ

ನ್ಯಾಯಾಲಯವು, ಜೈಲಿನ ವ್ಯವಸ್ಥೆಯ ಮುಖ್ಯ ಉದ್ದೇಶವು ಅಪರಾಧಿಗಳಿಗೆ ಕೇವಲ ಶಿಕ್ಷೆ ನೀಡುವುದು ಅಥವಾ ಅವರನ್ನು ಸಮಾಜದಿಂದ ದೂರವಿಡುವುದು ಮಾತ್ರವಲ್ಲ; ಬದಲಾಗಿ ಅವರ ಪುನರ್ವಸತಿ ಕಲ್ಪಿಸುವುದು ಮತ್ತು ಅವರನ್ನು ಸಮಾಜದ ಮುಖ್ಯ ವಾಹಿನಿಗೆ ತರಲು ಸೂಕ್ತ ಅವಕಾಶವನ್ನು ಕಲ್ಪಿಸಿಕೊಡುವುದೂ ಆಗಿದೆ, ಎಂದು ಹೇಳಿದೆ.