ಕಳ್ಳತನ ತಡೆಯಲು ಪ್ರಯಾಣಿಕರಿಗೆ ನೇರ ಬಂಧಿಸಲಾಗುವುದು

ನವದೆಹಲಿ – ಭಾರತೀಯ ರೈಲ್ವೆಯ ವಾತಾನುಕೂಲಿತ ಬೋಗಿಗಳಿಂದ ಚಾದರ, ಹೊದಿಕೆ ಮತ್ತು ಟವೆಲ್ ಕಳ್ಳತನದ ಘಟನೆಗಳಲ್ಲಿ ಕಳೆದ ಕೆಲವು ವರ್ಷಗಳಲ್ಲಿ ಭಾರಿ ಏರಿಕೆ ಕಂಡುಬಂದಿದೆ. ಈ ಸಮಸ್ಯೆಯಿಂದ ರೈಲ್ವೆಗೆ ಆಗುತ್ತಿರುವ ಕೋಟ್ಯಂತರ ರೂಪಾಯಿ ನಷ್ಟವನ್ನು ಗಮನದಲ್ಲಿಟ್ಟುಕೊಂಡು, ರೈಲ್ವೆ ಸಚಿವಾಲಯವು ಇದೀಗ ಅತ್ಯಂತ ಆಕ್ರಮಣಕಾರಿ ಮತ್ತು ಕಠಿಣ ಕ್ರಮಗಳನ್ನು ಕೈಗೊಳ್ಳಲು ಪ್ರಾರಂಭಿಸಿದೆ. ರೈಲ್ವೆ ಅಧಿಕಾರಿಗಳು ನೀಡಿದ ಮಾಹಿತಿಯ ಪ್ರಕಾರ, ಈ ಕಳ್ಳತನವನ್ನು ತಡೆಯಲು ರೈಲ್ವೆ ಭದ್ರತಾ ಪಡೆಗೆ ಕಳ್ಳರನ್ನು ಸ್ಥಳದಲ್ಲೇ ಬಂಧಿಸುವ ಅಧಿಕಾರ ನೀಡುವ ಕುರಿತು ಚಿಂತನೆ ನಡೆಯುತ್ತಿದೆ.
Rise in Thefts of Bedsheets, Blankets, and Towels from Air-Conditioned Railway Coaches
Passengers found stealing these items will henceforth face immediate arrest.
Such incidents reflect a decline in ethical values in society and underscore the need to promote moral education… pic.twitter.com/Gonf3alArJ
— Sanatan Prabhat (@SanatanPrabhat) July 15, 2026
1. ರೈಲ್ವೆಯ ಮಾಹಿತಿಯ ಪ್ರಕಾರ, ಕೊರೊನಾ ಮಾಹಾಮಾರಿಯ ಸಮಯದ ನಂತರ ಜನವರಿ 2022 ರಲ್ಲಿ ‘ಬೆಡ್‌ರೋಲ್’ (ಬೆಡ್‌ಶೀಟ್, ಹೊದಿಕೆ ಮತ್ತು ಟವೆಲ್) ಸೇವೆಯನ್ನು ಪುನಃ ಪ್ರಾರಂಭಿಸಲಾಗಿತ್ತು. ನಂತರ ಮೇ 2026 ರವರೆಗೆ, ಅಂದರೆ ಕೇವಲ 4 ವರ್ಷ 3 ತಿಂಗಳುಗಳಲ್ಲಿ, ರೈಲ್ವೆಯ 16 ವಲಯಗಳಿಂದ ಒಟ್ಟು 1 ಕೋಟಿ 27 ಲಕ್ಷ ರೂಪಾಯಿ ಮೌಲ್ಯದ ‘ಬೆಡ್‌ರೋಲ್’ ಕಳ್ಳತನವಾಗಿದೆ.
2. ಈ ಕಳ್ಳತನವನ್ನು ಶಾಶ್ವತವಾಗಿ ತಡೆಯಲು, ರೈಲ್ವೆಯ ಬೆಡ್‌ಶೀಟ್, ಟವೆಲ್ ಮತ್ತು ಹೊದಿಕೆಗಳ ಮೇಲೆ ಈಗ ಅತಿಸೂಕ್ಷ್ಮ ‘ಆರ್‌ಎಫ್‌ಐಡಿ’ (ರೇಡಿಯೋ ಫ್ರೀಕ್ವೆನ್ಸಿ ಐಡೆಂಟಿಫಿಕೇಶನ್) ಚಿಪ್‌ಗಳನ್ನು ಅಳವಡಿಸಲಾಗುವುದು. ಇದರೊಂದಿಗೆ, ರೈಲ್ವೆ ಬೋಗಿಗಳ ‘ಎಕ್ಸಿಟ್ ಗೇಟ್’ನಲ್ಲಿ ಕಾಣಿಸದ ‘ಡಿಜಿಟಲ್ ಸೆನ್ಸರ್‌ಗಳನ್ನು’ ಅಳವಡಿಸಲಾಗುವುದು. ಯಾವುದೇ ಪ್ರಯಾಣಿಕರು ರೈಲ್ವೆಯ ಬೆಡ್‌ಶೀಟ್ ಅಥವಾ ಟವೆಲ್ ಅನ್ನು ಬ್ಯಾಗ್‌ಗೆ ಹಾಕಿ ಹೊರಹೋಗಲು ಪ್ರಯತ್ನಿಸಿದರೆ, ಈ ‘ಸೆನ್ಸರ್‌ಗಳು’ ತಕ್ಷಣವೇ ಸೂಚನೆಯನ್ನು ನೀಡುತ್ತವೆ.
3. ಪ್ರಯಾಣಿಕರು ರೈಲಿನಿಂದ ಇಳಿಯುವ ಕನಿಷ್ಠ 30 ನಿಮಿಷಗಳ ಮೊದಲು ತಮ್ಮ ‘ಬೆಡ್‌ರೋಲ್’ ಅನ್ನು ಸಿಬ್ಬಂದಿಗೆ ಹಸ್ತಾಂತರಿಸಬೇಕು ಎಂದು ರೈಲ್ವೆ ಆಡಳಿತ ಮನವಿ ಮಾಡಿದೆ.
4. ಅಲ್ಲದೆ, ಕಳ್ಳತನವನ್ನು ತಡೆಯಲು ಪ್ರಸ್ತುತ ಬೋಗಿಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ರೈಲ್ವೆ ಸಿಬ್ಬಂದಿಗೆ ಹೆಚ್ಚು ಜಾಗರೂಕರಾಗಿರಲು ಸೂಚನೆ ನೀಡಲಾಗಿದೆ.
‘ಡಾಬರ್’ ಕಂಪನಿಯ ಮೋಸಂಬಿ ಜ್ಯೂಸ್ ಪ್ಯಾಕ್ ನಲ್ಲಿ ಕಪ್ಪು ಪಾಚಿ !
ಇಂಗ್ಲಿಷ್ ಭಾಷೆಯನ್ನು ಭಾರತದ ಸ್ಥಳೀಯ ಭಾಷೆ ಎಂದು ಪರಿಗಣಿಸಬಹುದೇ? – ಸುಪ್ರೀಂ ಕೋರ್ಟ್ ಪ್ರಶ್ನೆ
ನಮ್ಮ ಮತ್ತು ಭಾರತದ ಡಿ.ಎನ್.ಎ. ಒಂದೇ! – Afghanistan Minister
ಹಿಂದೂಗಳ ತೀವ್ರ ವಿರೋಧದ ನಂತರ ಕಲಾವಿದೆಯಿಂದ ಕ್ಷಮೆಯಾಚನೆ!
ಹಡಪ್ಸರ್ನಲ್ಲಿ ಹಿಂದುತ್ವನಿಷ್ಠ ಕಾರ್ಯಕರ್ತನ ಮೇಲೆ ಸಾಹಿಲ್ ಶೇಖ್ ಮತ್ತು ಆತನ ಗ್ಯಾಂಗ್ನಿಂದ ಹಿಂಸಾತ್ಮಕ ಹಲ್ಲೆ!
ಶ್ರೀರಾಮನ ಮೇಲಿನ ಆಘಾತ !