ಜ್ಞಾನವಾಪಿ ಪ್ರಕರಣದಲ್ಲಿ ಹಿಂದೂ ಪಕ್ಷದ ಮನವಿಯ ಬಗ್ಗೆ ವಿಚಾರಣೆ ನಡೆಯುವುದು ! ದಿವಾಣಿ ನ್ಯಾಯಾಲಯದ ನಿರ್ಣಯ

ವಾರಾಣಸಿಯ ತ್ವರಿತ ದಿವಾಣಿ ನ್ಯಾಯಾಲಯವು ಜ್ಞಾನವಾಪಿಯ ಪ್ರಕರಣದಲ್ಲಿ ಹಿಂದೂ ಪಕ್ಷದಿಂದ ದಾಖಲಿಸಲಾಗಿರುವ ಮನವಿಯ ವಿಚಾರಣೆಗೆ ಯೋಗ್ಯವಾಗಿದೆ ಎಂದು ಹೇಳಿ ಅದನ್ನು ದಾಖಲಿಸಿಕೊಂಡಿದೆ.

ಜ್ಞಾನವಾಪಿಯಲ್ಲಿನ ಶಿವಲಿಂಗದ ಸಂರಕ್ಷಿಸುವ ಆದೇಶ ಕಾಯಂ !

ವಾರಣಾಸಿಯಲ್ಲಿ ಜ್ಞಾನವಾಪಿಯಲ್ಲಿ ಸಿಕ್ಕಿರುವ ಶಿವಲಿಂಗದ ಬಗ್ಗೆ ಸಂರಕ್ಷಣೆ ನೀಡುವ ಹಿಂದೆ ನೀಡಿರುವ ಆದೇಶವನ್ನು ಸರ್ವೋಚ್ಚ ನ್ಯಾಯಾಲಯ ಕಾಯಂ ಇರಿಸಿದೆ. ಮುಂದಿನ ಆದೇಶದವರೆಗೆ ಸಂರಕ್ಷಣೆ ನೀಡಲು ನ್ಯಾಯಾಲಯ ಹೇಳಿದೆ. ಇದರ ಜೊತೆಗೆ ಈ ಪ್ರಕರಣದಲ್ಲಿ ಉತ್ತರ ನೀಡಲು ಹಿಂದೂ ಪಕ್ಷಕ್ಕೆ ೩ ವಾರದ ಕಾಲಾವಕಾಶ ನೀಡಲಾಗಿದೆ.

ಜ್ಞಾನವಾಪಿಯಲ್ಲಿನ ಶಿವಲಿಂಗದ ಸಂರಕ್ಷಣೆಗೆ ಸಂಬಂಧಿತ ಅರ್ಜಿಯ ಕುರಿತು ಇಂದು ಸರ್ವೋಚ್ಚ ನ್ಯಾಯಾಲಯದಲ್ಲಿ ವಿಚಾರಣೆ

ವಾರಾಣಸಿಯಲ್ಲಿನ ಜ್ಞಾನವಾಪಿಯಲ್ಲಿ ಸಿಕ್ಕಿರುವ ಶಿವಲಿಂಗದ ಸಂರಕ್ಷಣೆಗೆ ಸಂಬಂಧಿಸಿದ ಅರ್ಜಿಯ ಕುರಿತು ಇಂದು ಮಧ್ಯಾಹ್ನ ೩ ಗಂಟೆಗೆ ವಿಚಾರಣೆ ನಡೆಸಲು ಸರ್ವೋಚ್ಚ ನ್ಯಾಯಾಲಯ ಸಮ್ಮತಿಸಿದೆ. ಈ ಪ್ರಕರಣದ ವಿಚಾರಣೆಗಾಗಿ ‘ನ್ಯಾಯಪೀಠ’ದ ಸ್ಥಾಪನೆ ಮಾಡಲಾಗುವುದೆಂದು ನ್ಯಾಯಾಲಯ ಹೇಳಿದೆ.