ಕಲಂ ೩೭೦ ರ ತೆಗೆದ ನಂತರ ಕಾಶ್ಮೀರದಲ್ಲಾದ ಬದಲಾವಣೆಗಳು

೨೦೧೯ ರಲ್ಲಿ ಕಲಂ ೩೭೦ ತೆಗೆದು ಹಾಕಿದ ನಂತರ ೨೦ ದಿನಗಳಲ್ಲಿ ಶ್ರೀನಗರದ ಸಚಿವಾಲಯದಿಂದ ಜಮ್ಮು-ಕಾಶ್ಮೀರದ ಧ್ವಜವನ್ನು ತೆಗೆದುಹಾಕಲಾಯಿತು ಮತ್ತು ಅಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಲಾಯಿತು. ಎಲ್ಲಾ ಸರಕಾರಿ ಕಚೇರಿಗಳು ಮತ್ತು ಸಾಂವಿಧಾನಿಕ ಸಂಸ್ಥೆಗಳ ಮೇಲೆ ರಾಷ್ಟ್ರಧ್ವಜವನ್ನು ಹಾರಿಸಲಾಯಿತು.

ಅಭೂಝಮಾಡ (ಛತ್ತೀಸಗಡ) ದಲ್ಲಿ ಆದಿವಾಸಿಗಳಿಂದ ಮತಾಂತರದ ವಿರುದ್ಧ ಆಂದೋಲನ

ಛತ್ತೀಸಗಡ ರಾಜ್ಯದ ಅಭೂಝಮಾಡ ಎಂಬ ನಕ್ಸಲ ಪೀಡಿತ ಭಾಗದಲ್ಲಿ ಕ್ರೈಸ್ತ ಮಿಷನರಿಗಳಿಂದಾಗುವ ಬಡ ಆದಿವಾಸಿಗಳ ಮತಾಂತರದ ವಿರುದ್ಧ ಆದಿವಾಸಿ ಗ್ರಾಮಸ್ಥರು ಆಂದೋಲನವನ್ನು ಆರಂಭಿಸಿದ್ದಾರೆ.

ಪ್ರಾರ್ಥನೆಯ ಹೆಸರಿನಲ್ಲಿ ಶಕ್ತಿಪ್ರದರ್ಶನ ಮಾಡಿ ಇತರ ಧರ್ಮದವರ ಭಾವನೆಯನ್ನು ಕೆಣಕಬಾರದು !

ಎಲ್ಲ ಧರ್ಮದ ಜನರು ತಮ್ಮ ಧಾರ್ಮಿಕ ಸ್ಥಳಗಳಲ್ಲಿ ಅಂದರೆ ಮಂದಿರ, ಗುರುದ್ವಾರ, ಮಸೀದಿ, ಚರ್ಚ ಮುಂತಾದ ಸ್ಥಳಗಳಲ್ಲಿ ಪ್ರಾರ್ಥನೆಯನ್ನು ಮಾಡುತ್ತಾರೆ. ಹಬ್ಬಗಳ ಸಂದರ್ಭದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಪ್ರಾರ್ಥನೆ ಮಾಡಲು ಅನುಮತಿಯನ್ನು ನೀಡಲಾಗುತ್ತದೆ; ಆದರೆ ಪ್ರಾರ್ಥನೆಯ ಹೆಸರಿನಲ್ಲಿ ಶಕ್ತಿ ಪ್ರದರ್ಶನ ಮಾಡಿ, ಇತರ ಧರ್ಮದ ಜನರನ್ನು ಕೆಣಕುವುದು ಸೂಕ್ತವಲ್ಲ

ಕೇರಳದಲ್ಲಿ ಮತಾಂಧ ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾದ ಪದಾಧಿಕಾರಿಯ ಹತ್ಯೆಯ ಪ್ರಕರಣದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಇಬ್ಬರ ಬಂಧನ !

ಡಿಸೆಂಬರ್ ೧೮ ರಂದು ರಾತ್ರಿ ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್. ಡಿ. ಪಿ. ಐ.)ದ ರಾಜ್ಯ ಸಚಿವರಾದ ಕೆ.ಎಸ್. ಶಾನರವರ ಹತ್ಯೆಯ ಪ್ರಕರಣದಲ್ಲಿ ಕೇರಳ ಪೊಲೀಸರು ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಸಾದ ಮತ್ತು ರಥೀಶ ಎಂಬ ಇಬ್ಬರು ಸ್ವಯಂಸೇವಕರನ್ನು ಬಂಧಿಸಿದ್ದಾರೆ.

ಮುಸಲ್ಮಾನರು ಬಹುಸಂಖ್ಯಾತರಾಗಿರುವ ಲಕ್ಷದ್ವೀಪದಲ್ಲಿನ ಶಾಲೆಗಳಿಗೆ ಈಗ ಶುಕ್ರವಾರದ ಬದಲು ರವಿವಾರದ ರಜೆ ನೀಡಲಾಗುವುದು ! – ಸರಕಾರದ ನಿರ್ಣಯ

ಮುಸಲ್ಮಾನರು ಹೆಚ್ಚಿನ ಸಂಖ್ಯೆಯಲ್ಲಿರುವ ಲಕ್ಷದ್ವೀಪದಲ್ಲಿ ಸರಕಾರವು ಅಲ್ಲಿನ ಶಾಲೆಗಳಿಗೆ ಶುಕ್ರವಾರದ ಬದಲು ಇತರ ರಾಜ್ಯಗಳಂತೆ ರವಿವಾರದಂದು ಸಾಪ್ತಾಹಿಕ ರಜೆಯನ್ನು ನೀಡಲು ನಿರ್ಧರಿಸಿದೆ.

ಕೇಂದ್ರ ಸರಕಾರದ ‘ಬೇಟಿ ಬಚಾವೋ-ಬೇಟಿ ಪಢಾವೋ’ ಯೋಜನಗಾಗಿ ಶೇ. ೭೯ ರಷ್ಟು ಹಣ ಕೇವಲ ಜಾಹೀರಾತಿಗಾಗಿ ವಿನಿಯೋಗ ! – ಸಂಸದೀಯ ಸಮಿತಿಯ ವರದಿಯಲ್ಲಿ ಮಾಹಿತಿ

‘ಬೇಟಿ ಬಚಾವೋ ಬೇಟಿ ಪಢಾವೋ’ ಯೋಜನೆಗಾಗಿ ಖರ್ಚು ಮಾಡಿರುವ ೪೪೬ ಕೋಟಿ ೭೨ ಲಕ್ಷ ರೂಪಾಯಿಗಳ ಪೈಕಿ ಶೇ. ೭೮.೧೧ ರಷ್ಟು ಹಣ ಜಾಹೀರಾತಿಗಾಗಿ ಖರ್ಚು ಮಾಡಿರುವುದು ಬೆಳಕಿಗೆ ಬಂದಿದೆ.

ಶ್ರೀಕೃಷ್ಣನ ಜನ್ಮಭೂಮಿಯಲ್ಲಿ ಆರತಿ ಮಾಡಲು ಅನುಮತಿ ನಿರಾಕರಣೆ!

ಅಖಿಲ ಭಾರತ ಹಿಂದೂ ಮಹಾಸಭೆಯು ಇಲ್ಲಿಯ ಶ್ರೀಕೃಷ್ಣ ಜನ್ಮಭೂಮಿಯಲ್ಲಿ ಇರುವ ಈದ್ಗಾ ಪರಿಸರದಲ್ಲಿ ಡಿಸೆಂಬರ್ ೧೦ ರಂದು ಭಗವಾನ್ ಶ್ರೀಕೃಷ್ಣನಿಗೆ ಆರತಿ ಮಾಡಲು ಜಿಲ್ಲಾಧಿಕಾರಿಗಳಲ್ಲಿ ಅನುಮತಿ ಕೇಳಿತ್ತು. ಆದರೆ ಸರಕಾರವು ಅದನ್ನು ನಿರಾಕರಿಸಿದೆ.

ಶ್ರೀಪೆರುಂಬುದೂರ (ತಮಿಳುನಾಡು)ದಲ್ಲಿನ ಶ್ರೀ ಕನಕ ಕಾಲೀಶ್ವರ ದೇವಸ್ಥಾನವನ್ನು ಉರುಳಿಸಿದ ಸರಕಾರ !

ಸರಕಾರಿ ಭೂಮಿಯ ಮೇಲೆ ಕಟ್ಟಲಾದ ಮಸೀದಿ ಮತ್ತು ಇತರ ಅತಿಕ್ರಮಣಗಳನ್ನು ಕೆಡವಿ ಹಾಕುವ ಧೈರ್ಯವನ್ನು ಸರಕಾರವು ಏಕೆ ತೋರಿಸುವುದಿಲ್ಲ ? ಹಿಂದೂಗಳು ಸಹಿಷ್ಣುಗಳಾಗಿರುವುದರಿಂದ ಅವರ ಮೇಲೆ ದಬ್ಬಾಳಿಕೆ ನಡೆಸುವ ನಾಸ್ತಿಕವಾದಿ ತಮಿಳುನಾಡು ಸರಕಾರವು ಹಿಂದೂದ್ವೇಷಿಯಾಗಿದೆ !

ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯ ಆಧಾರದಲ್ಲಿ ಚಲನಚಿತ್ರ ನಿರ್ಮಾಣಕ್ಕಾಗಿ ಚಿತ್ರನಿರ್ಮಾಪಕರಿಗೆ ಸಹಾಯ ಮಾಡುವೆವು ! – ಅನುರಾಗ ಸಿಂಹ ಠಾಕೂರ, ಕೇಂದ್ರೀಯ ಮಾಹಿತಿ ಮತ್ತು ಪ್ರಸಾರಣ ಮಂತ್ರಿ

ಭಾರತೀಯ ಸಂಸ್ಕೃತಿ ಮತ್ತು ಪರಂಪರೆ ಈ ವಿಷಯ ಆಧಾರಿತ ಚಲನಚಿತ್ರ ನಿರ್ಮಾಣ ಮಾಡುವುದ್ದಕ್ಕಾಗಿ ‘ನ್ಯಾಶನಲ್ ಫಿಲ್ಮ್ ಡೆವಲಪ್.ಮೆಂಟ್ ಕಾರ್ಪೊರೇಷನ್ ಆಫ್ ಇಂಡಿಯಾ’ (ಎನ್.ಎಫ್,ಡಿ.ಸಿ.) ಮೂಲಕ ಚಲನಚಿತ್ರ ನಿರ್ಮಾಪಕರಿಗೆ ಸಹಾಯ ಮಾಡಲಾಗುವುದು.

ಬೆಂಗಳೂರಿನಲ್ಲಿ ೫೦ ವರ್ಷ ಹಳೆಯ ಶ್ರೀ ಚಾಮುಂಡೇಶ್ವರಿ ದೇವಸ್ಥಾನ ತೆರವು ಮಾಡಲು ಬಂದಿದ್ದ ರೇಲ್ವೆ ಅಧಿಕಾರಿಗಳ ಪ್ರಯತ್ನವು ಹಿಂದೂಗಳ ಸಂಘಟನೆಯಿಂದ ವಿಫಲ

ವಸಂತನಗರದ ಕಂಟೋನ್ಮೆಂಟ್ ರೇಲ್ವೆ ನಿಲ್ದಾಣದಿಂದ ೨೦೦ ಮೀಟರ್ ದೂರದಲ್ಲಿರುವ ಶ್ರೀ ಚಾಮುಂಡೇಶ್ವರಿ ದೇವಸ್ಥಾನವು ಅನಧಿಕೃತ ಎಂದು ತೆರವು ಮಾಡುವ ರೇಲ್ವೆ ಅಧಿಕಾರಿಗಳ ಕ್ರಮದ ವಿರುದ್ಧ ಹಿಂದೂ ಸಂಘಟನೆಗಳು ಆಂದೋಲನ ಮಾಡಿದರು.