ಮುಸಲ್ಮಾನರು ಬಹುಸಂಖ್ಯಾತರಾಗಿರುವ ಲಕ್ಷದ್ವೀಪದಲ್ಲಿನ ಶಾಲೆಗಳಿಗೆ ಈಗ ಶುಕ್ರವಾರದ ಬದಲು ರವಿವಾರದ ರಜೆ ನೀಡಲಾಗುವುದು ! – ಸರಕಾರದ ನಿರ್ಣಯ

ಮುಸಲ್ಮಾನರಿಂದ ವಿರೋಧ

  • ಲಕ್ಷದ್ವೀಪದಲ್ಲಿ ಮುಸಲ್ಮಾನರು ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದ ಧಾರ್ಮಿಕ ವಾರದಂತೆ ರಜೆ ನೀಡಲಾಗುತ್ತಿತ್ತು ಹಾಗೂ ಅದನ್ನು ಶಾಶ್ವತವಾಗಿ ಇರಿಸಬೇಕು ಎಂಬುದು ಅವರ ಅಪೇಕ್ಷೆಯಾಗಿದೆ, ಹೀಗಿರುವಾಗ ಸಂಪೂರ್ಣ ಭಾರತವು ಹಿಂದೂ ಬಹುಸಂಖ್ಯಾತವಾಗಿರುವುದರಿಂದ ಹಿಂದೂಗಳು ಈಗ ತಮ್ಮ ಧಾರ್ಮಿಕ ವಾರ ಗುರುವಾರವಾಗಿದ್ದರಿಂದ ಆ ದಿನವೇ ಸಾರ್ವಜನಿಕ ರಜೆ ಸಿಗಬೇಕು, ಎಂಬ ಬೇಡಿಕೆಯನ್ನು ಇಡಬೇಕು ಮತ್ತು ಕೇಂದ್ರ ಸರಕಾರವು ಅದನ್ನು ಸ್ವೀಕರಿಸಬೇಕು !
  • ಭಾರತವು ಕಳೆದ ೭೪ ವರ್ಷಗಳಿಂದ ಜಾತ್ಯಾತೀತ ದೇಶವಾಗಿರುವಾಗ ಲಕ್ಷದ್ವೀಪದಲ್ಲಿ ಮುಸಲ್ಮಾನರ ಧರ್ಮದ ಅನುಸಾರ ಶುಕ್ರವಾರದಂದು ಯಾಕೆ ರಜೆ ನೀಡಲಾಗುತ್ತಿತ್ತು, ಎಂಬುದನ್ನು ಇಲ್ಲಿಯವರೆಗಿನ ಎಲ್ಲ ಪಕ್ಷಗಳ ಸರಕಾರಗಳು ಹೇಳಬೇಕಿದೆ !


ಲಕ್ಷದ್ವೀಪ – ಮುಸಲ್ಮಾನರು ಹೆಚ್ಚಿನ ಸಂಖ್ಯೆಯಲ್ಲಿರುವ ಲಕ್ಷದ್ವೀಪದಲ್ಲಿ ಸರಕಾರವು ಅಲ್ಲಿನ ಶಾಲೆಗಳಿಗೆ ಶುಕ್ರವಾರದ ಬದಲು ಇತರ ರಾಜ್ಯಗಳಂತೆ ರವಿವಾರದಂದು ಸಾಪ್ತಾಹಿಕ ರಜೆಯನ್ನು ನೀಡಲು ನಿರ್ಧರಿಸಿದೆ. ಲಕ್ಷದ್ವೀಪ ಶಿಕ್ಷಣ ವಿಭಾಗವು ಹೊಸ ದಿನದರ್ಶಿಕೆಯನ್ನು ಜಾರಿಗೊಳಿಸಿದೆ. ಇದರಲ್ಲಿ ಶಾಲೆಗಳಿಗಾಗಿ ಶುಕ್ರವಾರದಂದು ಕೆಲಸ ಮತ್ತು ರವಿವಾರದಂದು ರಜೆಯನ್ನು ಘೋಷಿಸಲಾಗಿದೆ. ಈ ಹೊಸ ಆದೇಶದಿಂದಾಗಿ ಲಕ್ಷದ್ವೀಪದಲ್ಲಿ ಧಾರ್ಮಿಕ ಕಾರಣಗಳಿಂದಾಗಿ ಶುಕ್ರವಾರದ ಸಾಪ್ತಾಹಿಕ ರಜೆಯ ವಿಶೇಷ ಅಧಿಕಾರವನ್ನು ರದ್ದುಗೊಳಿಸಲಾಗಿದೆ; ಆದರೆ ಇದರಿಂದ ಇಲ್ಲಿ ವಿರೋಧ ಆರಂಭವಾಗಿದೆ.

೧. ಲಕ್ಷದ್ವೀಪ ಜಿಲ್ಲಾ ಪಂಚಾಯತ್ತಿನ ಉಪಾಧ್ಯಕ್ಷ ಸಹಸಮುಪದೇಶಕ ರಾದ ಪಿ. ಪಿ. ಅಬ್ಬಾಸರವರು ಸರಕಾರದ ಸಲಹೆಗಾರರಾದ ಪ್ರಫುಲ ಖೋಡ ಪಟೇಲರವರಿಗೆ ಪತ್ರ ಬರೆದು ಶಿಕ್ಷಣ ವಿಭಾಗದ ಆದೇಶದ ಮೇಲೆ ಪುನರ್ವಿಚಾರ ಮಾಡಲು ವಿನಂತಿಸಿದ್ದಾರೆ. ಲಕ್ಷದ್ವೀಪದಲ್ಲಿ ಹೆಚ್ಚಿನ ಜನರು ಮುಸಲ್ಮಾನರಾಗಿದ್ದರಿಂದ ಅವರ ಶ್ರದ್ಧೆಯ ಅನುಸಾರ ಶುಕ್ರವಾರದಂದು ರಜೆ ಇರುತ್ತದೆ. ಏಕೆಂದರೆ ಶುಕ್ರವಾರದ ನಮಾಜು ಪಠಣ ಮಾಡುವುದನ್ನು ಒಂದು ಧಾರ್ಮಿಕ ಪದ್ಧತಿ ಎಂದು ತಿಳಿಯಲಾಗುತ್ತದೆ. ಈ ವಿಷಯದಲ್ಲಿ ಚುನಾಯಿತ ಜನಪ್ರತಿನಿಧಿಗಳು ಮತ್ತು ಇತರ ಸಂಬಂಧಿತರೊಂದಿಗೆ ಸಭೆಯನ್ನು ನಡೆಸಿ ಚರ್ಚೆ ಮಾಡಬೇಕಾಗಿ ಅವರು ಸರಕಾರಕ್ಕೆ ವಿನಂತಿಸಿದ್ದಾರೆ.

೨. ಲಕ್ಷದ್ವೀಪದ ಸಂಸದರಾದ ಮಹಮ್ಮದ ಫೈಸಲ ರವರು, ’೬ ದಶಕಗಳ ಹಿಂದೆ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಲು ಇಲ್ಲಿ ಶಾಲೆಯನ್ನು ತೆರೆದಾಗಿನಿಂದ ಇಲ್ಲಿ ಶುಕ್ರವಾರದಂದು ಸಾಪ್ತಾಹಿಕ ರಜೆಯಿದ್ದರೆ ಶನಿವಾರದಂದು ಅರ್ಧ ದಿನ ಕೆಲಸವಿದ್ದರೆ ಅರ್ಧ ದಿನ ರಜೆ ಇರುತ್ತಿತ್ತು. ಈಗ ರಜೆಯನ್ನು ಬದಲಾಯಿಸುವ ಈ ನಿರ್ಣಯವನ್ನು ಯಾವುದೇ ಶಾಲೆ, ಜಿಲ್ಲಾ ಪಂಚಾಯತಿ ಅಥವಾ ಸ್ಥಳೀಯ ಸಂಸದರೊಂದಿಗೆ ವಿಚಾರ ವಿಮರ್ಶೆ ಮಾಡದೆ ತೆಗೆದುಕೊಳ್ಳಲಾಗಿದೆ. ಈ ನಿರ್ಣಯವು ಜನರ ಅಧಿಕಾರದಲ್ಲಿಲ್ಲ. ಇದು ಸರಕಾರದ ಒಂದು ಬದಿಯ ನಿರ್ಣಯವಾಗಿದೆ. ಸ್ಥಳೀಯ ವ್ಯವಸ್ಥೆಯಲ್ಲಿ ಯಾವುದೇ ಬದಲಾವಣೆಯನ್ನು ಮಾಡುವಾಗ ಆಗಾಗ ಆ ಬಗ್ಗೆ ಜನರೊಂದಿಗೆ ಚರ್ಚೆ ಮಾಡಬೇಕು’ ಎಂದು ಹೇಳಿದರು. (ಶುಕ್ರವಾರದಂದು ರಜೆ ಇರುವ ನಿರ್ಣಯವೇ ಮೂಲತಃ ತಪ್ಪಾಗಿದೆ. ಈಗ ಅದನ್ನು ಸುಧಾರಿಸಲಾಗುತ್ತಿದೆ ಮತ್ತು ಅದಕ್ಕೆ ವಿರೋಧಿಸಲಾಗುತ್ತಿದ್ದರೆ ಅದರ ವಿರೋಧಕರ ಮೇಲೆ ಕಠೋರ ಕಾರ್ಯಾಚರಣೆಯನ್ನು ಮಾಡಬೇಕು ! – ಸಂಪಾದಕರು)