ಅಭೂಝಮಾಡ (ಛತ್ತೀಸಗಡ) ದಲ್ಲಿ ಆದಿವಾಸಿಗಳಿಂದ ಮತಾಂತರದ ವಿರುದ್ಧ ಆಂದೋಲನ

ಆಡಳಿತವು ಮತಾಂತರದ ಘಟನೆಗಳನ್ನು ತಡೆಯದಿದ್ದರೆ ತೀವ್ರ ಆಂದೋಲದ ಎಚ್ಚರಿಕೆ !

  • ಮತಾಂತರದ ವಿರುದ್ಧ ರಾಜಕಾರಣಿಗಳು, ಆಡಳಿತ ಮತ್ತು ಪೊಲೀಸರು ನಿಷ್ಕ್ರಿಯರಾಗಿರುವುದರಿಂದಲೇ ಈ ರೀತಿಯಲ್ಲಿ ಆದಿವಾಸಿಗಳಿಗೆ ರಸ್ತೆಗಿಳಿದು ಆಂದೋಲನ ಮಾಡಬೇಕಾಗುತ್ತಿರುವುದು ಲಜ್ಜಾಸ್ಪದವಾಗಿದೆ !
  • ಕ್ರೈಸ್ತರ ಓಲೈಕೆ ಮಾಡುವ ಕಾಂಗ್ರೆಸ್ಸಿನ ರಾಜ್ಯದಲ್ಲಿ ಹಿಂದೂಗಳ ಮತಾಂತರದ ಘಟನೆಗಳನ್ನು ತಡೆಯದಿರುವುದು ಹೊಸ ವಿಷಯವೇನಲ್ಲ !

ಅಭೂಝಮಾಡ (ಛತ್ತೀಸಗಡ) – ಛತ್ತೀಸಗಡ ರಾಜ್ಯದ ಅಭೂಝಮಾಡ ಎಂಬ ನಕ್ಸಲ ಪೀಡಿತ ಭಾಗದಲ್ಲಿ ಕ್ರೈಸ್ತ ಮಿಷನರಿಗಳಿಂದಾಗುವ ಬಡ ಆದಿವಾಸಿಗಳ ಮತಾಂತರದ ವಿರುದ್ಧ ಆದಿವಾಸಿ ಗ್ರಾಮಸ್ಥರು ಆಂದೋಲನವನ್ನು ಆರಂಭಿಸಿದ್ದಾರೆ. ಇಲ್ಲಿನ ೧೦ ಗ್ರಾಮಪಂಚಾಯತಿಗಳ ಆದಿವಾಸಿಗಳು ಸಂಘಟಿತರಾಗಿ ಆಂದೋಲನವನ್ನು ಆರಂಭಿಸಿದ್ದಾರೆ. ಅವರು ಆಡಳಿತಕ್ಕೆ ಈ ಮತಾಂತರ ಮಾಡುವುದನ್ನು ನಿಲ್ಲಿಸದಿದ್ದರೆ ತೀವ್ರ ಆಂದೋಲನಗಳನ್ನು ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಈ ಮೊದಲು ಆದಿವಾಸಿ ಗ್ರಾಮಸ್ಥರು ಸಭೆಯನ್ನು ನಡೆಸಿದ್ದರು. ಇದರಲ್ಲಿ ’ಆದಿವಾಸಿ ಸಂಸ್ಕೃತಿಯನ್ನು ಉಳಿಸುವುದು ನಮ್ಮ ಧ್ಯೇಯವಾಗಿದ್ದು ಷಡ್ಯಂತ್ರಗಳನ್ನು ರಚಿಸುವವರನ್ನು ನಾವು ಬಿಡುವುದಿಲ್ಲ’ ಎಂದು ಈ ಗ್ರಾಮಸ್ಥರು ಹೇಳಿದರು. ಕ್ರೈಸ್ತ ಪಂಥವನ್ನು ಸ್ವೀಕರಿಸುವ ಆದಿವಾಸಿಗಳಿಗೆ ’ಮತಾಂತರ ಮಾಡಿದ್ದರಿಂದ ನಿಮಗೆ ಆದಿವಾಸಿ ಎಂದು ದೊರೆಯುವ ಎಲ್ಲ ಲಾಭಗಳು ಹಾಗೂ ಮೀಸಲಾತಿ ಸಿಗುವುದಿಲ್ಲ’ ಎಂದು ಹೇಳುತ್ತ ಪುನಃ ಹಿಂದೂ ಧರ್ಮವನ್ನು ಸ್ವೀಕರಿಸಲು ಕರೆ ನೀಡಿದರು. ’ಮತಾಂತರದಿಂದ ಈ ಭಾಗದಲ್ಲಿ ವಾದ ಮತ್ತು ಹಿಂಸಾಚಾರದ ಘಟನೆಗಳ ಪ್ರಮಾಣ ಹೆಚ್ಚಾಗಿದೆ. ಇವುಗಳನ್ನು ತಡೆಯಲು ನಾವು ಸಂಘಟಿತರಾಗಿರಬೇಕು ’ ಎಂದು ಆದಿವಾಸಿಗಳು ಹೇಳಿದ್ದಾರೆ.