೨೮.೧೨.೨೦೨೧ ರಂದು ಕಾಶ್ಮೀರಿ ಹೋಮ್‌ಲ್ಯಾಂಡ್ ಡೇ ನಿಮಿತ್ತ…
ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ೩೭೦ ನೇ ಕಲಂ ತೆಗೆದು ಹಾಕಿ ಎರಡು ವರ್ಷಗಳು ಪೂರ್ಣವಾಗಿದೆ. ೨೦೧೯ ರಲ್ಲಿ ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ತೆಗೆದುಹಾಕಲಾಯಿತು. ಜಮ್ಮು-ಕಾಶ್ಮೀರವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ (ಜಮ್ಮು-ಕಾಶ್ಮೀರ ಮತ್ತು ಲಡಾಖ್), ಎಂದು ವಿಜ್ರಂಭಿಸಲಾಗಿದೆ. ಈ ಎರಡು ವರ್ಷಗಳಲ್ಲಿ ಜಮ್ಮು-ಕಾಶ್ಮೀರದಲ್ಲಿ ಹಲವು ಬದಲಾವಣೆಗಳು ಮಾಡಲಾಗಿದೆ. ಅದರಲ್ಲಿ ಕೆಲವು ಪ್ರಮುಖ ಬದಲಾವಣೆಗಳು ಈ ಕೆಳಗಿನಂತಿವೆ.
೧. ಸ್ಥಳೀಯ ನಿವಾಸಿಗಳ ಸ್ಥಾನ
ಜಮ್ಮು-ಕಾಶ್ಮೀರದಲ್ಲಿ ನೆಲೆಸಲು ನಿಯಮಗಳಲ್ಲಿ ಬದಲಾವಣೆಗಳನ್ನು ಮಾಡುತ್ತಾ ಇತರ ರಾಜ್ಯಗಳ ಪುರುಷರಿಗೆ ಈ ಸ್ಥಳಗಳಲ್ಲಿ ನೆಲೆಸಲು ಅವಕಾಶ ನೀಡಲಾಗಿದೆ. ಜಮ್ಮು-ಕಾಶ್ಮೀರದ ಮಹಿಳೆಯನ್ನು ಮದುವೆಯಾಗುವ ಅಥವಾ ಇತರ ರಾಜ್ಯಗಳ ವ್ಯಕ್ತಿಯು ಸ್ಥಳೀಯ ನಿವಾಸಿಯಾಗಲು ಸಾಧ್ಯವಾಗುತ್ತದೆ. ಈ ಮೊದಲು ಮಹಿಳೆಯ ಪತಿ ಮತ್ತು ಮಕ್ಕಳನ್ನು ಜಮ್ಮು-ಕಾಶ್ಮೀರದ ನಿವಾಸಿಗಳೆಂದು ಪರಿಗಣಿಸಲಾಗುತ್ತಿರಲಿಲ್ಲ.
೨. ಭೂಮಿ ಖರೀದಿಸಬಹುದು !
ಕೇಂದ್ರ ಸರಕಾರವು ಜಮ್ಮು-ಕಾಶ್ಮೀರದ ಹೊರಗಿನ ಜನರಿಗೆ ಕೃಷಿಯೇತರ ಯೋಗ್ಯ ಭೂಮಿ ಖರೀದಿಸಲು ಅನುಮತಿ ನೀಡಿದೆ. ಈ ಹಿಂದೆ ಜಮ್ಮು-ಕಾಶ್ಮೀರದ ಜನರಿಗೆ ಮಾತ್ರ ಭೂಮಿ ಖರೀದಿಸಲು ಅವಕಾಶವಿತ್ತು.
೩. ಸರಕಾರಿ ಕಟ್ಟಡಗಳ ಮೇಲೆ ತ್ರಿವರ್ಣ ಧ್ವಜ !
೨೦೧೯ ರಲ್ಲಿ ಕಲಂ ೩೭೦ ತೆಗೆದು ಹಾಕಿದ ನಂತರ ೨೦ ದಿನಗಳಲ್ಲಿ ಶ್ರೀನಗರದ ಸಚಿವಾಲಯದಿಂದ ಜಮ್ಮು-ಕಾಶ್ಮೀರದ ಧ್ವಜವನ್ನು ತೆಗೆದುಹಾಕಲಾಯಿತು ಮತ್ತು ಅಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಲಾಯಿತು. ಎಲ್ಲಾ ಸರಕಾರಿ ಕಚೇರಿಗಳು ಮತ್ತು ಸಾಂವಿಧಾನಿಕ ಸಂಸ್ಥೆಗಳ ಮೇಲೆ ರಾಷ್ಟ್ರಧ್ವಜವನ್ನು ಹಾರಿಸಲಾಯಿತು.
೪. ಕಲ್ಲು ತೂರಾಟ ಮಾಡುವವರಿಗೆ ಪಾಸ್‌ಪೋರ್ಟ್ ಇಲ್ಲ !
ಕೇಂದ್ರಾಡಳಿತ ಪ್ರದೇಶದಲ್ಲಿ, ಕಲ್ಲು ತೂರಾಟ ಮಾಡುವ ಮತ್ತು ದೇಶವಿರೋಧಿ ಚಟುವಟಿಕೆಗಳಲ್ಲಿ ತೊಡಗಿರುವವರಿಗೆ ಪಾಸ್‌ಪೋರ್ಟ್ ನೀಡುವುದಿಲ್ಲ ಎಂದು ಸರಕಾರ ಇತ್ತೀಚೆಗೆ ಆದೇಶ ಹೊರಡಿಸಿದೆ. ಅದೇ ರೀತಿ ಸರಕಾರಿ ಉದ್ಯೋಗದಿಂದಲೂ ವಂಚಿತರಾಗುತ್ತಾರೆ.
೫. ಅಧಿಕಾರದ ವಿಕೇಂದ್ರೀಕರಣ
ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ತೆಗೆದು ಹಾಕಿದ ನಂತರ, ಕೇಂದ್ರ ಸರಕಾರವು ಸ್ಥಳವನ್ನು ವಿಕೇಂದ್ರೀಕರಣಗೊಳಿಸಲು ಪ್ರಯತ್ನಿಸಿದೆ. ಇದರ ಅಡಿಯಲ್ಲಿ ಮೊದಲು ಪಂಚಾಯತ್ ಮತ್ತು ನಂತರ ‘ಬಿಡಿಸಿ’ ಚುನಾವಣೆಗಳು ಅಲ್ಲಿ ನಡೆದವು.
೬. ‘ಗುಪಕಾರ್ ಮೈತ್ರಿ’ಯ ಉದಯ
ಜಮ್ಮು-ಕಾಶ್ಮೀರದಲ್ಲಿ ಪಕ್ಷಗಳು ಒಗ್ಗೂಡಿ ‘ಗುಪಕಾರ್ ಮೈತ್ರಿ’ ಮಾಡಿಕೊಂಡಿವೆ. ಇದರಲ್ಲಿ ‘ಪಿಡಿಪಿ’ ಮತ್ತು ‘ನ್ಯಾಶನಲ್ ಕಾನ್ಫರೆನ್ಸ್’ ಸೇರಿದಂತೆ ಇತರ ಪ್ರಮುಖ ಪಕ್ಷಗಳು ಸೇರಿವೆ. ಇವರೆಲ್ಲರೂ ಒಟ್ಟಿಗೆ ಚುನಾವಣೆ ಎದುರಿಸಿದ್ದರು.
೭. ಶೇಖ್ ಅಬ್ದುಲ್ಲಾ ಅವರ ಜನ್ಮದಿನವನ್ನು ಆಚರಿಸುವುದನ್ನು ನಿಲ್ಲಿಸಲಾಯಿತು !
ಶೇಖ್ ಅಬ್ದುಲ್ಲಾ ಅವರ ಜನ್ಮದಿನವನ್ನು ಪ್ರತಿ ವರ್ಷ ಸೆಪ್ಟೆಂಬರ್ ೫ ರಂದು ಸಾರ್ವಜನಿಕವಾಗಿ ಆಚರಿಸಲಾಗುತ್ತದೆ; ಆದರೆ ೨೦೧೯ ರಿಂದ ಈ ಪದ್ಧತಿಯನ್ನು ನಿಲ್ಲಿಸಲಾಗಿದೆ. ಅಲ್ಲದೇ ಶೇಖ್ ಅಬ್ದುಲ್ಲಾ ಅವರ ಹೆಸರಿನ ಅನೇಕ ಕಟ್ಟಡಗಳಿಗೆ ಮರುನಾಮಕರಣ ಮಾಡಲಾಗಿದೆ.
ಆಧಾರ : ದೈನಿಕ ‘ಸಕಾಳ’ ಜಾಲತಾಣ