ಶ್ರೀಕೃಷ್ಣನ ಜನ್ಮಭೂಮಿಯಲ್ಲಿ ಆರತಿ ಮಾಡಲು ಅನುಮತಿ ನಿರಾಕರಣೆ!

ಅಖಿಲ ಭಾರತ ಹಿಂದೂ ಮಹಾಸಭೆಯು ಜಿಲ್ಲಾಧಿಕಾರಿಗಳಿಗೆ ಬೇಡಿಕೆ ಸಲ್ಲಿಸಿತ್ತು

ಉತ್ತರ ಪ್ರದೇಶದಲ್ಲಿ ಭಾಜಪ ಸರಕಾರವಿರುವಾಗ ಹಿಂದೂಗಳಿಗೆ ಇಂತಹ ಅನುಮತಿಯು ಸಿಗಬೇಕು ಎಂಬುದು ಹಿಂದೂಗಳ ಭಾವನೆ!


ಮಥೂರಾ (ಉತ್ತರಪ್ರದೇಶ) – ಅಖಿಲ ಭಾರತ ಹಿಂದೂ ಮಹಾಸಭೆಯು ಇಲ್ಲಿಯ ಶ್ರೀಕೃಷ್ಣ ಜನ್ಮಭೂಮಿಯಲ್ಲಿ ಇರುವ ಈದ್ಗಾ ಪರಿಸರದಲ್ಲಿ ಡಿಸೆಂಬರ್ ೧೦ ರಂದು ಭಗವಾನ್ ಶ್ರೀಕೃಷ್ಣನಿಗೆ ಆರತಿ ಮಾಡಲು ಜಿಲ್ಲಾಧಿಕಾರಿಗಳಲ್ಲಿ ಅನುಮತಿ ಕೇಳಿತ್ತು. ಆದರೆ ಸರಕಾರವು ಅದನ್ನು ನಿರಾಕರಿಸಿದೆ.

೧. ಜಿಲ್ಲಾಧಿಕಾರಿ ನವನೀತ ಸಿಂಹ ಚಹಲ ಇವರು ಮಾತನಾಡುತ್ತಾ, ಆರತಿಗಾಗಿ ಅನುಮತಿ ನೀಡಿಲ್ಲ; ಏಕೆಂದರೆ ಇದರಿಂದ ಒಂದು ಹೊಸ ಪರಂಪರೆ ನಿರ್ಮಾಣವಾಗುವ ಸಾಧ್ಯತೆ ಇದೆ. ಈ ಪ್ರಕರಣದಲ್ಲಿ ಸರಕಾರವು ಜಾಗರೂಕವಾಗಿದೆ. ಇಲ್ಲಿಯ ಶಾಂತಿ ಕದಡುವ ಪ್ರಯತ್ನ ನಡೆಸಿದರೆ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು.

೨. ಹಿಂದೂ ಮಹಾಸಭೆಯ ರಾಷ್ಟ್ರೀಯ ಅಧ್ಯಕ್ಷೆ ರಾಜಶ್ರೀ ಚೌಧರಿ ಒಂದು ದಿನ ಮೊದಲು, ‘ನಾವು ಜಿಲ್ಲಾಡಳಿತಕ್ಕೆ ಡಿಸೆಂಬರ್ ೭ ರಂದು ಪತ್ರ ಬರೆದಿದ್ದೇವೆ; ಆದರೆ ಈವರೆಗೂ ಯಾವುದೇ ಉತ್ತರ ಬಂದಿಲ್ಲ. ಅನುಮತಿ ಇಲ್ಲದೆ ನಾವು ಆರತಿ ಮಾಡಲಾರೆವು. ಆದರೆ ನಮಗೆ ಅನುಮತಿ ನೀಡದೇ ಇದ್ದರೆ ಸ್ವತಃ ಸರಕಾರವೇ ಅಲ್ಲಿ ಆರತಿ ಮಾಡಿ ಅದರ ವಿಡಿಯೋ ನಮಗೆ ಕಳುಹಿಸಲಿ’, ಎಂದು ಹೇಳಿದ್ದರು

೩. ಈ ಮೊದಲು ಮಹಾಸಭೆಯು ಡಿಸೆಂಬರ್ ೬ ರಂದು ಈದ್ಗಾ ಮಸೀದಿಯಲ್ಲಿ ಭಗವಾನ್ ಶ್ರೀಕೃಷ್ಣನ ಮೂರ್ತಿಯನ್ನು ಸ್ಥಾಪಿಸಿ ಅಲ್ಲಿ ಜಲಾಭಿಷೇಕ ಮಾಡುವೆವೆಂದು ಘೋಷಣೆ ಮಾಡಿತ್ತು; ಆದರೆ ಪೊಲೀಸರು ಅವರ ಪದಾಧಿಕಾರಿಗಳನ್ನು ಗೃಹಬಂಧನದಲ್ಲಿರಿಸಿದ್ದು ಮತ್ತು ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಿದ್ದ ಕಾರಣಗಳಿಂದಾಗಿ ಸಂಘಟನೆಯು ಆ ಘೋಷಣೆಯನ್ನು ಹಿಂಪಡೆದುಕೊಂಡಿತ್ತು.