ಪ್ರಾರ್ಥನೆಯ ಹೆಸರಿನಲ್ಲಿ ಶಕ್ತಿಪ್ರದರ್ಶನ ಮಾಡಿ ಇತರ ಧರ್ಮದವರ ಭಾವನೆಯನ್ನು ಕೆಣಕಬಾರದು !

ಹರಿಯಾಣ ಭಾಜಪ ಮುಖ್ಯಮಂತ್ರಿ ಮನೋಹರಲಾಲ ಖಟ್ಟರ

ಗುರುಗ್ರಾಮ (ಹರಿಯಾಣಾ) – ಎಲ್ಲ ಧರ್ಮದ ಜನರು ತಮ್ಮ ಧಾರ್ಮಿಕ ಸ್ಥಳಗಳಲ್ಲಿ ಅಂದರೆ ಮಂದಿರ, ಗುರುದ್ವಾರ, ಮಸೀದಿ, ಚರ್ಚ ಮುಂತಾದ ಸ್ಥಳಗಳಲ್ಲಿ ಪ್ರಾರ್ಥನೆಯನ್ನು ಮಾಡುತ್ತಾರೆ. ಹಬ್ಬಗಳ ಸಂದರ್ಭದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಪ್ರಾರ್ಥನೆ ಮಾಡಲು ಅನುಮತಿಯನ್ನು ನೀಡಲಾಗುತ್ತದೆ; ಆದರೆ ಪ್ರಾರ್ಥನೆಯ ಹೆಸರಿನಲ್ಲಿ ಶಕ್ತಿ ಪ್ರದರ್ಶನ ಮಾಡಿ, ಇತರ ಧರ್ಮದ ಜನರನ್ನು ಕೆಣಕುವುದು ಸೂಕ್ತವಲ್ಲ ಎಂದು ಹರಿಯಾಣಾ ಮುಖ್ಯಮಂತ್ರಿ ಮನೋಹರಲಾಲ ಖಟ್ಟರ ಇವರು ರಾಜ್ಯ ವಿಧಾನಸಭೆಯಲ್ಲಿ ಹೇಳಿದರು. ರಾಜ್ಯದ ಗುರುಗ್ರಾಮದಲ್ಲಿ ಕೆಲವು ತಿಂಗಳುಗಳಿಂದ ಸಾರ್ವಜನಿಕ ಸ್ಥಳಗಳಲ್ಲಿ ನಮಾಜು ಪಠಣಕ್ಕೆ ಹಿಂದೂಗಳು ವಿರೋಧ ವ್ಯಕ್ತಪಡಿಸುತ್ತಿರುವ ಕುರಿತು ನೂಹದ ಕಾಂಗ್ರೆಸ್ ಶಾಸಕ ಅಫತಾಬ ಅಹಮದ್ ಇವರು ಪ್ರಶ್ನಿಸಿದ್ದರು. ಪ್ರಶ್ನೆಗೆ ಉತ್ತರಿಸುವಾಗ ಅವರು ಮಾತನಾಡುತ್ತಿದ್ದರು. ಈ ಹಿಂದೆಯೂ ಮುಖ್ಯಮಂತ್ರಿ ಖಟ್ಟರ ಇವರು ‘ಬಹಿರಂಗ ಸ್ಥಳದಲ್ಲಿ ನಮಾಜು ಪಠಣ ಮಾಡುವುದನ್ನು ಸಹಿಸುವುದಿಲ್ಲ, ಎಂದು ಹೇಳಿದ್ದರು.

ಮುಖ್ಯಮಂತ್ರಿ ಖಟ್ಟರ ಇವರು ಮಾತನ್ನು ಮುಂದುವರಿಸುತ್ತಾ, ನನಗೆ ಸಂತೋಷವೆನಿಸುತ್ತಿದೆ, ಏಕೆಂದರೆ, ‘ಶುಕ್ರವಾರದ ನಮಾಜಿಗೆ ಒಂದು ನಿರ್ದಿಷ್ಟ ಸ್ಥಳದಲ್ಲಿ ನಮಾಜು ಪಠಣ ಮಾಡಲು ಜನರು ಸಮ್ಮತಿಸಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ಆಗುವ ನಮಾಜುಪಠಣಕ್ಕೆ ಕೋಮುಬಣ್ಣ ಬಳಿದು ಸೌಹಾರ್ದತೆಯನ್ನು ಕೆಡಿಸಬಾರದು, ಎಂದರು.