ಮಥುರಾದಲ್ಲಿ ಆಡಳಿತದಿಂದ ಕಪ್ರ್ಯೂ (ಸಂಚಾರ ನಿಷೇಧ) ಜಾರಿ

ಶ್ರೀಕೃಷ್ಣ ಜನ್ಮಭೂಮಿಯಲ್ಲಿನ ಈದ್ಗಾ ಮಸೀದಿಯಲ್ಲಿ ಡಿಸೆಂಬರ್ 6 ರಂದು ಶ್ರೀಕೃಷ್ಣನ ಮೂರ್ತಿ ಸ್ಥಾಪಿಸಿ ಅಭಿಷೇಕ ಮಾಡುವುದೆಂಬ ಹಿಂದೂ ಮಹಾಸಭೆಯ ಘೋಷಣೆಯ ಪರಿಣಾಮ

ಉತ್ತರಪ್ರದೇಶದಲ್ಲಿ ಮಹಾಪುರುಷರ ಜಯಂತಿ ಮತ್ತು ಮಹಾಶಿವರಾತ್ರಿಯಂದು ಕಸಾಯಿಖಾನೆಗಳನ್ನು ತೆರೆಯಲು ಮತ್ತು ಮಾಂಸ ಮಾರಾಟಕ್ಕೆ ನಿಷೇಧ

ಅಹಿಂಸೆಯ ಸಂದೇಶವನ್ನು ಸಾರಿದ ಮಹಾಪುರುಷರ ಜಯಂತಿಯನ್ನು `ಅಹಿಂಸಾ ದಿನ’ ಎಂದು ಆಚರಿಸುವಂತೆಯೂ ಸೂಚಿಸಲಾಗಿದೆ.

ಬಲ್ಲಭಗಡ್ (ಹರಿಯಾಣಾ) ಇಲ್ಲಿಯ ಸರಕಾರಿ ಭೂಮಿಯಲ್ಲಿನ ಅಕ್ರಮ ಮಜಾರನ್ನು ಧ್ವಂಸಗೈದ ಹಿಂದುತ್ವನಿಷ್ಠರು !

ಆಡಳಿತಕ್ಕೆ ಮನವಿ ನೀಡಿದರೂ ಕ್ರಮ ಕೈಗೊಳ್ಳದಿದ್ದರೆ ಇಂತಹ ಆಡಳಿತದಿಂದ ಏನು ಪ್ರಯೋಜನ ? ಸರಕಾರಿ ಜಾಗದಲ್ಲಿ ಅಕ್ರಮ ಮಜಾರ ನಿರ್ಮಾಣವಾಗುವವರೆಗೆ ಆಡಳಿತ ನಿದ್ದೆ ಮಾಡುತ್ತಿತ್ತೇ ?

ಸಮಿತಿಯ ಮನವಿಯ ನಂತರ ಉತ್ತರಪ್ರದೇಶದ ಕಾನೂನು ಮತ್ತು ನ್ಯಾಯ ಸಚಿವರಿಂದ ಕೇಂದ್ರೀಯ ಆರೋಗ್ಯ ಇಲಾಖೆಗೆ ಕ್ರಮಕೈಗೊಳ್ಳುವಂತೆ ಪತ್ರ

ಹಿಂದೂ ಜನಜಾಗೃತಿ ಸಮಿತಿಯ ಬಿಹಾರ ಮತ್ತು ಉತ್ತರಪ್ರದೇಶ ರಾಜ್ಯದ ಸಮನ್ವಯಕ ಶ್ರೀ. ವಿಶ್ವನಾಥ ಕುಲಕರ್ಣಿ ಇವರು ಉತ್ತರಪ್ರದೇಶ ರಾಜ್ಯದ ಕಾನೂನು ಮತ್ತು ನ್ಯಾಯ ಮಂತ್ರಿ ಬ್ರಜೇಶ ಪಾಠಕ ಇವರಿಗೆ, ಕಾನೂನುಬಾಹಿರವಾಗಿ ‘ಹಲಾಲ್’ ಪ್ರಮಾಣಪತ್ರ ತೆಗೆದುಕೊಳ್ಳಲು ಕಡ್ಡಾಯ ಗೊಳಿಸಲು ಪ್ರಯತ್ನಿಸಲಾಗುತ್ತದೆ’, ಎಂಬುದನ್ನು ಗಮನಕ್ಕೆ ತಂದು ಕೊಟ್ಟಿದ್ದರು.

ಸರಕಾರಿ ಕಾರ್ಯಾಲಯಗಳಲ್ಲಿನ ಗಣಕೀಕರಣ ವ್ಯವಸ್ಥೆ ಮೇಲಿಂದ ಮೇಲೆ ಸ್ಥಗಿತಗೊಳ್ಳುವುದರಿಂದ ಜನರಿಗಾಗುವ ತೊಂದರೆಗೆ ಯಾರು ಹೊಣೆ ?

ಜನರ ಕೆಲಸಗಳಲ್ಲಿ ಅಡಚಣೆಗಳನ್ನು ನಿರ್ಮಾಣ ಮಾಡುವ ಸರಕಾರಿ ನೌಕರರ ಮೇಲೆ ಏಕೆ ಕ್ರಮ ತೆಗೆದುಕೊಳ್ಳುವುದಿಲ್ಲ ?

ಶಬರಿಮಲೆ ದೇವಸ್ಥಾನದ ‘ಅರಾವಣಾ ಪಾಯಸಂ’ ಈ ಪ್ರಸಾದವನ್ನು ದೇವಸ್ಥಾನದ ಸಿಬ್ಬಂದಿಗಳೇ ತಯಾರಿಸುತ್ತಾರೆ ! – ಕೇರಳ ದೇವಸ್ವಂ ಮಂಡಳಿಯಿಂದ ಸ್ಪಷ್ಟೀಕರಣ

ಶಬರಿಮಲೆ ದೇವಸ್ಥಾನದಲ್ಲಿ ಸಿಗುವ ‘ಅರಾವಣಾ ಪಾಯಸಂ’ ಈ ಸಾಂಪ್ರದಾಯಿಕ ಸಿಹಿ ಪ್ರಸಾದವನ್ನು ದೇವಸ್ಥಾನದ ಸಿಬ್ಬಂದಿಗಳೇ ತಯಾರಿಸುತ್ತಾರೆ; ಕೇವಲ ಅಕ್ಕಿ ಮತ್ತು ಬೆಲ್ಲದ ಪೂರೈಕೆಯ ಗುತ್ತಿಗೆಗಳನ್ನು ಮಾತ್ರ ಹೊರಗೆ ನೀಡಲಾಗುತ್ತದೆ, ಎಂದು ಕೇರಳ ದೇವಸ್ವಂ ಬೋರ್ಡ್‌ನ ಕಾರ್ಯನಿರ್ವಾಹಕ ಅಧಿಕಾರಿ ಸ್ಪಷ್ಟಪಡಿಸಿದರು.

ಕರ್ಣಾವಾತಿ (ಗುಜರಾತ) ಇಲ್ಲಿಯ ಧಾರ್ಮಿಕ ಸ್ಥಳಗಳ ಬಳಿ ಮತ್ತು ಸಾರ್ವಜನಿಕ ರಸ್ತೆಗಳಲ್ಲಿ ಮಾಂಸಾಹಾರ ಮಾರಾಟಕ್ಕೆ ನಿಷೇಧ

ಧಾರ್ಮಿಕ ಸ್ಥಳಗಳ ಬಳಿ ಮತ್ತು ಸಾರ್ವಜನಿಕ ರಸ್ತೆಗಳಲ್ಲಿ ಮಾಂಸಾಹಾರ ಮಾರಾಟ ಮಾಡುವುದನ್ನು ಮಹಾನಗರ ಪಾಲಿಕೆಯು ನಿಷೇಧ ಹೇರಿದೆ. ಆದ್ದರಿಂದ ಇನ್ನು ಶಾಲೆಗಳು, ಮಹಾವಿದ್ಯಾಲಯಗಳು, ಸಭಾಗೃಹ, ದೇವಸ್ಥಾನಗಳು ಮುಂತಾದ ಸ್ಥಳಗಳಲ್ಲಿ ಮಾಂಸಾಹಾರವನ್ನು ಮಾರಾಟ ಮಾಡುವಂತಿಲ್ಲ.

ರಾಮಪುರದಲ್ಲಿ (ವಾರಣಾಸಿ) ಮೃತ ದೇಹಗಳನ್ನು ಹೂಳಲು ‘ನಟ್’ ಸಮುದಾಯದ ಜನರನ್ನು ಇಸ್ಲಾಂ ಸ್ವೀಕರಿಸುವಂತೆ ಷರತ್ತು !

ರಾಮಪುರದಲ್ಲಿ ಮೃತ ದೇಹಗಳನ್ನು ಹೂಳಲು ನಟ್ ಸಮುದಾಯದ ಜನರನ್ನು ಇಸ್ಲಾಂ ಸ್ವೀಕರಿಸುವಂತೆ ಷರತ್ತು ವಿಧಿಸಿರುವ ಘಟನೆ ನಡೆದಿದೆ. ರಾಮಪುರದ ನಟ್ ಸಮಾಜದ ಸುಶೀಲಾ ದೇವಿಯವರು ಮೃತಪಟ್ಟಿದ್ದರು. ಸತ್ತವರನ್ನು ಹೂಳುವುದು ಈ ಸಮಾಜದಲ್ಲಿ ರೂಢಿಯಲ್ಲಿದೆ.

ಚೀನಾ ಸರಕಾರದ ಆದೇಶದಿಂದ ಅಗತ್ಯ ವಸ್ತುಗಳ ಖರೀದಿಗೆ ಭಾರೀ ಜನದಟ್ಟಣೆ !

ಚೀನಾ ಸರಕಾರ ಕೊರೋನಾ ಸಂಭಾವ್ಯ ಅಪಾಯದ ಬಗ್ಗೆ ಹೇಳುತ್ತಾ ಕೆಲವು ದಿನಗಳ ಹಿಂದೆ ಚೀನಿ ನಾಗರಿಕರಿಗೆ ಅಗತ್ಯ ವಸ್ತುಗಳನ್ನು ಸಂಗ್ರಹಿಸಲು ಆದೇಶಿಸಿತ್ತು. ಅಂದಿನಿಂದ ಚೀನಾದಲ್ಲಿ ಹೆಚ್ಚಿನ ನಗರಗಳಲ್ಲಿನ ದೊಡ್ಡ ಮಾರುಕಟ್ಟೆಗಳಲ್ಲಿ ಜನರ ಸಾಲುಗಳು ಆರಂಭವಾಗಿವೆ.

ಧಾರ್ಮಿಕ ಪ್ರವಾಸೋದ್ಯಮವನ್ನು ಉತ್ತೇಜಿಸಲು `ಶ್ರೀ ರಾಮಾಯಣ ಯಾತ್ರೆ’ ವಿಶೇಷ ರೈಲು ಆರಂಭ !

ನವೆಂಬರ್ 7 ರಿಂದ ಈ ಯಾತ್ರೆಯನ್ನು ಆರಂಭಿಸಲಾಗಿದೆ. ಈ ಯಾತ್ರಾ ರೈಲುಬಂಡಿಯನ್ನು ದೆಹಲಿಯ ಸಫದರ್‍ಜಂಗ್ ರೈಲು ನಿಲ್ದಾಣದಿಂದ ಆರಂಭಿಸಲಾಯಿತು. ಇಲ್ಲಿಂದ ಈ ರೈಲು ಮಾರ್ಗವು ಭಗವಾನ ಶ್ರೀರಾಮನ ಜೀವನಕ್ಕೆ ಸಂಬಂಧಿಸಿದ ಎಲ್ಲಾ ಪ್ರಮುಖ ಸ್ಥಳಗಳಿಗೆ ಹೋಗಲಿದೆ.