ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯ ಆಧಾರದಲ್ಲಿ ಚಲನಚಿತ್ರ ನಿರ್ಮಾಣಕ್ಕಾಗಿ ಚಿತ್ರನಿರ್ಮಾಪಕರಿಗೆ ಸಹಾಯ ಮಾಡುವೆವು ! – ಅನುರಾಗ ಸಿಂಹ ಠಾಕೂರ, ಕೇಂದ್ರೀಯ ಮಾಹಿತಿ ಮತ್ತು ಪ್ರಸಾರಣ ಮಂತ್ರಿ

ಪಣಜಿ ೧ ಡಿಸೆಂಬರ್ (ವಾರ್ತಾ) – ಭಾರತೀಯ ಸಂಸ್ಕೃತಿ ಮತ್ತು ಪರಂಪರೆ ಈ ವಿಷಯ ಆಧಾರಿತ ಚಲನಚಿತ್ರ ನಿರ್ಮಾಣ ಮಾಡುವುದ್ದಕ್ಕಾಗಿ ‘ನ್ಯಾಶನಲ್ ಫಿಲ್ಮ್ ಡೆವಲಪ್.ಮೆಂಟ್ ಕಾರ್ಪೊರೇಷನ್ ಆಫ್ ಇಂಡಿಯಾ’ (ಎನ್.ಎಫ್,ಡಿ.ಸಿ.) ಮೂಲಕ ಚಲನಚಿತ್ರ ನಿರ್ಮಾಪಕರಿಗೆ ಸಹಾಯ ಮಾಡಲಾಗುವುದು. ಆದಕಾರಣ ಚಲನಚಿತ್ರ ನಿರ್ಮಾಪಕರಿಗೆ ಚಲನಚಿತ್ರ ನಿರ್ಮಿತಿಯ ಮೂಲಕ ಅಪೇಕ್ಷಿತ ಆದಾಯ ಸಂಗ್ರಹವಾಗುವುದೋ ಇಲ್ಲವೋ ಇದರ ಚಿಂತೆ ಇರುವುದಿಲ್ಲ. ಚಲನಚಿತ್ರದ ಮೂಲಕ ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯನ್ನು ಜಗತ್ತಿನಾದ್ಯಂತ ಕೊಂಡೊಯ್ಯುವ ಪ್ರಯತ್ನವಿರುವುದು, ಎಂಬ ಮಾಹಿತಿಯನ್ನು ಕೇಂದ್ರೀಯ ಮಾಹಿತಿ ಮತ್ತು ಪ್ರಸಾರಣ ಮಂತ್ರಿ ಅನುರಾಗ ಸಿಂಹ ಠಾಕೂರ ನೀಡಿದರು.

೫೩ ನೇ ಅಂತರಾಷ್ಟ್ರೀಯ ಚಲನಚಿತ್ರ ಮಹೋತ್ಸವದ ಅಂಗವಾಗಿ ಆಯೋಜಿಸಲಾದ ಒಂದು ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.

ಕೇಂದ್ರೀಯ ಮಾಹಿತಿ ಮತ್ತು ಪ್ರಸರಣ ಮಂತ್ರಿ ಅನುರಾಗ ಸಿಂಹ ಠಾಕೂರ ಮುಂದೆ ಮಾತನಾಡುತ್ತಾ, “ಭಾರತದಲ್ಲಿ ಅನೇಕ ಭಾಷೆಗಳಿವೆ ಮತ್ತು ಅದರ ಮೂಲಕ ನಾವು ಜಗತ್ತಿಗೆ ಆಕರ್ಷಕವಾಗುವಂತಹ ಅನೇಕ ವಿಷಯಗಳು ತೋರಿಸಬಹುದು”, ಎಂದರು.