ಶ್ರೀಪೆರುಂಬುದೂರ (ತಮಿಳುನಾಡು)ದಲ್ಲಿನ ಶ್ರೀ ಕನಕ ಕಾಲೀಶ್ವರ ದೇವಸ್ಥಾನವನ್ನು ಉರುಳಿಸಿದ ಸರಕಾರ !

ಸರಕಾರಿ ಭೂಮಿಯ ಮೇಲೆ ಕಟ್ಟಿರುವ ಬಗ್ಗೆ ಆರೋಪ

ಸರಕಾರಿ ಭೂಮಿಯ ಮೇಲೆ ಕಟ್ಟಲಾದ ಮಸೀದಿ ಮತ್ತು ಇತರ ಅತಿಕ್ರಮಣಗಳನ್ನು ಕೆಡವಿ ಹಾಕುವ ಧೈರ್ಯವನ್ನು ಸರಕಾರವು ಏಕೆ ತೋರಿಸುವುದಿಲ್ಲ ? ಹಿಂದೂಗಳು ಸಹಿಷ್ಣುಗಳಾಗಿರುವುದರಿಂದ ಅವರ ಮೇಲೆ ದಬ್ಬಾಳಿಕೆ ನಡೆಸುವ ನಾಸ್ತಿಕವಾದಿ ತಮಿಳುನಾಡು ಸರಕಾರವು ಹಿಂದೂದ್ವೇಷಿಯಾಗಿದೆ !- ಸಂಪಾದಕರು 

ಮೇಲಿನ ಚಿತ್ರ ಪ್ರಕಟಿಸುವುದರ ಉದ್ದೇಶ ಯಾರ ಭಾವನೆಗೆ ನೋವನುಂಟು ಮಾಡುವುದಾಗಿರದೆ, ಮಾಹಿತಿಯನ್ನು ನೀಡುವ ಉದ್ದೇಶದಿಂದ ಪ್ರಕಟಿಸಲಾಗಿದೆ – ಸಂಪಾದಕರು 

ಶ್ರೀಪೆರುಂಬುದೂರ (ತಮಿಳುನಾಡು) – ಇಲ್ಲಿನ ಶ್ರೀ ಕನಕ ಕಾಲೀಶ್ವರ ದೇವಸ್ಥಾನವನ್ನು ಸರಕಾರಿ ಭೂಮಿಯ ಮೇಲೆ ಅತಿಕ್ರಮಣ ಮಾಡಿ ಕಟ್ಟಲಾಗಿದೆ ಎಂದು ಆರೋಪಿಸಿ ಸರಕಾರವು ಈ ದೇವಸ್ಥಾನವನ್ನು ಕೆಡವಿದೆ. ‘ಸರಕಾರವು ನಮಗೆ ದೇವಸ್ಥಾನದಲ್ಲಿನ ಮೂರ್ತಿಯನ್ನು ಹೊರಗೆ ತೆಗೆಯಲೂ ಸಮಯ ನೀಡಿಲ್ಲ . ದೇವಸ್ಥಾನವನ್ನು ಕೆಡವಿ ಹಾಕುವ ಬಗ್ಗೆ ಯಾವುದೇ ನೋಟಿಸನ್ನು ಕೊಡದೆ ದೇವಸ್ಥಾನವನ್ನು ಕೆಡವಲಾಗಿದೆ. ಜೀರ್ಣೋದ್ಧಾರಕ್ಕಾಗಿ ಭಕ್ತರು ಜಿಲ್ಲಾಧಿಕಾರಿಗಳನ್ನು ಭೇಟಿಯಾಗಲು ಹೋದಾಗಲೇ ಆದಾಯ ಇಲಾಖೆಯ ಅಧಿಕಾರಿಗಳು ದೇವಸ್ಥಾನವನ್ನು ಕೆಡವಿದ್ದಾರೆ. ‘ಗರ್ಭಗೃಹವನ್ನು ಕೆಡಹುವುದಿಲ್ಲ’ ಎಂದು ಭಕ್ತರಿಗೆ ಭರವಸೆ ನೀಡಿ ಅಧಿಕಾರಗಳು ಗರ್ಭಗೃಹವನ್ನೂ ಕೆಡವಿದ್ದಾರೆ’ ಎಂದು ಭಕ್ತರು ಹೇಳಿದ್ದಾರೆ. ಆದುದರಿಂದ ಭಕ್ತರು ಇದರ ವಿರುದ್ಧ ನ್ಯಾಯಾಲಯಕ್ಕೆ ಹೋಗುವ ನಿರ್ಧಾರವನ್ನು ವ್ಯಕ್ತಪಡಿಸಿದ್ದಾರೆ. ‘ತಪೋವನಮ್ ಚಾರಿಟೇಬಲ್ ಟ್ರಸ್ಟ್’  ಈ ದೇವಸ್ಥಾನವನ್ನು ನಿರ್ವಹಿಸುತ್ತಿತ್ತು.

ಕ್ರೈಸ್ತ ಮಿಷನರಿಗಳೊಂದಿಗೆ ಸೇರಿ ಸಂಪೂರ್ಣ ದೇವಸ್ಥಾನವನ್ನು ಕೆಡವಲಾಗಿದೆ ! – ವಿಶ್ವಸ್ಥರು ಮತ್ತು ಭಕ್ತರ ಆರೋಪ

ಈ ದೇವಸ್ಥಾನದಲ್ಲಿನ ಗರ್ಭಗೃಹವನ್ನು ಕಾನೂನುಬದ್ಧವಾಗಿ ಸಂಪಾದಿಸಲಾದ ಶೇ. 15 ರಷ್ಟು ಭೂಮಿಯ ಮೇಲೆ ಕಟ್ಟಲಾಗಿತ್ತು, ಎಂದು ಹೇಳಲಾಗುತ್ತಿದೆ. ವಿಶ್ವಸ್ಥರು ಮತ್ತು ಭಕ್ತರು ‘ಈ ವಸ್ತುಸ್ಥಿತಿಯ ಬಗ್ಗೆ ನಿರ್ಲಕ್ಷ್ಯ ಮಾಡಲಾಗಿದೆ’ ಕೇವಲ ಬೇಲಿಯ ಗೋಡೆಯನ್ನು ಮತ್ತು ಅನ್ನದಾನದ ಸಭಾಗ್ರಹವನ್ನು ಕೆಡವಲಾಗುವುದು’ ಎಂಬ ಆಶ್ವಾಸನೆಯನ್ನು ನೀಡಿ ಅಧಿಕಾರಿಗಳು ಕ್ರೈಸ್ತ ಮಿಷನರಿಗಳೊಂದಿಗೆ ಸೇರಿ ಸಂಪೂರ್ಣ ದೇವಸ್ಥಾನವನ್ನೇ ಕೆಡವಿದ್ದಾರೆ’ ಎಂದು ಆರೋಪಿಸಿದ್ದಾರೆ. (ತಮಿಳುನಾಡು ಸರಕಾರವು ಈ ಗಂಭೀರ ಆರೋಪವನ್ನು ಗಣನೆಗೂ ತೆಗೆದುಕೊಳ್ಳುವುದಿಲ್ಲ. ಆದುದರಿಂದ ಈ ಬಗ್ಗೆ ಈಗ ಕೇಂದ್ರ ಸರಕಾರವೇ ತಪಾಸಣೆಯನ್ನು ನಡೆಸಿ ಸತ್ಯವನ್ನು ಜನರೆದುರು ತರಬೇಕಿದೆ ಮತ್ತು ಅಪರಾಧಿಗಳ ಮೇಲೆ ಕಾರ್ಯಾಚರಣೆ ಮಾಡಬೇಕಿದೆ ! – ಸಂಪಾದಕರು)

ದೇವಸ್ಥಾನದಿಂದ ಮತಾಂತರವನ್ನು ತಡೆಯುವ ಕಾರ್ಯವಾಗುತ್ತಿತ್ತು !

ಈ ದೇವಸ್ಥಾನ ಮತ್ತು ತಪೋವನಮ್ ಟ್ರಸ್ಟ್ ನಿಂದ ಈ ಭಾಗದಲ್ಲಿ ಮತಾಂತರವನ್ನು ತಡೆಯುವ ಕಾರ್ಯ ನಡೆಯುತ್ತಿತ್ತು. ಈಗ ಹಿಂದುತ್ವನಿಷ್ಠ ಸಂಘಟನೆಗಳು ಕಾನೂನುಬದ್ಧ ಮಾರ್ಗದಿಂದ ನ್ಯಾಯ ಪಡೆದು ದೇವಸ್ಥಾನದ ಜೀರ್ಣೋದ್ಧಾರ ಮಾಡುವ ಪ್ರತಿಜ್ಞೆ ಮಾಡಬೇಕು.

ದೇವಸ್ಥಾನಗಳ ಭೂಮಿಯ ಮೇಲೆ ದಬ್ಬಾಳಿಕೆ ನಡೆಸುವ ಸರಕಾರಕ್ಕೆ ಸರಕಾರಿ ಭೂಮಿಯ ಮೇಲಿರುವ ದೇವಸ್ಥಾನಗಳು ಏಕೆ ಬೇಕಾಗಿಲ್ಲ ? – ಭಾಜಪ

ಭಾಜಪದ ಕಾನೂನು ಶಾಖೆಯ ಸಚಿವ ಅಸ್ವಥಾಮನರವರು ಈ ಘಟನೆಯನ್ನು ನಿಷೇಧಿಸಿದ್ದಾರೆ. ಅವರು ಸರಕಾರಿ ಕಾರ್ಯಾಲಯಗಳು, ವಸತಿಗೃಹಗಳನ್ನು ದೇವಸ್ಥಾನಗಳ ಭೂಮಿಯ ಮೇಲೆ ದಬ್ಬಾಳಿಕೆ ಮಾಡುವ ಸರಕಾರಕ್ಕೆ ಸರಕಾರಿ ಭೂಮಿಯಲ್ಲಿರುವ ದೇವಸ್ಥಾನಗಳನ್ನು ಏಕೆ ಬೇಡ?’ ಎಂಬ ಪ್ರಶ್ನೆಯನ್ನು ಕೇಳಿದ್ದಾರೆ. ಅವರು ಮುಂದುವರೆದು ದೇವಸ್ಥಾನಗಳ ಹಣವನ್ನು ಶಾಲೆ ಮತ್ತು ಮಹಾವಿದ್ಯಾಲಯಗಳನ್ನು ನಡೆಸಲು ಬಳಸಲಾಗುತ್ತದೆ, ಇಲ್ಲಿ ಹಿಂದೂಗಳು ಕೆಲಸ ಮಾಡುತ್ತಾರೆ, ಹೀಗಿರುವಾಗ ಸರಕಾರವು ತನ್ನ ಖಜಾನೆ ಮತ್ತು ಸಂಪತ್ತನ್ನು ಹಿಂದೂಗಳಿಗಾಗಿ ಏಕೆ ಬಳಸಬಾರದು? ನ್ಯಾಯಾಲಯವು ಆಕ್ಷೇಪಿಸಿದ ನಂತರವೂ ದೇವಸ್ಥಾನಗಳ ಭೂಮಿಯ ಮೇಲೆ ಜಿಲ್ಲಾಧಿಕಾರಿಗಳ ಕಾರ್ಯಾಲಯ ಮತ್ತು ಪೊಲೀಸ್ ವಸತಿ ಗೃಹ ಕಟ್ಟಲಾಗುತ್ತಿರುವಾಗ ಸರಕಾರಿ ಭೂಮಿಯ ಮೇಲೆ ದೇವಸ್ಥಾನಗಳನ್ನು ಏಕೆ ಕಟ್ಟಬಾರದು ?’ ಎಂದು ಹೇಳಿದರು