ಭಾಜಪದ ಪದಾಧಿಕಾರಿಯ ಹತ್ಯೆಯ ಪ್ರಕರಣದಲ್ಲಿ ಇಲ್ಲಿಯವರೆಗೆ ಯಾರನ್ನೂ ಬಂಧಿಸಿಲ್ಲ !
|
ಅಲಪ್ಪುಝಾ (ಕೇರಳ) – ಇಲ್ಲಿ ಡಿಸೆಂಬರ್ ೧೮ ರಂದು ರಾತ್ರಿ ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್. ಡಿ. ಪಿ. ಐ.)ದ ರಾಜ್ಯ ಸಚಿವರಾದ ಕೆ.ಎಸ್. ಶಾನರವರ ಹತ್ಯೆಯ ಪ್ರಕರಣದಲ್ಲಿ ಕೇರಳ ಪೊಲೀಸರು ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಸಾದ ಮತ್ತು ರಥೀಶ ಎಂಬ ಇಬ್ಬರು ಸ್ವಯಂಸೇವಕರನ್ನು ಬಂಧಿಸಿದ್ದಾರೆ. ’ಇವರು ಮನ್ನನಚೇರಿ ಎಂಬ ಊರಿನಲ್ಲಿ ವಾಸಿಸುತ್ತಿದ್ದು ಹತ್ಯೆಯ ಹಿಂದೆ ಅವರ ಕೈವಾಡವಿತ್ತು ಮತ್ತು ಅವರು ಈ ಹತ್ಯೆಗಾಗಿ ವಾಹನದ ವ್ಯವಸ್ಥೆ ಮಾಡಿದ್ದರು’ ಎಂದು ಪೊಲೀಸರು ಆರೋಪಿಸಿದ್ದಾರೆ.
Kerala: Two RSS workers arrested in connection with murder of SDPI leader in Alappuzha https://t.co/EilTfPWGZD
— Republic (@republic) December 20, 2021
ಈ ಪ್ರಕರಣದಲ್ಲಿ ಪೊಲೀಸರು ಇನ್ನೂ ೮ ಜನರನ್ನು ಹುಡುಕುತ್ತಿದ್ದಾರೆ.
Kerala: BJP leader Ranjith Sreenivas hacked to death hours after SDPI leader was killed, had contested 2016 elections https://t.co/8s1lcOpVXu
— OpIndia.com (@OpIndia_com) December 19, 2021
ಶಾನರವರ ಹತ್ಯೆಯ ಸೇಡು ಎಂದು ಡಿಸೆಂಬರ್ ೧೯ರಂದು ಭಾಜಪದ ಓಬಿಸಿ ಮೋರ್ಚಾದ ರಾಜ್ಯ ಸಚಿವರಾದ ರಂಜಿತ ಶ್ರೀನಿವಾಸರವರನ್ನು ಹತ್ಯೆ ಮಾಡಿದ ಪ್ರಕರಣದಲ್ಲಿ ಪೊಲೀಸರು ಆರೋಪಿಗಳನ್ನು ಇಲ್ಲಿಯವರೆಗೂ ಬಂಧಿಸಿಲ್ಲ. (ಮಾಕಪದ ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಗಾಳಿಗೆ ತೂರಿರುವುದರಿಂದ ಈ ರೀತಿಯಲ್ಲಿ ಹತ್ಯೆಗಳು ನಡೆಯುತ್ತಿವೆ. ಇದನ್ನು ನೋಡಿ ಈ ಸರಕಾರವನ್ನು ವಿಸರ್ಜಿಸಿ ಅಲ್ಲಿ ರಾಷ್ಟ್ರಪತಿ ಆಡಳಿತವನ್ನು ಜಾರಿಗೊಳಿಸಬೇಕು ! – ಸಂಪಾದಕರು)