ಕೇಂದ್ರ ಸರಕಾರದ ‘ಬೇಟಿ ಬಚಾವೋ-ಬೇಟಿ ಪಢಾವೋ’ ಯೋಜನಗಾಗಿ ಶೇ. ೭೯ ರಷ್ಟು ಹಣ ಕೇವಲ ಜಾಹೀರಾತಿಗಾಗಿ ವಿನಿಯೋಗ ! – ಸಂಸದೀಯ ಸಮಿತಿಯ ವರದಿಯಲ್ಲಿ ಮಾಹಿತಿ

ಸರಕಾರವು ಈಗ ಯಾವ ಯೋಜನೆಯ ವಿಷಯಗಳ ಜಾಗೃತಿಗಾಗಿ ಜಾಹೀರಾತಿನ ಮೇಲೆ ಎಷ್ಟು ಖರ್ಚು ಮಾಡಬೇಕು, ಎಂಬುದನ್ನು ನಿರ್ಧರಿಸುವ ಅವಶ್ಯಕತೆ ಇದೆ ! ಇಲ್ಲದಿದ್ದರೆ ಇಂತಹ ಯೋಜನೆಯ ಮೂಲ ಉದ್ದೇಶ ಹಿಂದುಳಿಯುತ್ತದೆ !

ನವ ದೆಹಲಿ – ‘ಬೇಟಿ ಬಚಾವೋ ಬೇಟಿ ಪಢಾವೋ’ ಯೋಜನೆಗಾಗಿ ಖರ್ಚು ಮಾಡಿರುವ ೪೪೬ ಕೋಟಿ ೭೨ ಲಕ್ಷ ರೂಪಾಯಿಗಳ ಪೈಕಿ ಶೇ. ೭೮.೧೧ ರಷ್ಟು ಹಣ ಜಾಹೀರಾತಿಗಾಗಿ ಖರ್ಚು ಮಾಡಿರುವುದು ಬೆಳಕಿಗೆ ಬಂದಿದೆ. ‘ಬೇಟಿ ಬಚಾವ್ ಬೇಟಿ ಪಢಾವೋ’ ಈ ಸಂದೇಶ ಜನರವರೆಗೂ ಮುಟ್ಟಿಸಲು ಮಾಧ್ಯಮಗಳಲ್ಲಿ ಅಭಿಯಾನ ನಡೆಸುವ ಸಮಿತಿಗೆ ಇದು ಅವಶ್ಯಕವಾಗಿದೆ ಎನಿಸುತ್ತದೆ’, ಎಂದು ಸಂಸದೀಯ ಸಮಿತಿಯ ವರದಿಯಲ್ಲಿ ಹೇಳಲಾಗಿದೆ. ಈ ವರದಿ ಸಂಸತ್ತಿನಲ್ಲಿ ಪ್ರಸ್ತುತಪಡಿಸಲಾಗಿದೆ.

೨೦೧೬-೧೭ ರಲ್ಲಿ ಈ ಯೋಜನೆಯಡಿ ತುಂಬಾ ಕಡಿಮೆ ಖರ್ಚು ಮಾಡಲಾಗಿತ್ತು ಎಂದು ಲೆಕ್ಕ ಪರಿಶೋಧಕರು (ಕ್ಯಾಗ) ಹೇಳಿದ್ದಾರೆ. ೨೦೧೪-೧೫ ಮತ್ತು ೨೦೧೯-೨೦ ರ ಕಾಲಾವಧಿಯಲ್ಲಿ ರಾಜ್ಯಗಳು ಕೇವಲ ೧೫೬ ಕೋಟಿ ೪೬ ಲಕ್ಷ ರೂಪಾಯಿಯ ಉಪಯೋಗ ಮಾಡಿದೆ. ಈ ಕಾಲಾವಧಿಯಲ್ಲಿ ಕೇಂದ್ರ ಸರಕಾರವು ರಾಜ್ಯಗಳಿಗೆ ೬೫೨ ಕೋಟಿ ರೂಪಾಯಿ ನೀಡಿತ್ತು; ಆದರೆ ರಾಜ್ಯಗಳು ಕೇವಲ ಶೇ. ೨೫.೧೩ ರಷ್ಟು ಹಣ ಉಪಯೋಗಿಸಿದೆ, ಎಂದು ‘ಕ್ಯಾಗ್’ ಹೇಳಿದೆ.