ಪಾಕಿಸ್ತಾನದಿಂದ ಭಾರತಕ್ಕೆ ಬಂದ ಹಿಂದೂ ನಿರಾಶ್ರಿತರಿಗೆ ೧೦ ವರ್ಷಗಳ ನಂತರ ವಿದ್ಯುತ್ ಪೂರೈಕೆ

ಪಾಕಿಸ್ತಾನದಲ್ಲಿ ಮಾತ್ರವಲ್ಲದೆ, ಇತರ ಇಸ್ಲಾಮಿಕ್ ದೇಶಗಳಲ್ಲಿಯೂ ಪೀಡಿತ ಹಿಂದೂಗಳು ಭಾರತವನ್ನು ಅಪೇಕ್ಷೆಯಿಂದ ನೋಡುತ್ತಾರೆ. ಆದರೆ ಅವರು ಭಾರತಕ್ಕೆ ಬಂದಾಗ ಈ ರೀತಿಯ ಅಸಹನೀಯ ಸ್ಥಿತಿಯಲ್ಲಿ ಬದುಕಬೇಕಾದಾಗ, ಅವರಿಗೆ ಭಾರತಕ್ಕೆ ಬಂದು ಏನು ಪ್ರಯೋಜನ ? ಭಾರತ ಸರಕಾರ ಇದನ್ನು ಗಂಭೀರವಾಗಿ ಪರಿಗಣಿಸಬೇಕಾಗಿದೆ !

ನ್ಯೂಝಿಲ್ಯಾಂಡ್‌ನಲ್ಲಿ ಜನವರಿ ೧, ೨೦೦೯ರ ನಂತರ ಜನಿಸಿದವರಿಗೆ ಸಿಗರೇಟು ಖರೀದಿಯ ಮೇಲೆ ನಿರ್ಬಂಧ

ನ್ಯೂಝಿಲ್ಯಾಂಡ ಸರಕಾರವು ಹುಡುಗ-ಹುಡುಗಿಯರ ಮೇಲೆ ಆಯುಷ್ಯಪೂರ್ತಿ ಸಿಗರೇಟು ಖರೀದಿಗೆ ನಿರ್ಬಂಧ ಹೇರಿದೆ. ೨೦೨೫ರ ವರೆಗೆ ದೇಶದಲ್ಲಿನ ಶೇ. ೫ರಷ್ಟು ಜನರನ್ನು ತಂಬಾಖು ಮುಕ್ತಗೊಳಿಸುವ ಗುರಿಯನ್ನು ಇಟ್ಟುಕೊಳ್ಳಲಾಗಿದೆ.

ಕಾಡಿನಲ್ಲಿ ಅಕ್ರಮವಾಗಿ ಕಟ್ಟಿರುವ ಮುಸಲ್ಮಾನರ ೧೫ ಗೋರಿಗಳ ಮೇಲೆ ಅರಣ್ಯ ಇಲಾಖೆಯಿಂದ ಕ್ರಮ

ಉತ್ತರಾಖಂಡದಲ್ಲಿ 2 ಸಾವಿರಕ್ಕಿಂತಲೂ ಹೆಚ್ಚು ಅಕ್ರಮ ಗೋರಿ ಇರುವ ಸಾಧ್ಯತೆ

ಬಿಹಾರದಲ್ಲಿ ಮತ್ತೊಮ್ಮೆ ವಿಷಯುಕ್ತ ಸಾರಾಯಿ ಸೇವಿಸಿ ೧೨ ಜನರ ಮರಣ

ಜನತಾದಳ (ಸಂಯುಕ್ತ) ಮತ್ತು ರಾಷ್ಟ್ರೀಯ ಜನತಾದಳ ಇವರ ರಾಜ್ಯದಲ್ಲಿ ಹೆಸರಿಗಷ್ಟೇ ಸಾರಾಯಿ ನಿಷೇಧ ಇದೆಯೆನ್ನುವುದು ಮತ್ತೊಮ್ಮೆ ಸಾಬೀತಾಗಿದೆ.

ವಿಚ್ಛೇದನಕ್ಕಾಗಿ ವರ್ಷವಿಡೀ ಕಾಯುವ ನಿಯಮ ಸಂವಿಧಾನ ಬಾಹಿರವಾಗಿದ್ದು ಅದನ್ನು ರದ್ದುಪಡಿಸಬೇಕು !

ಕೇರಳ ಉಚ್ಚ ನ್ಯಾಯಾಲಯದಿಂದ ಕೇಂದ್ರ ಸರಕಾರಕ್ಕೆ ಸೂಚನೆ

ಹಿಂದೂಗಳು ಸಂಘಟಿತರಾದಲ್ಲಿ ತಿರುಪತಿ ಸೇರಿದಂತೆ ಹಲವು ದೇವಾಲಯಗಳು ಸರಕಾರಿಕರಣದಿಂದ ಮುಕ್ತವಾಗುವವು ! – ಶ್ರೀ. ಬಿ.ಕೆ.ಎಸ್.ಆರ್. ಅಯ್ಯಂಗಾರ್

ಸರಕಾರದ ನಿಯಂತ್ರಣದಲ್ಲಿರುವ ದೇವಾಲಯ ಸಮಿತಿಯು ಹಿಂದೂಗಳ ಧಾರ್ಮಿಕ ಭಾವನೆಗಳಿಗೂ ಯಾವುದೇ ಸಂಬಂಧವಿಲ್ಲದಂತಿದೆ. ಹಿಂದೂಗಳು ತಮ್ಮ ಆತ್ಮವಿಶ್ವಾಸ ಕಳೆದುಕೊಳ್ಳದೆ ತಮ್ಮ ಧರ್ಮಬಾಂಧವರಲ್ಲಿಯೂ ಜಾಗೃತಿ ಮೂಡಿಸಬೇಕು.

ಕರ್ನಾಟಕದಲ್ಲಿ ದೇವಸ್ಥಾನದಲ್ಲಿ `ಸಲಾಂ ಆರತಿ’ ಈಗ `ಸಂಧ್ಯಾ ಆರತಿ’ ಎಂದು ಹೇಳಲಾಗುವುದು !

ಇಲ್ಲಿಯ ಐತಿಹಾಸಿಕ ಚೆಲುವ ನಾರಾಯಣ ಸ್ವಾಮಿ ದೇವಸ್ಥಾನದ ಸಹಿತ ಅನೇಕ ದೇವಸ್ಥಾನದಲ್ಲಿ ಟಿಪ್ಪು ಸುಲ್ತಾನ ಕಾಲದಿಂದ ಸಂಜೆ ನಡೆಯುವ ಆರತಿಗೆ `ಸಲಾಂ ಆರತಿ’ ಎನ್ನಲಾಗುತ್ತಿತ್ತು. ಈ ಆರತಿಯ ಹೆಸರು ಬದಲಾಯಿಸಲು ಹಿಂದುತ್ವನಿಷ್ಠ ಸಂಘಟನೆಗಳಿಂದ ಒತ್ತಾಯದ ನಂತರ ಅದನ್ನು `ಸಂಧ್ಯಾ ಆರತಿ’ ಎಂದು ಹೇಳಲಾಗುವುದು.

`ಲವ್ ಜಿಹಾದ್’ ತಡೆಗಟ್ಟಲು ವಿಶೇಷ ಪೊಲೀಸ ಪಡೆ ರಚಿಸುವ ಬಗ್ಗೆ ವಿಚಾರ ಮಾಡೋಣ !

ಹಿಂದೂ ಯುವತಿಯರು ಮತ್ತು ಮಹಿಳೆಯರು ನಾಪತ್ತೆಯಾಗುವ ಘಟನೆಗಳನ್ನು ಗಂಭೀರವಾಗಿ ಪರಿಗಣಿಸಿ ತನಿಖೆಗೆ ವೇಗ ನೀಡುವ ಬಗ್ಗೆ ಸೂಚಿಸುವೆ. ಹಾಗೆಯೇ `ಲವ್ ಜಿಹಾದ್’ ತಡೆಗಟ್ಟಲು ವಿಶೇಷ ಪೊಲೀಸ್ ಪಡೆಯನ್ನು ರಚಿಸುವ ಬಗ್ಗೆ ಸರಕಾರದ ಮಟ್ಟದಲ್ಲಿ ಚರ್ಚೆಗೆ ಪರಿಶೀಲಿಸುವುದಾಗಿ ಗೃಹಸಚಿವ ಅರಗ ಜ್ಞಾನೇಂದ್ರ ಇವರು ಭರವಸೆ ನೀಡಿದರು.

ಗುಜರಾತಿನಲ್ಲಿ ರಾಮರಾಜ್ಯದಂತಹ ಆದರ್ಶ ನಿರ್ಮಾಣ ಮಾಡಲು ಭಾಜಪ ಸರಕಾರಕ್ಕೆ ಶುಭಾಶಯಗಳು !- ಹಿಂದೂ ಜನಜಾಗೃತಿ ಸಮಿತಿ

ಗುಜರಾತ ಇದು ದೇಶದಲ್ಲಿನ ಹಿಂದುತ್ವದ ಪ್ರಯೋಗಶಾಲೆಯಾಗಿದೆ ಎಂದು ಹೇಳಲಾಗುತ್ತದೆ. ಈಗ ಮುಂಬರುವ ರಾಮರಾಜ್ಯದ ಒಂದು ಆದರ್ಶ ಉದಾಹರಣೆ ಎಂದು ಇದು ಪ್ರಚಲಿತವಾಗಬೇಕು, ಅದಕ್ಕಾಗಿ ಹಿಂದೂ ಜನಜಾಗ್ರತಿ ಸಮಿತಿಯಿಂದ ಶುಭಾಶಯಗಳು ನೀಡಲಾಗುತ್ತಿದೆ