ಹಿಂದೂ ಸಂಘಟನೆಗಳ ನಿಯೋಗಕ್ಕೆ ಗೃಹಸಚಿವರ ಭರವಸೆ !
ಬೆಂಗಳೂರು – ಹಿಂದೂ ಯುವತಿಯರು ಮತ್ತು ಮಹಿಳೆಯರು ನಾಪತ್ತೆಯಾಗುವ ಘಟನೆಗಳನ್ನು ಗಂಭೀರವಾಗಿ ಪರಿಗಣಿಸಿ ತನಿಖೆಗೆ ವೇಗ ನೀಡುವ ಬಗ್ಗೆ ಸೂಚಿಸುವೆ. ಹಾಗೆಯೇ `ಲವ್ ಜಿಹಾದ್’ ತಡೆಗಟ್ಟಲು ವಿಶೇಷ ಪೊಲೀಸ್ ಪಡೆಯನ್ನು ರಚಿಸುವ ಬಗ್ಗೆ ಸರಕಾರದ ಮಟ್ಟದಲ್ಲಿ ಚರ್ಚೆಗೆ ಪರಿಶೀಲಿಸುವುದಾಗಿ ಗೃಹಸಚಿವ ಅರಗ ಜ್ಞಾನೇಂದ್ರ ಇವರು ಭರವಸೆ ನೀಡಿದರು. ಹಿಂದೂ ಸಂಘಟನೆಗಳ ನಿಯೋಗವು ಗೃಹಸಚಿವರನ್ನು ಅವರ ಅಧಿಕೃತ ನಿವಾಸದಲ್ಲಿ ಭೇಟಿಯಾದಾಗ ಅವರು ಈ ಭರವಸೆಯನ್ನು ನೀಡಿದರು. ನಿಯೋಗವು ಗೃಹಸಚಿವರಿಗೆ ಮನವಿಯನ್ನೂ ಸಲ್ಲಿಸಿತು. `ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಿ ಸಮಾಜಘಾತಕ ಶಕ್ತಿಗಳನ್ನು ಮಟ್ಟ ಹಾಕಲು ಸರಕಾರವು ಕಟಿಬದ್ಧವಾಗಿ ಕೆಲಸ ಮಾಡುವುದು ಎಂದೂ ಗೃಹಸಚಿವ ಜ್ಞಾನೇಂದ್ರ ಇವರು ಸ್ಪಷ್ಟಪಡಿಸಿದರು.
ನಿಯೋಗದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ರಾಜ್ಯಮಟ್ಟದ ವಕ್ತಾರರಾದ ಶ್ರೀ. ಮೋಹನ ಗೌಡ, ರಣರಾಗಿಣಿ ಶಾಖೆಯ ಸೌ. ಭವ್ಯಾ ಗೌಡ, ದುರ್ಗಾ ಸೇನೆಯ ನಂದಿನಿ ನಾಗರಾಜ, ಶ್ರೀರಾಮ ಸೇನೆಯ ಶ್ರೀ. ಸುಂದರೇಶ ಮತ್ತು ಶ್ರೀ. ಅಮರನಾಥ ಇದ್ದರು.
`ರಾಜ್ಯದಲ್ಲಿ ಮತಾಂತರ ನಿಷೇಧ ಕಾನೂನು ಜಾರಿಯಲ್ಲಿದ್ದರೂ ಲವ್ ಜಹಾದ್ ಅವ್ಯಾಹತವಾಗಿ ನಡೆಯುತ್ತಿದೆ. ಉತ್ತರಪ್ರದೇಶದ ಮಾದರಿಯಲ್ಲಿ ವಿಶೇಷ `ಲವ್ ಜಿಹಾದ್ ವಿರೋಧಿ ಪಡೆ’ ರಚಿಸಬೇಕು. ರಾಷ್ಟಿçÃಯ ತನಿಖಾ ದಳದ ವರದಿಗನುಸಾರ ಶಾಹೀನ ಗ್ಯಾಂಗ್ ರಾಜ್ಯದ ೫ ಜಿಲ್ಲೆಗಳಲ್ಲಿ ಸಕ್ರಿಯರಾಗಿದ್ದು ಕೆಲವು ಮೌಲ್ವಿ ಮತ್ತು ಮದರಸಾಗಳು ಲವ್ ಜಿಹಾದ್‌ಅನ್ನು ಸಮರ್ಥಿಸುತ್ತಿವೆ. ಅವರ ಮೇಲೆ ಕ್ರಮ ಕೈಗೊಳ್ಳಬೇಕು’ ಎಂದು ಸಂಘಟನೆಯು ನೀಡಿದ ಮನವಿಯಲ್ಲಿ ತಿಳಿಸಿವೆ.