ಕಾಡಿನಲ್ಲಿ ಅಕ್ರಮವಾಗಿ ಕಟ್ಟಿರುವ ಮುಸಲ್ಮಾನರ ೧೫ ಗೋರಿಗಳ ಮೇಲೆ ಅರಣ್ಯ ಇಲಾಖೆಯಿಂದ ಕ್ರಮ

ಉತ್ತರಾಖಂಡದಲ್ಲಿ 2 ಸಾವಿರಕ್ಕಿಂತಲೂ ಹೆಚ್ಚು ಅಕ್ರಮ ಗೋರಿ ಇರುವ ಸಾಧ್ಯತೆ

ಡೆಹ್ರಾಡೂನ್ (ಉತ್ತರಾಖಾಂಡ) – ಉತ್ತರಾಖಂಡದಲ್ಲಿನ ಡೆಹ್ರಾಡೂನ್ ಮತ್ತು ಪೌಢಿ ಜಿಲ್ಲೆಯಲ್ಲಿನ ಕಾಡಿನಲ್ಲಿ ಅಕ್ರಮವಾಗಿ ಕಟ್ಟಲಾದ ಮುಸಲ್ಮಾನರ ಗೋರಿಗಳಲ್ಲಿ ೧೫ ಗೋರಿಗಳನ್ನು ಅರಣ್ಯ ಇಲಾಖೆಯಿಂದ ತೆರವುಗೊಳಿಸಲಾಗಿದೆ. ೨ ಗೋರಿಗಳ ದಾಖಲೆ ಇರುವುದರಿಂದ ಅವುಗಳ ಮೇಲೆ ಕ್ರಮ ಕೈಗೊಳ್ಳಲಾಗಿಲ್ಲ. ಪೌಢಿಯಲ್ಲಿ ಕಟ್ಟಲಾಗಿರುವ ಒಂದು ಮಕಬರ ಕೂಡ (ಗೋರಿಯ ಮೇಲೆ ಕಟ್ಟಲಾಗಿರುವ ಕಟ್ಟಡ) ತೆರವುಗೊಳಿಸಲಾಗಿದೆ. ಈ ಮಕಬರನ ಸ್ಥಳದಲ್ಲಿ ಛಾವಣಿ ಕಟ್ಟುವುದಕ್ಕಾಗಿ ಒಂದು ಸ್ಥಳೀಯ ಶಾಸಕನಿಂದ ಅವನ ಶಾಸಕ ನಿಧಿಯಿಂದ ೨ ಲಕ್ಷ ರೂಪಾಯ ಬಿಡುಗಡೆ ಮಾಡಲಾಗಿತ್ತು, ಎಂಬ ಮಾಹಿತಿ ಬಹಿರಂಗವಾಗಿದೆ.

೧. ಕೆಲವು ದಿನಗಳ ಹಿಂದೆ ದೆಹಲಿಯಲ್ಲಿನ ಒಂದು ಕಾರ್ಯಕ್ರಮದಲ್ಲಿ ಉತ್ತರಾಖಂಡನ ಮುಖ್ಯಮಂತ್ರಿ ಪುಷ್ಕರ ಸಿಂಹ ದಾಮಿ ಇವರು ಅಕ್ರಮವಾಗಿ ಕಟ್ಟಲಾದ ಗೊರಿಯ ಬಗ್ಗೆ ಹೇಳಿಕೆ ನೀಡಿದ್ದರು.

೨. ರಾಜ್ಯದಲ್ಲಿನ ಸ್ವಾಮಿ ದರ್ಶನ ಭಾರತಿ ಇವರು, ೩೭ ವರ್ಷಗಳ ಹಿಂದೆ ರಾಜ್ಯದಲ್ಲಿ ಒಂದೇ ಒಂದು ಮಸೀದಿ ಇರಲಿಲ್ಲ. ರಾಜ್ಯದಲ್ಲಿ ೨ ಸಾವಿರಗಿಂತಲೂ ಹೆಚ್ಚಿನ ಗೋರಿಗಳಿರುವ ಸಾಧ್ಯತೆ ಇದೆ ಎಂದು ಹೇಳಿದರು.