ಹಿಂದೂಗಳು ಸಂಘಟಿತರಾದಲ್ಲಿ ತಿರುಪತಿ ಸೇರಿದಂತೆ ಹಲವು ದೇವಾಲಯಗಳು ಸರಕಾರಿಕರಣದಿಂದ ಮುಕ್ತವಾಗುವವು ! – ಶ್ರೀ. ಬಿ.ಕೆ.ಎಸ್.ಆರ್. ಅಯ್ಯಂಗಾರ್

‘ತಿರುಪತಿ ದೇವಸ್ಥಾನದಲ್ಲಿ ಭ್ರಷ್ಟಾಚಾರ ಮತ್ತು ಅಕ್ರಮ ಚರ್ಚ್ ನಿರ್ಮಾಣ ತಡೆಯುವುದು ಹೇಗೆ?’ ಕುರಿತು ವಿಶೇಷ ಸಂವಾದ !

ತಿರುಪತಿ ದೇವಸ್ಥಾನವು ಸರಕಾರದ ನಿಯಂತ್ರಣಕ್ಕೆ ಬಂದಾಗಿನಿಂದ ಸರಕಾರಕ್ಕಾಗಿ ಕೆಲಸ ಮಾಡುತ್ತಿದೆ ಮತ್ತು ಈಗಲೂ ಅದನ್ನೇ ಮಾಡುತ್ತಿದೆ. ಇಲ್ಲಿನ ಐತಿಹಾಸಿಕ, ಧಾರ್ಮಿಕ ಮಹತ್ವವಿರುವ ತಿರುಪತಿ ದೇವಸ್ಥಾನದ ಬಳಿಯ ಕಟ್ಟಡ ಕಾಮಗಾರಿಗಳನ್ನು ಕೆಡವಲಾಯಿತು. ಇಲ್ಲಿನ ಧಾರ್ಮಿಕ ಸಂಪ್ರದಾಯವನ್ನು ನಿಲ್ಲಿಸಲು ಪ್ರಯತ್ನಿಸಿದರು. ಸರಕಾರದ ನಿಯಂತ್ರಣದಲ್ಲಿರುವ ದೇವಾಲಯ ಸಮಿತಿಯು ಹಿಂದೂಗಳ ಧಾರ್ಮಿಕ ಭಾವನೆಗಳಿಗೂ ಯಾವುದೇ ಸಂಬಂಧವಿಲ್ಲದಂತಿದೆ. ಹಿಂದೂಗಳು ತಮ್ಮ ಆತ್ಮವಿಶ್ವಾಸ ಕಳೆದುಕೊಳ್ಳದೆ ತಮ್ಮ ಧರ್ಮಬಾಂಧವರಲ್ಲಿಯೂ ಜಾಗೃತಿ ಮೂಡಿಸಬೇಕು. ಹಿಂದೂಗಳ ದೇವಾಲಯಗಳನ್ನು ಸ್ವಾಧೀನಕ್ಕೆ ಸಂಬಂಧಿಸಿದಂತೆ ವಿವಿಧ ನ್ಯಾಯಾಲಯಗಳು ಹಿಂದೂಗಳ ಪರವಾಗಿ ನೀಡಿರುವ ತೀರ್ಪುಗಳನ್ನು ಹಿಂದೂಗಳು ಅಧ್ಯಯನ ಮಾಡಬೇಕು. ಹಿಂದೂಗಳು ಸಂಘಟಿತರಾದರೆ ತಿರುಪತಿ ಸಹಿತ ಅನೇಕ ದೇವಸ್ಥಾನಗಳು ಸರಕಾರಿಕರಣದಿಂದ ಮುಕ್ತವಾಗಬಹುದು, ಎಂದು ಪತ್ರಕರ್ತ, ಸಾಮಾಜಿಕ ಕಾರ್ಯಕರ್ತ ಹಾಗೂ ಮಾಹಿತಿ ಹಕ್ಕು ಕಾರ್ಯಕರ್ತ ಶ್ರೀ. ಬಿ.ಕೆ.ಎಸ್.ಆರ್. ಅಯ್ಯಂಗಾರ್ ಇವರು ಪ್ರತಿಪಾದಿಸಿದರು. ಹಿಂದೂ ಜನಜಾಗೃತಿ ಸಮಿತಿ ಆಯೋಜಿಸಿದ್ದ ‘ತಿರುಪತಿ ದೇವಸ್ಥಾನದಲ್ಲಿ ಭ್ರಷ್ಟಾಚಾರ ಮತ್ತು ಅಕ್ರಮ ಚರ್ಚ್‌ಗಳ ನಿರ್ಮಾಣ ತಡೆಯುವುದು ಹೇಗೆ?’ ಎಂಬ ವಿಷಯದ ಕುರಿತು ಆಯೋಜಿಸಿದ್ದ ‘ಆನ್‌ಲೈನ್’ ವಿಶೇಷ ಸಂವಾದದಲ್ಲಿ ಅವರು ಮಾತನಾಡುತ್ತಿದ್ದರು.

ತೆಲಂಗಾಣದ ‘ಕ್ರಿಶ್ಚಿಯನ್ ಸ್ಟಡೀಸ್’ನ ಅಭ್ಯಾಸಕ ಇಸ್ಟರ್ ಧನರಾಜ್ ಇವರು ಮಾತನಾಡುತ್ತಾ, ತಿರುಪತಿ ದೇವಸ್ಥಾನದಲ್ಲಿ ಕ್ರೈಸ್ತ ಪಂಥದವರು ಅವ್ಯವಹಾರ ನಡೆಸುತ್ತಿದ್ದಾರೆ. ಅವರನ್ನು ಹೊರಹಾಕಬೇಕು. ವ್ಯವಸ್ಥಿತವಾಗಿ ಹಿಂದೂ ದೇಗುಲಗಳಿಗೆ ನುಗ್ಗಿ ಹಿಂದೂ ದೇಗುಲಗಳನ್ನು ಹಾಳು ಮಾಡುತ್ತಿದ್ದಾರೆ. ಇದೆಲ್ಲವನ್ನು ನಿಲ್ಲಿಸಲು ಹಿಂದೂಗಳು ಜಾಗೃತರಾಗಿದ್ದು ಅವರ ಮೇಲೆ ನಿಗಾ ಇಡಲು ಸಮಿತಿ ರಚಿಸಬೇಕು. ಇದಕ್ಕಾಗಿ ಕಾನೂನುಗಳನ್ನು ಅತ್ಯಂತ ಕಟ್ಟುನಿಟ್ಟಾಗಿ ಮಾಡಬೇಕಾಗಿದೆ ಮತ್ತು ಸಂವಿಧಾನದ ಕೆಲವು ಕಲಂಗಳನ್ನು ಬದಲಾಯಿಸಬೇಕಾಗಿದೆ. ವಿವಿಧ ಹಿಂದುತ್ವನಿಷ್ಠ ಸಂಘಟನೆಗಳ ಸಂಘಟಿತ ನೇತೃತ್ವದಿಂದ ಈ ಪರಿಸ್ಥಿತಿ ಖಂಡಿತವಾಗಿಯೂ ಬದಲಾಗಲಿದೆ ಎಂದು ನನಗೆ ವಿಶ್ವಾಸವಿದೆ ಎಂದೂ ಇಸ್ಟರ್ ಧನರಾಜ್ ಹೇಳಿದರು.