ನ್ಯೂಝಿಲ್ಯಾಂಡ್‌ನಲ್ಲಿ ಜನವರಿ ೧, ೨೦೦೯ರ ನಂತರ ಜನಿಸಿದವರಿಗೆ ಸಿಗರೇಟು ಖರೀದಿಯ ಮೇಲೆ ನಿರ್ಬಂಧ

ವೆಲಿಂಗ್ಟನ (ನ್ಯೂಝಿಲ್ಯಾಂಡ) – ನ್ಯೂಝಿಲ್ಯಾಂಡ ಸರಕಾರವು ಹುಡುಗ-ಹುಡುಗಿಯರ ಮೇಲೆ ಆಯುಷ್ಯಪೂರ್ತಿ ಸಿಗರೇಟು ಖರೀದಿಗೆ ನಿರ್ಬಂಧ ಹೇರಿದೆ. ೨೦೨೫ರ ವರೆಗೆ ದೇಶದಲ್ಲಿನ ಶೇ. ೫ರಷ್ಟು ಜನರನ್ನು ತಂಬಾಖು ಮುಕ್ತಗೊಳಿಸುವ ಗುರಿಯನ್ನು ಇಟ್ಟುಕೊಳ್ಳಲಾಗಿದೆ. ಸದ್ಯ ಶೇ. ೮ರಷ್ಟು ಯುವಕರು ಸಿಗರೇಟು ಮತ್ತು ತಂಬಾಕುವಿನ ಸೇವನೆ ಮಾಡುತ್ತಾರೆ.

ನ್ಯೂಝಿಲ್ಯಾಂಡಿನ ಹೊಸ ಕಾನೂನಿನ ಅನುಸಾರ, ಜನವರಿ ೧, ೨೦೦೯ರ ನಂತರ ಜನಿಸಿದವರ ಮೇಲೆ ಸಿಗರೇಟು ಖರೀದಿಯ ಮೇಲೆ ನಿರ್ಬಂಧವಿದೆ. ಅಂದರೆ ಈ ದಿನಾಂಕದ ಮೊದಲು ಜನಿಸಿದವರು ಸಿಗರೇಟು ಖರೀದಿಸಬಹುದು. ಮುಂದೆ ಇಂತಹವರು ಈ ದಿನಾಂಕದ ಮೊದಲು ಜನಿಸಿರುವ ಬಗ್ಗೆ ಪುರಾವೆ ತೋರಿಸಬೇಕಾಗಬಹುದು. ಈ ಕಾನೂನನ್ನು ಜ್ಯಾರಿಗೊಳಿಸಿದರೆ ಈ ದಿನಾಂಕದ ಮೊದಲು ಜನಿಸಿರುವವರು ಸಿಗರೇಟನ್ನು ಖರೀದಿಸಿ ಈ ದಿನಾಂಕದ ನಂತರ ಜನಿಸಿರುವವರಿಗೆ ಕೊಡುವ ಸಾಧ್ಯತೆಯನ್ನು ವ್ಯಕ್ತಪಡಿಸಲಾಗುತ್ತಿದೆ.