ಗುಜರಾತಿನಲ್ಲಿ ರಾಮರಾಜ್ಯದಂತಹ ಆದರ್ಶ ನಿರ್ಮಾಣ ಮಾಡಲು ಭಾಜಪ ಸರಕಾರಕ್ಕೆ ಶುಭಾಶಯಗಳು !- ಹಿಂದೂ ಜನಜಾಗೃತಿ ಸಮಿತಿ

ಮುಂಬೈ – ಈಗಷ್ಟೇ ನಡೆದಿರುವ ಗುಜರಾತ ರಾಜ್ಯದ ವಿಧಾನಸಭೆಯ ಚುನಾವಣೆಯಲ್ಲಿ ಭಾಜಪಗೆ ಅಭೂತಪೂರ್ವ ಗೆಲುವು ಸಿಕ್ಕಿದೆ. ದೇಶದ ಪ್ರಧಾನಿ ನರೇಂದ್ರ ಮೋದಿ ಇವರ ನೇತೃತ್ವದಲ್ಲಿ ಭಾಜಪವು ಸ್ಪರ್ಧಿಸಿರುವ ಈ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷ ದಂತಹ ಜಾತ್ಯಾತೀತ ಪಕ್ಷವನ್ನು ಹೀನಾಯವಾಗಿ ಸೋಲಿಸಿದ್ದಾರೆ. ಈ ಚುನಾವಣೆಯಲ್ಲಿ ಭಾಜಪ ಸಾಧಿಸಿರುವ ವಿಜಯಕ್ಕಾಗಿ ಹಿಂದೂ ಜನಜಾಗೃತಿ ಸಮಿತಿ ಪ್ರಧಾನಿ ಮೋದಿ, ಭಾಜಪದ ನಾಯಕರು ಮತ್ತು ಗೃಹ ಸಚಿವರಾದ ಅಮಿತ ಶಾಹ ಹಾಗೂ ಭಾರತೀಯ ಜನತಾ ಪಕ್ಷವನ್ನು ತುಂಬು ಹೃದಯದಿಂದ ಅಭಿನಂದಿಸುತ್ತದೆ. ಬಹು ಸಂಖ್ಯಾತ ಹಿಂದೂಗಳು ಸಂಘಟಿತರಾಗಿ ನೀಡಿರುವ ಬೆಂಬಲದಿಂದ ಯಶಸ್ಸಿನ ಶಿಖರಕ್ಕೆ ಭಾಜಪ ತಲುಪಿದೆ ಎಂಬುದು ನಮ್ಮ ಭಾವನೆಯಾಗಿದೆ. ಮೋದಿಯವರ ನೇತೃತ್ವದಲ್ಲಿ ಗುಜರಾತಿನಲ್ಲಿನ ಹಿಂದುತ್ವ ಹೆಚ್ಚು ಬಲಶಾಲಿ ಆಗುತ್ತಿದೆ. ಆದ್ದರಿಂದ ಮುಂಬರುವ ಕಾಲದಲ್ಲಿ ಸಮಾಜದ ವಿವಿಧ ಸಮಸ್ಯೆಗಳ ಮೇಲೆ ನಿಖರವಾದ ಉಪಾಯ ಯೋಜನೆ ಮಾಡುವರು ಎಂದು ಹಿಂದೂಗಳಿಗೆ ಅನಿಸುತ್ತದೆ, ಇದರ ಬಗ್ಗೆ ನಮಗೆ ನಂಬಿಕೆ ಇದೆ. ಗುಜರಾತ ಇದು ದೇಶದಲ್ಲಿನ ಹಿಂದುತ್ವದ ಪ್ರಯೋಗಶಾಲೆಯಾಗಿದೆ ಎಂದು ಹೇಳಲಾಗುತ್ತದೆ. ಈಗ ಮುಂಬರುವ ರಾಮರಾಜ್ಯದ ಒಂದು ಆದರ್ಶ ಉದಾಹರಣೆ ಎಂದು ಇದು ಪ್ರಚಲಿತವಾಗಬೇಕು, ಅದಕ್ಕಾಗಿ ಹಿಂದೂ ಜನಜಾಗ್ರತಿ ಸಮಿತಿಯಿಂದ ಶುಭಾಶಯಗಳು ನೀಡಲಾಗುತ್ತಿದೆ ಎಂದು ಸಮಿತಿಯ ಪ್ರಸಿದ್ಧಿ ಪತ್ರದಲ್ಲಿ ಹೇಳಿದೆ.

ಈ ಪ್ರಸಿದ್ಧಿ ಪತ್ರದಲ್ಲಿ ಮುಂದೆ ಹೇಳಲಾಗಿದೆ,

೧. ಹಿಂದೆ ಕಡಿಮೆ ಜನಸಂಖ್ಯೆ ಇರುವ ಮುಸಲ್ಮಾನರು ಇಂದು ಹಿಂದೂಗಳ ದ್ವಾರಕಾ ದ್ವೀಪದ ಮೇಲೆ ಲ್ಯಾಂಡ್ ಜಿಹಾದ್ ಮೂಲಕ ಬಹು ಸಂಖ್ಯಾತರ ಭೂಮಿಯನ್ನು ನಿಯಂತ್ರಣಕ್ಕೆ ಪಡೆದಿದ್ದಾರೆ. ಇಲ್ಲಿ ಕಾನೂನ ಬಾಹಿರ ಕಟ್ಟಡಗಳನ್ನು ನೆಲಸಮ ಮಾಡಿದ್ದರೂ ಇಲ್ಲಿಯ ಬಹುಸಂಖ್ಯಾತರ ಭೂಮಿ ಮುಸಲ್ಮಾನರ ಬಳಿ ಹೋಗಿದೆ. ಬಹುತಾಂಶ ವ್ಯಾಪಾರ ಕೂಡ ಹಿಂದುಗಳಿಂದ ಮುಸಲ್ಮಾನರ ಬಳಿ ಹೋಗಿದೆ. ದ್ವಾರಕಾದ್ವೀಪದಲ್ಲಿನ ಮುಸಲ್ಮಾನರು ಪಾಕಿಸ್ತಾನಿ ಮುಸಲ್ಮಾನರ ಜೊತೆ ರೋಟಿ ಬೇಟಿ ವ್ಯವಹಾರ ಮಾಡುತ್ತಿರುವುದರಿಂದ ಭವಿಷ್ಯದಲ್ಲಿ ದೇಶದ ಸುರಕ್ಷತೆಗೆ ಅಪಾಯ ನಿರ್ಮಾಣವಾಗಬಹುದು.

೨. ಗುಜರಾತಿನಲ್ಲಿ ಹಿಂದೂಗಳ ನವರಾತ್ರಿ ಉತ್ಸವಗಳ ಮೇಲೆ ಮತಾಂಧ ಮುಸಲ್ಮಾನರಿಂದ ದಾಳಿ ಮಾಡಲಾಗುತ್ತದೆ. ಹಿಂದೂ ಕಾರ್ಯಕರ್ತರ ಹತ್ಯೆ ಮಾಡಲಾಗುತ್ತದೆ. ಭರುಚನಲ್ಲಿ ಅಂತೂ ಹಿಂದೂಗಳ ೨೮ ಮನೆಗಳನ್ನು ಮುಸಲ್ಮಾನರು ಖರೀದಿಸಿರುವುದರಿಂದ ಅಲ್ಲಿಯ ದೇವಸ್ಥಾನ ಮಾರಾಟಕ್ಕಿದೆ ಎಂದು ಫಲಕ ಹಾಕುವ ಪರಿಸ್ಥಿತಿ ಹಿಂದೂಗಳಿಗೆ ಬಂದಿದೆ. ಬುಡಕಟ್ಟು ಜನಾಂಗದ ಪ್ರದೇಶದಲ್ಲಿ ಮತಾಂತರವಾಗುತ್ತಿದೆ,ಇದು ಮತ್ತು ಇಂತಹ ಅನೇಕ ಸಮಸ್ಯೆಗಳು ಇನ್ನೂ ಹಿಂದೂ ಸಮಾಜವನ್ನು ಕಾಡುತ್ತಿವೆ.

೩. ಈ ಎಲ್ಲಾ ಸಮಸ್ಯೆಗಳ ಬಗ್ಗೆ ತತ್ಕಾಲ ಭಾಜಪ ಸರಕಾರವು ಅವಶ್ಯವಾದ ಉಪಾಯ ಯೋಜನೆ ರೂಪಿಸಿ ಹಿಂದೂ ಸಮಾಜಕ್ಕೆ ಭರವಸೆ ನೀಡಬೇಕು ಹಾಗೂ ಗುಜರಾತ ಸರಕಾರವು ಜಾರಿಗೊಳಿಸಿರುವ ಲವ್ ಜಿಹಾದ್ ವಿರೋಧಿ ಕಾನೂನಿನಲ್ಲಿ ೩,೪,೫, ಮತ್ತು ೬ ಈ ಕಲಮಿನ ಬಗ್ಗೆ ನ್ಯಾಯಾಲಯವು ನೀಡಿರುವ ತಡೆಯಾಜ್ಞೆಯನ್ನು ತೆರವುಗೊಳಿಸಲು ಮತ್ತು ಈ ಕಾನೂನು ಇನ್ನಷ್ಟು ಕಠಿಣ ಗೊಳಿಸುವುದಕ್ಕಾಗಿ ಸರಕಾರ ಕ್ರಮಕೈಗೊಳ್ಳುವುದು ಎಂಬ ಅಪೇಕ್ಷೆ ಇದೆ.

೪. ಭಾರತದ ಗೃಹ ಸಚಿವರಾದ ಅಮಿತ ಶಹಾ ಇವರ ಏಕರೂಪ ನಾಗರಿಕ ಕಾನೂನು ಜಾರಿ ಮಾಡುವ ಘೋಷಣೆ ಸ್ವಾಗತಾರ್ಯವಾಗಿದ್ದು ನಾವು ಅಮಿತ ಶಹಾ ಇವರನ್ನು ಅಭಿನಂದಿಸುತ್ತೇವೆ.