ಪಾಕಿಸ್ತಾನದಿಂದ ಭಾರತಕ್ಕೆ ಬಂದ ಹಿಂದೂ ನಿರಾಶ್ರಿತರಿಗೆ ೧೦ ವರ್ಷಗಳ ನಂತರ ವಿದ್ಯುತ್ ಪೂರೈಕೆ

ನವದೆಹಲಿ : ಪಾಕಿಸ್ತಾನದಲ್ಲಿ ಮತಾಂಧರ ದೌರ್ಜನ್ಯದಿಂದ ಬೇಸತ್ತು ಭಾರತಕ್ಕೆ ಬಂದ ಹಿಂದೂ ನಿರಾಶ್ರಿತರು ಗುಡಿಸಲುಗಳಲ್ಲಿ ವಾಸಿಸುತ್ತಿದ್ದಾರೆ. ಈ ಗುಡಿಸಲುಗಳಿಗೆ ಕಳೆದ ೧೦ ವರ್ಷಗಳಿಂದ ವಿದ್ಯುತ್ ಪೂರೈಕೆ ಇಲ್ಲ. ಕಳೆದ ತಿಂಗಳು ನ್ಯಾಯಾಲಯದ ಆದೇಶದಿಂದ ಈ ನಿರಾಶ್ರಿತರಿಗೆ ವಿದ್ಯುತ್ ಪೂರೈಕೆ ನೀಡಲಾಯಿತು.

ಒಂದು ವೃತ್ತಪತ್ರಿಕೆಯ ವರದಿಗನುಸಾರ ಸುಮಾರು ೯೦೦ ಹಿಂದೂ ನಿರಾಶ್ರಿತರು ದೆಹಲಿಯ ‘ಮಜ್ಲಿಸ್ ಪಾರ್ಕ್ ಮೆಟ್ರೋ ನಿಲ್ದಾಣ’ದ ಹಿಂಭಾಗದ ಮೈದಾನದಲ್ಲಿ ೧೦ ವರ್ಷಗಳಿಂದ ನರಕಯಾತನೆ ಅನುಭವಿಸುತ್ತಿದ್ದಾರೆ. ಅವರಿಗೆ ಯಾವುದೇ ಮೂಲಭೂತ ಸೌಲಭ್ಯಗಳಿಲ್ಲ. ೨೦೨೨ ರ ನವೆಂಬರ್ ೧೦ ರಂದು ದೆಹಲಿಯ ಹೈಕೋರ್ಟ್ `ಟಾಟಾ ಪವರ್ ದೆಹಲಿ ಡಿಸ್ಟ್ರಿಬ್ಯೂಷನ್ ಲಿಮಿಟೆಡ್ ಗೆ’ ಎಲ್ಲಾ ನಿರಾಶ್ರಿತರ ಮನೆಗಳಿಗೆ ಒಂದು ತಿಂಗಳೊಳಗೆ ವಿದ್ಯುತ್ ಪೂರೈಸುವಂತೆ ಆದೇಶಿಸಿತ್ತು.

ಪಾಕಿಸ್ತಾನದಲ್ಲಿ ವಾಸಿಸುವ ಹೆಚ್ಚಿನ ಸಂಖ್ಯೆಯ ಹಿಂದೂಗಳು ೨೦೧೩ ರಲ್ಲಿ ಭಾರತಕ್ಕೆ ವಲಸೆ ಹೋಗಿದ್ದರು. ಈ ನಿರಾಶ್ರಿತರಿಗೆ ಭಾರತೀಯ ಪೌರತ್ವ ಮತ್ತು ಮತದಾನದ ಹಕ್ಕು ಇನ್ನೂ ಕನಸಾಗಿಯೇ ಉಳಿದಿದೆ.

ಸಂಪಾದಕೀಯ ನಿಲುವು

ಪಾಕಿಸ್ತಾನದಲ್ಲಿ ಮಾತ್ರವಲ್ಲದೆ, ಇತರ ಇಸ್ಲಾಮಿಕ್ ದೇಶಗಳಲ್ಲಿಯೂ ಪೀಡಿತ ಹಿಂದೂಗಳು ಭಾರತವನ್ನು ಅಪೇಕ್ಷೆಯಿಂದ ನೋಡುತ್ತಾರೆ. ಆದರೆ ಅವರು ಭಾರತಕ್ಕೆ ಬಂದಾಗ ಈ ರೀತಿಯ ಅಸಹನೀಯ ಸ್ಥಿತಿಯಲ್ಲಿ ಬದುಕಬೇಕಾದಾಗ, ಅವರಿಗೆ ಭಾರತಕ್ಕೆ ಬಂದು ಏನು ಪ್ರಯೋಜನ ? ಭಾರತ ಸರಕಾರ ಇದನ್ನು ಗಂಭೀರವಾಗಿ ಪರಿಗಣಿಸಬೇಕಾಗಿದೆ !