ಬಿಹಾರದಲ್ಲಿ ಮತ್ತೊಮ್ಮೆ ವಿಷಯುಕ್ತ ಸಾರಾಯಿ ಸೇವಿಸಿ ೧೨ ಜನರ ಮರಣ

ಪಾಟಲಿಪುತ್ರ (ಬಿಹಾರ) – ಮದ್ಯ ನಿಷೇಧ ಇರುವ ಬಿಹಾರದಲ್ಲಿ ಮತ್ತೊಮ್ಮೆ ಮದ್ಯ ಸೇವನೆಯಿಂದ ೧೨ ಜನರು ಸಾವನ್ನಪ್ಪಿದ್ದಾರೆ. ವಿಷಪೂರಿತ ಮದ್ಯ ಸೇವನೆಯಿಂದ ಸಾವನ್ನಪ್ಪಿದ್ದಾರೆ ಎಂದು ಸಂಬಂಧಿಕರು ಹೇಳುತ್ತಿದ್ದಾರೆ. ಆದರೆ ಸರಕಾರ ಮಾತ್ರ ಈ ವಿಷಯದಲ್ಲಿ ಯಾವುದೇ ಹೇಳಿಕೆ ನೀಡಿಲ್ಲ. ಈ ಬಾರಿ ಈ ಘಟನೆಯು ಸಾರಣ್ ಜಿಲ್ಲೆಯಲ ಇಸುಆಪೂರ್ ಪೊಲೀಸ್ ಠಾಣೆಯ ಸರಹದ್ದಿನ ಡೋಯಿಲಾ ಗ್ರಾಮದಲ್ಲಿ ನಡೆದಿದೆ. ಸ್ಥಳೀಯ ಮಟ್ಟದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಇನ್ನೂ ೧೩ ಜನರ ಆರೋಗ್ಯ ಚಿಂತಾಜನಕವಾಗಿದ್ದು ಮೃತರ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ.

ಸಾರಾಯಿ ನಿಷೇಧದ ಬಗ್ಗೆ ವಿಧಾನಸಭೆಯಲ್ಲಿ ಕೋಲಾಹಲ , ಮುಖ್ಯಮಂತ್ರಿ ನಿತೀಶ ಕುಮಾರರ ಆಕ್ರೋಶ

ಬಿಹಾರ ಮುಖ್ಯಮಂತ್ರಿ ನಿತೀಶ ಕುಮಾರ ಅವರ ಕ್ರೋಧ ವಿಧಾನಸಭೆಯಲ್ಲಿ ಅಧಿವೇಶನದ ಸಮಯದಲ್ಲಿ ಮತ್ತೊಮ್ಮೆ ಬಹಿರಂಗವಾಯಿತು .ಸಾರಣಾದಲ್ಲಿ ವಿಷಪೂರಿತ ಮದ್ಯ ಸೇವನೆಯಿಂದ ಆಗಿರುವ ಸಾವು ನೋವಿನ ಬಗ್ಗೆ ವಿರೋಧ ಪಕ್ಷದ ಕೆಲವು ಸದಸ್ಯರು ಸರಕಾರವನ್ನು ಘೇರಾವ್ ಹಾಕುವ ಪ್ರಯತ್ನ ಮಾಡಿದರು. ಅವರು ಮುಖ್ಯಮಂತ್ರಿಗಳು ತ್ಯಾಗ ಪತ್ರ ನೀಡಬೇಕೆಂದು ಒತ್ತಾಯಿಸಿದರು. ಇದರಿಂದ ನಿತೀಶ ಕುಮಾರ ಆಕ್ರೋಶಗೊಂಡರು. ವಿಧಾನಸಭೆಯ ವಿರೋಧ ಪಕ್ಷದ ಅಧ್ಯಕ್ಷ ರಾದ ವಿಜಯ ಕುಮಾರ ಸಿಂಹ ಇವರು ಮಾತನಾಡುತ್ತಾ ಮುಖ್ಯಮಂತ್ರಿ ನಿತೀಶ ಕುಮಾರ ಭಾಜಪದ ಶಾಸಕರ ಬಗ್ಗೆ ಕೀಳಾಗಿ ಮಾತನಾಡಿರುವುದು ಸರಿಯಲ್ಲ. ಮುಖ್ಯಮಂತ್ರಿ ನಿತೀಶ ಕುಮಾರ ಇವರು ಕ್ಷಮೆ ಯಾಚಿಸಬೇಕು ಎಂದು ಅವರು ವಿಧಾನಸಭೆ ಅಧ್ಯಕ್ಷರ ಬಳಿ ಒತ್ತಾಯಿಸಿದರು.

ಸಂಪಾದಕೀಯ ನಿಲುವು

ಜನತಾದಳ (ಸಂಯುಕ್ತ) ಮತ್ತು ರಾಷ್ಟ್ರೀಯ ಜನತಾದಳ ಇವರ ರಾಜ್ಯದಲ್ಲಿ ಹೆಸರಿಗಷ್ಟೇ ಸಾರಾಯಿ ನಿಷೇಧ ಇದೆಯೆನ್ನುವುದು ಮತ್ತೊಮ್ಮೆ ಸಾಬೀತಾಗಿದೆ.