ಕರ್ನಾಟಕದಲ್ಲಿ ದೇವಸ್ಥಾನದಲ್ಲಿ `ಸಲಾಂ ಆರತಿ’ ಈಗ `ಸಂಧ್ಯಾ ಆರತಿ’ ಎಂದು ಹೇಳಲಾಗುವುದು !

  • ಹಿಂದೂ ಸಂಘಟನೆಯ ಆಗ್ರಹಕ್ಕೆ ಸಂದ ಜಯ

  • ಟಿಪ್ಪು ಸುಲ್ತಾನನಿಂದಾಗಿ `ಸಲಾಂ ಆರತಿ’ ಎಂದು ಹೇಳಲಾಗುತ್ತಿತ್ತು !

ಮೇಲುಕೋಟೆ – ಇಲ್ಲಿಯ ಐತಿಹಾಸಿಕ ಚೆಲುವ ನಾರಾಯಣ ಸ್ವಾಮಿ ದೇವಸ್ಥಾನದ ಸಹಿತ ಅನೇಕ ದೇವಸ್ಥಾನದಲ್ಲಿ ಟಿಪ್ಪು ಸುಲ್ತಾನ ಕಾಲದಿಂದ ಸಂಜೆ ನಡೆಯುವ ಆರತಿಗೆ `ಸಲಾಂ ಆರತಿ’ ಎನ್ನಲಾಗುತ್ತಿತ್ತು. ಈ ಆರತಿಯ ಹೆಸರು ಬದಲಾಯಿಸಲು ಹಿಂದುತ್ವನಿಷ್ಠ ಸಂಘಟನೆಗಳಿಂದ ಒತ್ತಾಯದ ನಂತರ ಅದನ್ನು `ಸಂಧ್ಯಾ ಆರತಿ’ ಎಂದು ಹೇಳಲಾಗುವುದು. ರಾಜ್ಯದಲ್ಲಿನ ಮುಜರಾಯಿ ಇಲಾಖೆ ಇದಕ್ಕೆ ಒಪ್ಪಿಗೆ ನೀಡಿದೆ. ಕಳೆದ ೬ ತಿಂಗಳಿಂದ ಈ ವಿಷಯ ಇಲಾಖೆಯಲ್ಲಿ ಬಾಕಿ ಉಳಿದಿತ್ತು. ಈಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇವರಿಂದ ಒಪ್ಪಿಗೆ ಸಿಗುವುದು ಬಾಕಿ ಇದೆ. ಟಿಪ್ಪು ಸುಲ್ತಾನಿನ ಹೆಸರಿನಲ್ಲಿ ಮಾಡಲಾಗುವ ವಿಧಿ ರದ್ದುಪಡಿಸುವುದಕ್ಕಾಗಿ ಕೂಡ ಒತ್ತಾಯಿಸಲಾಗಿತ್ತು. ಟಿಪ್ಪು ಸುಲ್ತಾನನು ಈ ದೇವಸ್ಥಾನಕ್ಕೆ ನೀಡಿರುವ ಭೇಟಿಯಿಂದಾಗಿ ಆರತಿಗೆ `ಸಲಾಂ ಆರತಿ’ ಎಂದು ಹೆಸರು ನೀಡಲಾಗಿತ್ತೆಂದು ಹೇಳಲಾಗುತ್ತಿದೆ.

೧. ಕರ್ನಾಟಕ ಧಾರ್ಮಿಕ ಪರಿಷತ್ತಿನ ಸದಸ್ಯ ಕಶೆಕೊಡಿ ಸೂರ್ಯನಾರಾಯಣ ಭಟ್ಟ ಇವರು, `ಸಲಾಂ’ ಈ ಪದ ಟಿಪ್ಪು ನೀಡಿದ್ದನು ಅದು ನಮ್ಮ ಪದ ಅಲ್ಲ ಎಂದು ಹೇಳಿದರು.

೨. ಭಟ್ಟ ಇವರ ಅಭಿಪ್ರಾಯದ ಪ್ರಕಾರ, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ, ಪುತ್ತೂರಿನಲ್ಲಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಕೊಲ್ಲೂರಿನ ಶ್ರೀ ಮೂಕಾಂಬಿಕಾ ದೇವಸ್ಥಾನ ಮತ್ತು ಇತರ ಕೆಲವು ಪ್ರಸಿದ್ಧ ದೇವಸ್ಥಾನಗಳಲ್ಲಿ `ಸಲಾಂ ಆರತಿ’ ನಡೆಯುತ್ತದೆ. ಮಂಡ್ಯ ಜಿಲ್ಲಾ ಆಡಳಿತದಿಂದ ಹೆಸರು ಬದಲಾಯಿಸುವಂತೆ ಹಿಂದೂ ಧಾರ್ಮಿಕ ಸಂಸ್ಥೆ ಮತ್ತು ದತ್ತಿ ವಿಭಾಗ ಪ್ರಸ್ತಾಪ ಪಡಿಸಿದ್ದರು.

ಹಿಂದೆ ಏನು ಪ್ರಚಲಿತವಾಗಿತ್ತು, ಅದನ್ನು ನಾವು ಮತ್ತೆ ತಂದಿದ್ದೇವೆ ! – ಸಚಿವ ಶಶಿಕಲಾ ಜೊಲ್ಲೆ

ಈ ವಿಷಯವಾಗಿ ಧಾರ್ಮಿಕ ದತ್ತಿ ಇಲಾಖೆಯ ಸಚಿವೆ ಶಶಿಕಲಾ ಜೊಲ್ಲೆ ಇವರು, ಈ ಫಾರಸಿ ಹೆಸರು ಬದಲಾಯಿಸಿ `ಮಂಗಳಾರತಿ ನಮಸ್ಕಾರ’ ಅಥವಾ `ಆರತಿ ನಮಸ್ಕಾರ’ ಈ ರೀತಿಯ ಪಾರಂಪರಿಕ ಸಂಸ್ಕೃತ ಹೆಸರು ಶಾಶ್ವತವಾಗಿಡುವ ಪ್ರಸ್ತಾವ ಮತ್ತು ಮನವಿಗಳು ಇದ್ದವು. ಇತಿಹಾಸ ನೋಡಿದರೆ ಹಿಂದೆ ಏನು ಪ್ರಚಲಿತವಾಗಿತ್ತು ಅದನ್ನೇ ನಾವು ಈಗ ಮತ್ತೆ ತಂದಿದ್ದೇವೆ ಎಂದು ಹೇಳಿದರು.

ಸಂಪಾದಕೀಯ ನಿಲುವು

ಈ ರೀತಿಯಲ್ಲಿ ಹಿಂದೂ ಸಂಘಟನೆಗಳು ಏಕೆ ಒತ್ತಾಯ ಮಾಡಬೇಕಾಯಿತು ? ಸರಕಾರವು ತಾವಾಗಿಯೇ ಅದರಲ್ಲಿ ಬದಲಾವಣೆ ಮಾಡುವುದು ಅಪೇಕ್ಷಿತವಾಗಿತ್ತು, ಎಂದು ಹಿಂದುಗಳಿಗೆ ಅನಿಸುತ್ತದೆ !