ವಿಚ್ಛೇದನಕ್ಕಾಗಿ ವರ್ಷವಿಡೀ ಕಾಯುವ ನಿಯಮ ಸಂವಿಧಾನ ಬಾಹಿರವಾಗಿದ್ದು ಅದನ್ನು ರದ್ದುಪಡಿಸಬೇಕು !

ಕೇರಳ ಉಚ್ಚ ನ್ಯಾಯಾಲಯದಿಂದ ಕೇಂದ್ರ ಸರಕಾರಕ್ಕೆ ಸೂಚನೆ

ತಿರುವನಂತಪುರಂ (ಕೇರಳ)– ಪರಸ್ಪರ ಒಪ್ಪಿಗೆಯಿಂದ ವಿಚ್ಛೇದನಕ್ಕಾಗಿ ಮನವಿ ದಾಖಲಿಸಿದ ಬಳಿಕ ದಂಪತಿಗಳಿಗೆ ಒಂದು ವರ್ಷ ಅಥವಾ ಅದಕ್ಕಿಂತಲೂ ಹೆಚ್ಚಿನ ಸಮಯದವರೆಗೆ ಪ್ರತ್ಯೇಕವಾಗಿ ಇರುವಂತೆ ವಿಧಿಸುವ ಷರತ್ತು ಸಂವಿಧಾನ ಬಾಹಿರವಾಗಿದೆ, ಎಂದು ಕೇರಳ ಉಚ್ಚ ನ್ಯಾಯಾಲಯವು ಒಂದು ಪ್ರಕರಣದ ಆಲಿಸುವಿಕೆಯ ಸಮಯದಲ್ಲಿ ಹೇಳಿದೆ. ವಿಚ್ಛೇದನ ಕಾನೂನು ೧೮೬೯ ರ ನಿಯಮ ೧೦ಅ ದಲ್ಲಿನ ಪ್ರತ್ಯೇಕವಾಗಿ ವಾಸಿಸುವ ನಿಯಮ ನಾಗರೀಕರ ಮೂಲಭೂತ ಅಧಿಕಾರದ ಉಲ್ಲಂಘನೆಯಾಗಿದೆ. ಕೇಂದ್ರ ಸರಕಾರವು ವಿಚ್ಛೇದನ ಕಾನೂನಿನಲ್ಲಿನ ಈ ವಿವಾದಗ್ರಸ್ತ ಕಲಂ ತೆಗೆದು ಹಾಕಬೇಕು, ಹಾಗೂ ವಿವಾಹದ ಬಳಿಕ ವಿವಾದಗಳಾದಾಗ ಪತಿ -ಪತ್ನಿಯ ಹಿತ ಕಾಪಾಡುವುದಕ್ಕಾಗಿ ಕೇಂದ್ರವು ಸಮಾನ ವಿವಾಹ ಕಾನೂನು ಜಾರಿ ಮಾಡಬೇಕೆಂದು ನ್ಯಾಯಾಲಯ ಹೇಳಿದೆ.

ಕೇರಳ ಉಚ್ಚ ನ್ಯಾಯಾಲಯದಲ್ಲಿ ಒಂದು ಕ್ರೈಸ್ತ ದಂಪತಿಗಳು ವಿಚ್ಛೇದನಕ್ಕಾಗಿ ಮನವಿ ದಾಖಲಿಸಿದ್ದರು. ಈ ದಂಪತಿಗಳು ವಿಚ್ಛೇದನ ಪಡೆಯುವುದಕ್ಕಾಗಿ ಕನಿಷ್ಠ ಒಂದು ವರ್ಷವಾದರೂ ಪ್ರತ್ಯೇಕವಾಗಿ ವಾಸಿಸುವಂತೆ ವಿಧಿಸುವ ಷರತ್ತು ಮೂಲಭೂತ ಅಧಿಕಾರದ ವಿರುದ್ಧವಾಗಿದೆ ಎಂದು ಮನವಿಯಲ್ಲಿ ತಿಳಿಸಿದ್ದರು. ಈ ಪ್ರಕರಣದಲ್ಲಿ ನ್ಯಾಯಾಲಯವು ಈ ದಂಪತಿಗಳ ಮನವಿಯನ್ನು ೨ ವಾರದ ಒಳಗೆ ತೀರ್ಪು ನೀಡುವ ಬಗ್ಗೆ ಹಾಗೂ ಇಬ್ಬರೂ ಮನವಿದಾರರನ್ನು ನ್ಯಾಯಾಲಯಕ್ಕೆ ಕರೆಯದೆ ಅವರಿಗೆ ವಿಚ್ಛೇದನದ ಒಪ್ಪಿಗೆಯ ಆದೇಶ ನೀಡಿದೆ.