Drugs Seized: ಅಂಡಮಾನ : ಮೀನುಗಾರರ ನೌಕೆಯಿಂದ ೫ ಟನ್ ಮಾದಕ ಪದಾರ್ಥಗಳು ವಶ !

ಮಾದಕ ಪದಾರ್ಥಕ್ಕೆ ಸಂಬಂಧಿತ ಇಲ್ಲಿಯವರೆಗಿನ ಎಲ್ಲಾಕಿಂತ ದೊಡ್ಡ ಕಾರ್ಯಾಚರಣೆ ನಡೆಸಿರುವ ಗಡಿ ಭದ್ರತಾ ಪಡೆ !

ನವ ದೆಹಲಿ – ಭಾರತೀಯ ಗಡಿ ಭದ್ರತಾ ಪಡೆಯಿಂದ ಅಂಡಮಾನ ಹತ್ತಿರದ ಸಮುದ್ರದಿಂದ ೫ ಟನ್ ಮಾದಕ ಪದಾರ್ಥಗಳು ವಶಪಡಿಸಿಕೊಂಡಿದ್ದಾರೆ. ಗಡಿ ಭದ್ರತಾ ಪಡೆಯಿಂದ ಮಾದಕ ಪದಾರ್ಥಗಳ ಸಂದರ್ಭದಲ್ಲಿ ಇದು ಇಲ್ಲಿಯವರೆಗಿನ ಎಲ್ಲಕ್ಕಿಂತ ದೊಡ್ಡ ಕಾರ್ಯಾಚರಣೆ ಆಗಿದೆ. ಮೀನುಗಾರರ ನೌಕೆಯಲ್ಲಿ ಈ ಮಾದಕ ಪದಾರ್ಥಗಳು ದೊರೆತಿವೆ. ಪದಾರ್ಥಗಳ ಪ್ರಕಾರ ಮತ್ತು ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅದರ ಮೌಲ್ಯದ ಬಗ್ಗೆ ಇಲ್ಲಿಯವರೆಗೆ ಮಾಹಿತಿ ನೀಡಲಾಗಿಲ್ಲ.

ಪ್ರಕರಣದ ವಿಚಾರಣೆಯ ನಂತರವೇ ಯಾರ ಮೇಲೆ ಕ್ರಮ ಕೈಗೊಳ್ಳಬೇಕು, ಇದು ಸ್ಪಷ್ಟವಾಗುವುದು ಎಂದು ರಕ್ಷಣಾ ಅಧಿಕಾರಿಗಳು ಮಾಹಿತಿ ನೀಡಿದರು. ಭಾರತೀಯ ಗಡಿ ಭದ್ರತಾ ಪಡೆ ಮತ್ತು ಗುಜರಾತ್ ಉಗ್ರ ನಿಗ್ರಹ ದಳವು ನವಂಬರ್ ೧೫ ರಂದು ಪೋರುಬಂದರ ದಡದಿಂದ ೫೦೦ ಕೆಜಿ ಮಾದಕ ಪದಾರ್ಥ ವಶಪಡಿಸಿಕೊಂಡಿದ್ದರು. ಅದರ ಮೌಲ್ಯ ೭೦೦ ಕೋಟಿ ರೂಪಾಯಿಗಿಂತಲೂ ಹೆಚ್ಚು ಆಗಿರುವುದು ಎಂದು ಹೇಳಲಾಗುತ್ತಿತ್ತು.