ಕರ್ನಾಟಕದ ಒಂದು ಸರಕಾರಿ ಮಹಾವಿದ್ಯಾಲಯದಲ್ಲಿ ಹಿಜಾಬ್ (ತಲೆಯ ಮೇಲೆ ಹಾಕಿಕೊಳ್ಳುವ ಬಟ್ಟೆ) ಹಾಕಿಕೊಳ್ಳುವ ಅನುಮತಿ ಇರುವುದರಿಂದ ಹಿಂದೂ ವಿದ್ಯಾರ್ಥಿಗಳು ಕೊರಳಿನಲ್ಲಿ ಕೇಸರಿ ವಸ್ತ್ರವನ್ನು ಹಾಕಿಕೊಳ್ಳುವರು

‘ಇಂಡಿಯಾ ಟುಡೆ’ ನಿಯತಕಾಲಿಕೆಯಲ್ಲಿ ಈ ವಿಷಯದ ವಾರ್ತೆಯನ್ನು ನೀಡಲಾಗಿದೆ. ಕೆಲವು ವಿದ್ಯಾರ್ಥಿಗಳು ಈ ಮೊದಲು ವಿದ್ಯಾರ್ಥಿನಿಯರನ್ನು ಹಿಜಾಬ್ ಹಾಕಿಕೊಂಡು ವರ್ಗದಲ್ಲಿ ಕುಳಿತುಕೊಳ್ಳಲು ನಿರಾಕರಿಸಲಾಗಿತ್ತು.

ಚಿತ್ತೋಡಗಡನಲ್ಲಿ ‘ಲೇಸರ್ ಶೋ’ನಲ್ಲಿ ರಾಣಿ ಪದ್ಮಾವತಿಯ ವಿವಾದಿತ ಪ್ರಸಂಗ ತೋರಿಸಿದ್ದರಿಂದ ಶೋವನ್ನು ನಿಲ್ಲಿಸಿದ ಭಾಜಪದ ಶಾಸಕರು !

ಚಿತ್ತೋಡದ ಭಾಜಪದ ಶಾಸಕ ಚಂದ್ರಪ್ರಕಾಶ ಜೋಶಿ ಇವರು ಚಿತ್ತೋಡಗಡದಲ್ಲಿ ಇತ್ತಿಚೆಗೆ ಆರಂಭಿಸಲಾದ ಲೇಸರ್ ಶೋವನ್ನು ನಿಲ್ಲಿಸಿದ್ದಾರೆ. ಈ ಲೇಸರ್ ಶೋನಲ್ಲಿ ರಾಣಿ ಪದ್ಮಾವತಿ ಮತ್ತು ಅಲ್ಲಾವುದ್ದೀನ್ ಖಿಲ್ಜಿ ಇವರ ಸಂದರ್ಭದ ಪ್ರಸಂಗಗಳು ತೋರಿಸಲಾಗಿತ್ತು.

ಹಿಂದಿ ಚಲನಚಿತ್ರ `ಅತರಂಗಿ ರೆ’ಯಲ್ಲಿ `ಲವ್ ಜಿಹಾದ್‌’ಗೆ ಕುಮ್ಮಕ್ಕು

ಹಿಂದಿ ಚಲನಚಿತ್ರ `ಅತರಂಗಿ ರೆ’ ಇದರಲ್ಲಿ ಲವ್ ಜಿಹಾದ್‌ಗೆ ಪ್ರೋತ್ಸಾಹ ನೀಡಲಾಗಿರುವುದು ಕಂಡುಬರುತ್ತಿದೆ. ಇದರಲ್ಲಿ ನಾಯಕ ಅಕ್ಷಯ ಕುಮಾರ್ ಇವರು ಸಜ್ಜಾದ್ ಎಂಬ ಮುಸಲ್ಮಾನ ಯುವಕನ, ಹಾಗೂ ನಾಯಕಿ ಸಾರಾ ಅಲಿಖಾನ್ ಇವರು ರಿಂಕು ಎಂಬ ಹಿಂದೂ ಯುವತಿಯ ಪಾತ್ರದಲ್ಲಿದ್ದಾರೆ.

… ಹಾಗಿದ್ದರೆ ಸಂಪೂರ್ಣ ಭಾರತದಲ್ಲಿ ಪ್ರತಿಧ್ವನಿ ಕೇಳಿಬರುವುದು ! – ಶ್ಯಾಮ ಸಿಂಹ ಠಾಕೂರ, ಪ್ರದೇಶಾಧ್ಯಕ್ಷ, ಮಹಾರಾಷ್ಟ್ರ ಕರಣಿ ಸೇನಾ

ಇತಿಹಾಸದ ಮೇಲಾಧಾರಿತವಾದ ಚಲನಚಿತ್ರಗಳ ವಿಷಯದಲ್ಲಿ ಸತತವಾಗಿ ನಿರ್ಮಾಣವಾಗುವ ವಾದಗಳ ಹಿನ್ನೆಲೆಯಲ್ಲಿ ಇಂತಹ ಚಲನಚಿತ್ರಗಳ ಸತ್ಯತೆಯನ್ನು ಪರಿಶೀಲಿಸಲು ಕೇಂದ್ರ ಸರಕಾರವು ಧೋರಣೆಯನ್ನು ನಿಶ್ಚಯಿಸಬೇಕು !

ಹಿಂದೂಗಳಿಗೆ ದೇವತೆಗಳ ಮೂರ್ತಿಯನ್ನು ಸ್ಥಾಪಿಸಿ ಅವುಗಳಿಗೆ ಪೂಜಿಸುವ ಅಧಿಕಾರ ನೀಡುವ ಬೇಡಿಕೆಯನ್ನು ತಿರಸ್ಕರಿಸಿದ ನ್ಯಾಯಾಲಯ

ದೆಹಲಿಯಲ್ಲಿನ ಕುತುಬ ಮಿನಾರದಲ್ಲಿ 27 ಹಿಂದೂ ಮತ್ತು ಜೈನ ದೇವಸ್ಥಾನಗಳಲ್ಲಿ ಪೂಜೆ ಮಾಡುವ ಅಧಿಕಾರವನ್ನು ಕೇಳುವ ಅರ್ಜಿಯನ್ನು ಸಾಕೇತ ನ್ಯಾಯಾಲಯವು ‘ಪ್ಲೇಸ್ಸ್ ಅಫ್ ವರ್ಷಿಪ್ 1991’ ನ ಕಾನೂನಿನ ಆಧಾರದಲ್ಲಿ ತಿರಸ್ಕರಿಸಿದೆ.

ಬಾಂಗ್ಲಾದೇಶದಲ್ಲಿ ಹಿಂದೂ ದೇವತೆಗಳ ಮೂರ್ತಿ ಧ್ವಂಸ ಮಾಡಿದ ಛಾಯಾಚಿತ್ರವನ್ನು ಟ್ವಿಟ್ ಮಾಡಿದ್ದಕ್ಕೆ ಕೊಲಕಾತಾ ಪೊಲೀಸರಿಂದ ಹಿಂದೂ ಖಾತೆದಾರನಿಗೆ ನೋಟೀಸ್ !

ಬಾಂಗ್ಲಾದೇಶದ ಸರಕಾರವಲ್ಲ, ಬಂಗಾಲದಲ್ಲಿರುವ ಕೊಲಕಾತಾ ಪೊಲೀಸರು ಈ ವಿಷಯದ ಬಗ್ಗೆ ಓರ್ವ ಹಿಂದೂಗೆ ನೊಟೀಸ್ ನೀಡುತ್ತಾರೆ ಎಂಬುದು ಖೇದಕರ ! ಬಂಗಾಲದಲ್ಲಿರುವ ತೃಣಮೂಲ ಕಾಂಗ್ರೆಸ್ ಬಂಗಾಲದಲ್ಲಿ ಅಧಿಕಾರದಲ್ಲಿದೆಯೇ ಅಥವಾ ಬಾಂಗ್ಲಾದೇಶದಲ್ಲಿ ?

ಬಂಗಾಲಿ ಹಿಂದೂಗಳ ಮೇಲಿನ ದೌರ್ಜನ್ಯದ ವಿರುದ್ಧ ಧ್ವನಿಯೆತ್ತುವವರ ಟ್ವಿಟರ್ ಖಾತೆ ತಾತ್ಕಾಲಿಕ ಬಂದ್

ಬಂಗಾಲದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯದ ಬಗ್ಗೆ ಟ್ವಿಟರ್ ಈ ಸಾಮಾಜಿಕ ಜಾಲತಾಣದಲ್ಲಿ ಧ್ವನಿ ಎತ್ತುವ ‘ಸ್ಟೋರೀಸ್ ಆಫ್ ಬಂಗಾಲಿ ಹಿಂದೂಸ್’ ಹೆಸರಿನ ಬಳಕೆದಾರರ ಖಾತೆಯನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ.

ಬೆಂಗಳೂರಿನಲ್ಲಿ ೫೦ ವರ್ಷ ಹಳೆಯ ಶ್ರೀ ಚಾಮುಂಡೇಶ್ವರಿ ದೇವಸ್ಥಾನ ತೆರವು ಮಾಡಲು ಬಂದಿದ್ದ ರೇಲ್ವೆ ಅಧಿಕಾರಿಗಳ ಪ್ರಯತ್ನವು ಹಿಂದೂಗಳ ಸಂಘಟನೆಯಿಂದ ವಿಫಲ

ವಸಂತನಗರದ ಕಂಟೋನ್ಮೆಂಟ್ ರೇಲ್ವೆ ನಿಲ್ದಾಣದಿಂದ ೨೦೦ ಮೀಟರ್ ದೂರದಲ್ಲಿರುವ ಶ್ರೀ ಚಾಮುಂಡೇಶ್ವರಿ ದೇವಸ್ಥಾನವು ಅನಧಿಕೃತ ಎಂದು ತೆರವು ಮಾಡುವ ರೇಲ್ವೆ ಅಧಿಕಾರಿಗಳ ಕ್ರಮದ ವಿರುದ್ಧ ಹಿಂದೂ ಸಂಘಟನೆಗಳು ಆಂದೋಲನ ಮಾಡಿದರು.

ಮುಖ್ಯ ಅರ್ಚಕರು ‘ಹಲಾಲ್’ ಬೆಲ್ಲದ ಬಗ್ಗೆ ತಮ್ಮ ಅಭಿಪ್ರಾಯ ಮಂಡಿಸಬೇಕು ! – ಕೇರಳ ಉಚ್ಚ ನ್ಯಾಯಾಲಯದ ಆದೇಶ

ಶಬರಿಮಲೈ ದೇವಸ್ಥಾನದ ‘ಅರಾವಣಾ’ ಮತ್ತು ‘ಅಪ್ಪಪಂ’ ನೈವೇದ್ಯಗಳನ್ನು ತಯಾರಿಸಲು ‘ಹಲಾಲ್’ ಬೆಲ್ಲವನ್ನು ಬಳಸಲಾಗುತ್ತಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳ ಉಚ್ಚ ನ್ಯಾಯಾಲಯದಲ್ಲಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯವು ದೇವಸ್ಥಾನದ ಪ್ರಧಾನ ಅರ್ಚಕರಿಗೆ ಈ ಕುರಿತು ತಮ್ಮ ಅಭಿಪ್ರಾಯ ವ್ಯಕ್ತಪಡಿಸುವಂತೆ ಆದೇಶಿಸಿದೆ.

ಭಾರತೀಯ ಕ್ರಿಕೆಟ್ ಆಟಗಾರರಿಗೆ ಹಲಾಲ್ ಮಾಂಸ ನೀಡುವ ನಿರ್ಧಾರಕ್ಕೆ ಟ್ವಿಟರ್ ಮೂಲಕ ಧರ್ಮಪ್ರೇಮಿಗಳಿಂದ ವಿರೋಧ

ಭಾರತ ಮತ್ತು ನ್ಯೂಜಿಲ್ಯಾಂಡ್ ಈ ದೇಶದ ಕ್ರಿಕೆಟ್ ತಂಡದಲ್ಲಿ ಸರಣಿ ಪಂದ್ಯದ ಆಯೋಜನೆ ಮಾಡಲಾಗಿದೆ. ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯು ಈ ಕಾಲಾವಧಿಯಲ್ಲಿ ಭಾರತೀಯ ಆಟಗಾರರಿಗೆ ಆಹಾರದ ಬಗ್ಗೆ ಪಟ್ಟಿ ತಯಾರಿಸಿದೆ. ಅದರಲ್ಲಿ ಗೋಮಾಂಸ ಮತ್ತು ಹಂದಿಯ ಮಾಂಸ ಕೈಬಿಡಲಾಗಿದೆ, ಆದರೆ ಬೇರೆ ಯಾವುದೇ ಮಾಂಸವು ‘ಹಲಾಲ್’ ಮಾಂಸ ಇರಲಿದೆ, ಎಂದಿದೆ.