ಡಿ.ಎಮ್.ಕೆ ಸರಕಾರದಿಂದ ಒಂದು ದೇವಸ್ಥಾನದ ಧಾರ್ಮಿಕ ಪರಿಷತ್ತಿನ ಆಯೋಜನೆಗೆ ನಿರ್ಬಂಧ !

ತಮಿಳುನಾಡಿನ ಕನ್ಯಾಕುಮಾರಿಯ ಮಂಡಯಿಕ್ಕಡು ಭಗವತಿ ಅಮ್ಮನ ದೇವಸ್ಥಾನದಲ್ಲಿನ ಘಟನೆ !

ಚೆನ್ನೈ – ತಮಿಳುನಾಡಿನ ಕನ್ಯಾಕುಮಾರಿಯ ಮಂಡಯಿಕ್ಕಡೂ ಭಗವತಿ ಅಮ್ಮನ ದೇವಸ್ಥಾನದಲ್ಲಿ ‘ಹೈಂದವ ಸೇವಾ ಸಂಗಮ್’ ಈ ಹಿಂದೂ ಸಂಘಟನೆಗೆ ಧಾರ್ಮಿಕ ಪರಿಷತ್ತು ಆಯೋಜಿಸಲು ಡಿ.ಎಮ್.ಕೆ ಸರಕಾರವು ನಿರ್ಬಂಧ ಹೇರಿದೆ. ಈ ದೇವಸ್ಥಾನದಲ್ಲಿ ಕಳೆದ 89 ವರ್ಷಗಳಿಂದ ಈ ಪರಿಷತ್ತು ಆಯೋಜಿಸಲಾಗುತ್ತಿತ್ತು. ಬ್ರಿಟಿಶರ ಅಧಿಕಾರಾವಧಿಯಲ್ಲಿ ಹಿಂದೂಗಳಿಗೆ ಧರ್ಮ ಶಿಕ್ಷಣ ನೀಡುವುದು ಮತ್ತು ಕ್ರೈಸ್ತ ಮಿಶನರಿಗಳಿಂದ ಹಿಂದೂಗಳ ಮತಾಂತರ ತಡೆಯುವುದೇ ಈ ಪರಿಷತ್ತನ್ನು ಆಯೋಜಿಸುವ ಉದ್ದೇಶವಾಗಿತ್ತು.

1936 ರಿಂದ ಯಾವುದೇ ಅಡೆತಡೆಗಳಿಲ್ಲದೇ ಈ ಪರಿಷತ್ತನ್ನು ದೇವಸ್ಥಾನದಲ್ಲಿ ಆಯೋಜಿಸಲಾಗುತ್ತಿತ್ತು; ಆದರೆ ಈ ವರ್ಷ ಡಿ.ಎಮ್.ಕೆ ಸರಕಾರವು, ‘ದೇವಸ್ಥಾನದಲ್ಲಿ ಯಾವುದೇ ರೀತಿಯ ಖಾಸಗಿ ಕಾರ್ಯಕ್ರಮಗಳನ್ನು ಆಯೋಜಿಸಬಾರದು’, ಎಂದು ಹೇಳಿ ಈ ಪರಿಷತ್ತಿಗೆ ಅನುಮತಿಯನ್ನು ನಿರಾಕರಿಸಿದೆ. ‘ಹೈಂದವ ಸೇವಾ ಸಂಗಮ’ವು ಪರಿಷತ್ತಿನ ಆಯೋಜನೆಯನ್ನು ಮಾಡಿ ಕಾರ್ಯಕ್ರಮದ ಪತ್ರಿಕೆಯನ್ನು ಪ್ರಸಾರ ಕೂಡ ಮಾಡಿತ್ತು. ಅದಕ್ಕಾಗಿ ಮಂಟಪವನ್ನು ಕೂಡ ನಿರ್ಮಿಸಲಾಗಿತ್ತು; ಆದರೆ ಸರಕಾರವು ಕೊನೆಯ ಕ್ಷಣದಲ್ಲಿ ಪರಿಷತ್ತಿಗೆ ಅನುಮತಿ ನಿರಾಕರಿಸಿದೆ.

ಸಂಪಾದಕೀಯ ನಿಲುವು

ತಮಿಳುನಾಡಿನ ಡಿ.ಎಮ್.ಕೆ ಸರಕಾರದ ಹಿಂದೂದ್ವೇಷ ! ತಮಿಳುನಾಡಿನಲ್ಲಿ ಡಿ.ಎಮ್.ಕೆ ಸರಕಾರ ಅಧಿಕಾರಕ್ಕೆ ಬಂದಾಗಿನಿಂದ ಹಿಂದೂವಿರೋಧಿ ಚಟುವಟಿಕೆಗಳು ಹೆಚ್ಚಾಗುತ್ತಿವೆ. ಪರಿಣಾಮಕಾರಿ ಹಿಂದೂ ಸಂಘಟನೆಯಿಂದಲೇ ಅವುಗಳನ್ನು ತಡೆಯಲು ಸಾಧ್ಯ !