ಬ್ರಿಸ್ಬೇನ್ (ಆಸ್ಟ್ರೇಲಿಯಾ) ಇಲ್ಲಿಯ ದೇವಸ್ಥಾನದ ಮೇಲೆ ಖಲಿಸ್ತಾನಿಗಗಳು ನಡೆಸಿದ ದಾಳಿಯನ್ನು ಖಂಡಿಸಲು ೧ ಸಾವಿರ ಹಿಂದೂಗಳಿಂದ ಆಂದೋಲನ !

ಬ್ರಿಸ್ಬೇನ್ ನ ಹಿಂದೂಗಳಿಗೆ ಅಭಿನಂದನೆ ! ಖಲಿಸ್ತಾನಿಗಳ ವಿರುದ್ಧ ಎಲ್ಲಾ ಕಡೆಯ ಹಿಂದೂಗಳು ಬ್ರಿಸ್ಬೆನ್ ನಲ್ಲಿನ ಹಿಂದೂಗಳ ಆದರ್ಶವನ್ನು ಇಟ್ಟುಕೊಳ್ಳಬೇಕು !

ಬ್ರಿಸ್ಬೇನ್ (ಆಸ್ಟ್ರೇಲಿಯಾ) – ಖಲಿಸ್ತಾನಿಗಳು ಇಲ್ಲಿಯ ಲಕ್ಷ್ಮಿ ನಾರಾಯಣ ದೇವಸ್ಥಾನದ ಮೇಲೆ ನಡೆಸಿದ ದಾಳಿಯನ್ನು ಖಂಡಿಸಿ ಮಾರ್ಚ್ ೨೬ ರಂದು ೧ ಸಾವಿರಕ್ಕೂ ಹೆಚ್ಚಿನ ಹಿಂದೂಗಳು ಒಟ್ಟಾಗಿ ಸೇರಿ ಪ್ರತಿಭಟನೆ ನಡೆಸಿದರು. ಹಿಂದೂಗಳು ಸಾಂಪ್ರದಾಯಿಕ ಉಡುಪು ಧರಿಸಿ ಕೈಯಲ್ಲಿ ರಾಷ್ಟ್ರಧ್ವಜ ಹಿಡಿದಿದ್ದರು. ಇತ್ತೀಚೆಗೆ ಬ್ರೇಸ್ಬೇನ್ ದಲ್ಲಿಯ ಭಾರತೀಯ ರಾಯಭಾರಿ ಕಚೇರಿಯ ಮೇಲೆ ಕೂಡ ಖಲಿಸ್ತಾನಿಗಳು ದಾಳಿ ನಡೆಸಿದ್ದರು.

ಆಸ್ಟ್ರೇಲಿಯಾದಲ್ಲಿನ ಹಿಂದೂಗಳ ದೇವಸ್ಥಾನದ ಮೇಲೆ ಕಳೆದ ಕೆಲವು ಸಮಯದಿಂದ ನಡೆದಿರುವ ದಾಳಿಗಳು !

ಜನವರಿ ೨೦೨೩ : ಮೆಲಬರ್ನ್ ನಗರದ ಹತ್ತಿರ ಇರುವ ಮಿಲ್ ಪಾರ್ಕ್ ಪ್ರದೇಶದಲ್ಲಿನ ಸ್ವಾಮಿ ನಾರಾಯಣ ದೇವಸ್ಥಾನದ ಮೇಲೆ ದಾಳಿ

ಜನವರಿ ೨೦೨೩ : ಮೆಲಬರ್ನ ನಗರದಲ್ಲಿನ ಅಲ್ಬರ್ಟ್ ಪಾರ್ಕನಲ್ಲಿನ ಇಸ್ಕಾನ ಹರೇಕೃಷ್ಣ ದೇವಸ್ಥಾನದ ಮೇಲೆ ಹಿಂದೂ ವಿರೋಧಿ ಬರಹ.