Indian Culture Restore: ಭಾರತ ತನ್ನ ಮಹಾನ್ ಹಿಂದೂ ಸಂಸ್ಕೃತಿ ಪುನರ್ಸ್ಥಾಪಿಸಬೇಕು ! – ಅಲೆಕ್ಸಾಂಡರ್ ಡುಗಿನ್, ಪುತಿನ್ ಇವರ ರಾಜಕೀಯ ಗುರು

ಅಲೆಕ್ಸಾಂಡರ್ ಡುಗಿನ್, ಪುತಿನ್ ಇವರ ರಾಜಕೀಯ ಗುರು

ಮಾಸ್ಕೋ – ರಷ್ಯಾದ ರಾಷ್ಟ್ರಾಧ್ಯಕ್ಷ ವ್ಲಾದೀಮರ್ ಪುತಿನ್ ಇವರ ರಾಜಕೀಯ ಗುರು ಅಲೆಕ್ಸಾಂಡರ್ ಡುಗಿನ್ ಇವರು, ಭಾರತಕ್ಕೆ ತನ್ನ ಮಹಾನ ಹಿಂದೂ ಸಂಸ್ಕೃತಿಯ ಪುನರುತ್ಥಾನ ಮಾಡಲು ಕರೆ ನೀಡಿದ್ದಾರೆ. ರಷ್ಯಾದ ಸರಕಾರಿ ಪ್ರಸಾರ ಮಾಧ್ಯಮಗಳ ಜೊತೆಗೆ ಮಾತನಾಡುವಾಗ ರಷಿಯನ್ ರಾಜಕೀಯ ಶಾಸ್ತ್ರಜ್ಞ ಮತ್ತು ತತ್ವಜ್ಞಾನಿ ಡುಗಿನ್ ಇವರು, ವೈದಿಕ ಸಂಸ್ಕೃತಿಯ ಪರಿಕಲ್ಪನೆ ವ್ಯಾಪಕವಾಗಿದೆ ಮತ್ತು ಅದನ್ನು ಪುನರ್ ಸ್ಥಾಪಿಸುವುದರಿಂದ ಬಹುಧ್ರುವೀಯ ವಿಶ್ವದ ಸ್ಥಾಪನೆ ಮಾಡಲು ಸಹಾಯವಾಗುವುದು. ರಷ್ಯಾದಿಂದ ಅಮೆರಿಕಾದ ವಿರುದ್ಧ ವಿಕೇಂದ್ರಿತ ವ್ಯವಸ್ಥೆಗೆ ನಿರಂತರ ಬೆಂಬಲ ನೀಡಲಾಗುತ್ತಿದೆ. ಇದರಿಂದ ಅಮೆರಿಕಾದ ಪ್ರಭಾವಕ್ಕೆ ಅಪಾಯ ಉಂಟಾಗಿದೆ.

ಡುಗೀನ್ ಇವರು ಅಖಂಡ ಭಾರತದ ಬಗ್ಗೆ ಕೂಡ ಮಾತನಾಡಿದರು !

ಈ ವರ್ಷ ಏಪ್ರಿಲ್ ನಲ್ಲಿ ಡುಗಿನ್ ಇವರು, ಭಾರತ ನಮ್ಮ ಮುಂದೆಯೇ ಒಂದು ಹೊಸ ಅಂತರಾಷ್ಟ್ರೀಯ ಕೇಂದ್ರವೆಂದು ಉದಯಕ್ಕೆ ಬರುತ್ತಿದೆ. ಭಾರತೀಯ ಆರ್ಥಿಕವು ವೇಗವಾಗಿ ಬೆಳೆಯುತ್ತಿರುವುದರ ಕುರಿತು ಅವರು ತಮ್ಮ ಲೇಖನದಲ್ಲಿ ಆನಂದ ವ್ಯಕ್ತಪಡಿಸಿದ್ದಾರೆ. ಡುಗಿನ್ ಇವರು, ಪ್ರಸ್ತುತ ಭಾರತೀಯ ಮೂಲದ ಜನರು ಜಗತ್ತಿನಾದ್ಯಂತ ಬಹುದೊಡ್ಡ ಪಾತ್ರನಿರ್ವಹಿಸುತ್ತಿದ್ದಾರೆ ಎಂದು ಬರೆದಿದ್ದಾರೆ. ಭಾರತದ ಆರ್ಥಿಕ ವಿಕಾಸ, ಜಾಗತೇಕ ಪ್ರಭಾವ, ರಾಜಕೀಯ ಬದಲಾವಣೆ, ಸಂಸ್ಕೃತಿಕ ಮತ್ತು ವೈಚಾರಿಕ ಬದಲಾವಣೆ, ವಸಾಹತುಶಾಹಿ ಮತ್ತು ಸಾರ್ವಭೌಮತ್ವ, ಭೂರಾಜಕೀಯ ನೀತಿ ಇವುಗಳ ಉದಾಹರಣೆ ನೀಡಿ ಅವರು ಭಾರತದ ಹೆಚ್ಚುತ್ತಿರುವ ಮಹತ್ವ ಸ್ಪಷ್ಟಪಡಿಸಿದ್ದರು.

ಅಲೆಕ್ಸಾಂಡರ್ ಡುಗಿನ್ ಯಾರು ?

ಅಲೆಕ್ಸಾಂಡರ್ ಡುಗಿನ್ ಇವರ ಪೂರ್ಣ ಹೆಸರು ಅಲೆಕ್ಸಾಂಡರ್ ಗ್ಯಾಲಿವಿಚ್ ಡುಗಿನ್ ಎಂದಾಗಿದೆ. ರಷ್ಯಾದಲ್ಲಿನ ಓರ್ವ ರಾಜಕೀಯ ತತ್ವಜ್ಞಾನಿ, ವಿಶ್ಲೇಷಕರು ಮತ್ತು ರಣನೀತಿಕಾರರೆಂದು ಗುರುತಿಸಿಕೊಂಡಿದ್ದಾರೆ. ಪಶ್ಚಿಮಾತ್ಯ ದೇಶ ‘ಡುಗಿನ ಇವರನ್ನು ಫ್ಯಾಸಿಸ್ಟ್ ವಿಚಾರಧಾರೆಯ ಕಟ್ಟರ ಬೆಂಬಲಿಗ’ರೆಂದು ಆರೋಪಿಸುತ್ತಾರೆ. ಪಶ್ಚಿಮಾತ್ಯ ದೇಶಗಳಲ್ಲಿ ಅಲೆಕ್ಸಾಂಡರ್ ಡುಗಿನ್ ಇವರನ್ನು ರಷ್ಯಾದ ರಾಷ್ಟ್ರಾಧ್ಯಕ್ಷ ಬ್ಲಾದೀಮೀರ್ ಪುತಿನ್ ಇವರ ರಾಜಕೀಯ ಗುರು ಎಂದು ನಂಬಿದ್ದಾರೆ.