ವಾಷಿಂಗ್ಟನ್ – ಅಮೇರಿಕದಲ್ಲಿ ಹೊಸದಾಗಿ ಆಯ್ಕೆ ಆಗಿರುವ ರಾಷ್ಟ್ರಾಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇತ್ತೀಚಿಗೆ, ತಮ್ಮ ಸರಕಾರ ರಾಷ್ಟ್ರೀಯ ತುರ್ತು ಪರಿಸ್ಥಿತಿ ಘೋಷಿಸುವುದು ಮತ್ತು ದೇಶದಲ್ಲಿ ಅಕ್ರಮವಾಗಿ ವಾಸಿಸುವ ವಲಸಿಗರ ವಿರುದ್ಧ ಸೈನ್ಯ ಪಡೆಯನ್ನು ಉಪಯೋಗಿಸಿ ಅವರನ್ನು ದೇಶದಿಂದ ಹೊರ ಹಾಕುವುದೆಂದು ‘ಎಕ್ಸ್ ” ನಲ್ಲಿ ಪೋಸ್ಟ್ ಮಾಡಿ ಮಾಹಿತಿ ನೀಡಿದ್ದಾರೆ.
೧. ಟ್ರಂಪ್ ಸರಕಾರ ಮೊದಲು ೪ ಲಕ್ಷದ ೨೫ ಸಾವಿರ ಅಕ್ರಮ ವಲಸಿಗರನ್ನು ಹೊರ ಹಾಕುವುದು. ಈ ವಲಸಿಗರ ವಿರುದ್ಧ ದೂರು ದಾಖಲಾಗಿವೆ. ಇದಲ್ಲದೆ ಎಲ್ಲಾ ವಲಸಿಗರನ್ನು ಕಾನೂನಿನಡಿ ನಮೂದನೆಯ ಪ್ರಕಾರ ಯೋಗ್ಯ ಪ್ರಕ್ರಿಯೆ ಪಾಲನೆ ಮಾಡಲು ಅವಕಾಶ ನೀಡಲಾಗುವುದು ಎಂದು ಮಾಜಿ ಪೊಲೀಸ್ ಅಧಿಕಾರಿ ಟಾಮ್ ಹೋಮನ್ ತಿಳಿಸಿದರು.
೨ . ಅಮೇರಿಕಾದಲ್ಲಿ ಅಕ್ರಮವಾಗಿ ನುಸುಳಿರುವ ಜನರನ್ನು ಒಮ್ಮೆಲೆ ಹೊರ ಹಾಕಿದರೆ ಅಮೇರಿಕಾದ ಆರ್ಥಿಕ ವ್ಯವಸ್ಥೆಯ ಮೇಲೆ ಗಂಭೀರ ಪರಿಣಾಮವಾಗಬಹುದು. ಈ ನಿರ್ಣಯದಿಂದ ಕಟ್ಟಡ ಕಾಮಗಾರಿ, ಕೃಷಿ ಮುಂತಾದ ಕ್ಷೇತ್ರಗಳಲ್ಲಿ ಮನುಷ್ಯ ಬಲದ ಗಂಭೀರ ಸಮಸ್ಯೆ ನಿರ್ಮಾಣವಾಗಬಹುದೆಂದು,’ ಅಮೇರಿಕನ್ ಇಮಿಗ್ರಶನ್ ಕೌನ್ಸಿಲ್ ‘ ಹೇಳಿದೆ.
ಸಂಪಾದಕೀಯ ನಿಲುವುಭಾರತವು ಅಮೇರಿಕಾದಿಂದ ಕಲಿಯಬೇಕು ! |