ಶ್ರೀನಗರ (ಜಮ್ಮು ಮತ್ತು ಕಾಶ್ಮೀರ) – ಉತ್ತರ ಪ್ರದೇಶದ ದೇವಬಂದ್‌ನಲ್ಲಿ ಪೊಲೀಸರ ಮೇಲೆ ಗ್ರೆನೇಡ್ ದಾಳಿ ನಡೆಸಿದ ಪ್ರಕರಣದ ಆರೋಪಿ ನಜೀರ ಅಹ್ಮದ ಅಲಿಯಾಸ್ ಜಾವೇದ ಇಕ್ಬಾಲ್ ನನ್ನು ಆಗ ಬಂಧಿಸಲಾಗಿತ್ತು. ತದನಂತರ ಅವನಿಗೆ ಜಾಮೀನು ಸಿಕ್ಕ ಬಳಿಕ ಪರಾರಿಯಾಗಿದ್ದನು. (ಇಂತಹವರಿಗೆ ಶೀಘ್ರ ಗತಿ ನ್ಯಾಯಾಲಯದಲ್ಲಿ ವಿಚಾರಣೆಗೊಳಪಡಿಸಿ ಮರಣದಂಡನೆ ವಿಧಿಸಲು ಈಗ ಪ್ರಯತ್ನಗಳು ನಡೆಯಬೇಕು, ಆಗ ಮಾತ್ರ ಇಂತಹ ಘಟನೆಗಳು ನಿಲ್ಲಬಹುದು ! – ಸಂಪಾದಕರು) ಈಗ ಸುಮಾರು 31 ವರ್ಷಗಳ ನಂತರ ಅವನನ್ನು ಶ್ರೀನಗರದಿಂದ ಬಂಧಿಸಲಾಗಿದೆ. 31 ವರ್ಷಗಳಿಂದ ಹೆಸರು, ವೇಷ ಮತ್ತು ಸ್ಥಾನವನ್ನು ಬದಲಾಯಿಸಿಕೊಂಡು ಎಲ್ಲರನ್ನು ವಂಚಿಸುತ್ತಿರುವುದು ಕಂಡು ಬಂದಿದೆ. ವಿಶೇಷವೆಂದರೆ ಅವನು ಜಮ್ಮು ಮತ್ತು ಕಾಶ್ಮೀರದ ವಿಧಾನಸಭಾ ಚುನಾವಣೆಯಲ್ಲೂ ಭಾಗವಹಿಸಿದ್ದನು. ಅವನು ಆಮ್ ಆದ್ಮಿ ಪಕ್ಷದ ಅಭ್ಯರ್ಥಿಯಾಗಿದ್ದನು.